ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂಭತ್ನಾಳ: ದಲಿತ ಮುಖಂಡರಿಂದ ಪ್ರತಿಭಟನೆ

Last Updated 16 ಡಿಸೆಂಬರ್ 2013, 5:12 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಯಂಭತ್ನಾಳ ಗ್ರಾಮದಲ್ಲಿರುವ ಅಂಬೇಡ್ಕರ್‌ ವೖತ್ತದಲ್ಲಿ ಭಾನುವಾರ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಘಟನೆ ಜರುಗಿದೆ.

ಡಾ. ಅಂಬೇಡ್ಕರ್‌ ವೖತ್ತದ ಧ್ವಜದ ಕಟ್ಟೆಯಲ್ಲಿ ಚಪ್ಪಲಿಗಳನ್ನು ಹಾರದಂತೆ ಪೋಣಿಸಿ ಅದರ ಮೇಲೆ ಇಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ವೃತ್ತದ ಸುತ್ತ ಜಮಾಯಿಸಿ ದರು.

ದಲಿತ ಸಂಘಟನೆಗಳ ಮುಖಂಡರು ಅಲ್ಲಿಗೆ ಆಗಮಿಸಿ ಚಪ್ಪಲಿಗಳನ್ನು ಇಟ್ಟಿರುವ ದುಷ್ಕರ್ಮಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯು ತಪ್ಪಿಸ್ಥತರನ್ನು ಕೂಡಲೇ ಕಂಡು ಹಿಡಿದು ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.
ಅಲ್ಲಿ ಕೆಲ ಹೊತ್ತು ಪ್ರಕ್ಷುಬ್ಧ ವಾತಾ ವರಣ ತಲೆದೋರಿತು. ಸುದ್ದಿ ತಿಳಿಯುತ್ತಿದ್ದಂತೆ ಬಸವನ ಬಾಗೇವಾಡಿ ಸಿಪಿಐ ಚಂದ್ರಕಾಂತ ನಂದರೆಡ್ಡಿ, ಮನಗೂಳಿ ಪಿಎಸ್‌ಐ ಬಸವರಾಜ ಪಾಟೀಲ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರತಿಭಟನೆಗೆ ಮುಂದಾಗಿದ್ದ ದಲಿತ  ಮುಖಂಡರನ್ನು ಹಾಗೂ ಗ್ರಾಮಸ್ಥರ ಮನವೊಲಿಸಿ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು. ಕೂಡಲೇ ತಪ್ಪಿಸ್ಥತರನ್ನು ಕಂಡು ಹಿಡಿದು ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆಗೆ ಮುಂದಾಗಿದ್ದ ಮುಖಂಡರು, ಜನರು ಪ್ರತಿಭಟನೆ ಹಿಂದೆಗೆದುಕೊಂಡರು. ಎರಡು ದಿನಗಳಲ್ಲಿ ಈ ಘಟನೆಗೆ ಕಾರಣ ರಾದವರನ್ನು ಬಂಧಿಸಿದೇ ಹೋದರೆ ಯಂಬತ್ನಾಳ ಬಂದ್ ಗೆ ಕರೆ ನೀಡುವು ದಾಗಿ ದಲಿತ ಪ್ರಮುಖರು ಎಚ್ಚರಿಕೆ ನೀಡಿದರು.

ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ರಾಜು ಫಿರಂಗಿ, ಮಹಾಂತೇಶ ಸಾಸಬಾಳ, ಪರುಶು ರಾಮ ದಿಂಡವಾರ, ಸುಖದೇವ ಕಾಂಬಳೆ, ಶರಣು ಜಮಖಂಡಿ, ಸಂತೋಷ ಶಹಾಪೂರ, ದಿಲೀಪ್ ಯಂಬತ್ನಾಳ ಸೇರಿದಂತೆ ಅನೇಕರು ಇದ್ದರು.ನಂತರ ಡಾ. ಅಂಬೇಡ್ಕರ್ ಧ್ವಜ ಸ್ತಂಭದಲ್ಲಿ ಇಟ್ಟಿದ್ದ ಚಪ್ಪಲಿಗಳನ್ನು ಪೊಲೀಸ್ ರ ಸಮ್ಮುಖದಲ್ಲಿ ತೆರವು ಗೊಳಿಸಿ ಅದನ್ನು ಸ್ವಚ್ಛವಾಗಿ ತೊಳೆದು, ದಲಿತ ಮುಖಂಡರು, ಸೇರಿದ್ದ ಜನರು ಪೂಜೆ ಸಲ್ಲಿಸಿದರು. ಈ ಕುರಿತು ತಾಲೂ ಕಿನ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT