ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕೃತ್ತಿನ ಸಮಸ್ಯೆಗಳು

Last Updated 4 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಯ ಕೃತ್ತಿಗೆ (ಲಿವರ್) ಸಂಬಂಧಿಸಿದ ಸಮಸ್ಯೆಗಳು ಎಲ್ಲಾ ವಯೋಮಾನದ ಗುಂಪಿನ ಮೇಲೆ ಪರಿಣಾಮವನ್ನು ಬೀರುವಂತಹ ಮೂರನೆಯ ಅತ್ಯಧಿಕ ಸಾಮಾನ್ಯ ರೋಗವಾಗಿದೆ.

ರೋಗದ ಕಾರಣಗಳು:
*ವೈರಲ್ ಹೆಪಟೈಟಿಸ್ (ಹೆಪಟೈಟಿಸ್ ಎ, ಬಿ, ಸಿ, ಡಿ, ಇ )
* ಮದ್ಯಪಾನ
*ಕ್ಯಾನ್ಸರ್- (ಒಂದೋ ಯಕೃತ್ತಿನಲ್ಲಿ ಪ್ರಾರಂಭವಾದ ಕ್ಯಾನ್ಸರ್-ಪ್ರಥಮ ಯಕೃತ್ತಿನ ಕ್ಯಾನ್ಸರ್ ಅಥವಾ ಇತರ ಅಂಗಗಳಿಂದ ಬಂದಂತಹ ಕ್ಯಾನ್ಸರ್. ಯಾವುದರಲ್ಲಿ ಯಕೃತ್ತು ಒಳಪಡುತ್ತದೋ ಅಂತಹದ್ದು. ಎರಡನೆಯ ತರಹದ  ಕ್ಯಾನ್ಸರ್-ಮೆಟಾಸ್ಟಾಟಿಕ್ ಕ್ಯಾನ್ಸರ್)
*ಔಷಧಿಗಳು-(ಪ್ಯಾರಾಸಿಟೆಮಾಲ್ ನಂತಹ ಕೆಲವು ಔಷಧಿಗಳ ಅಧಿಕ ಸೇವನೆಯಿಂದ ಯಕೃತ್ತಿಗೆ ಹಾನಿಯುಂಟಾಗಬಹುದು)
*ಜೀವಾಣು ವಿಷಗಳು (ಟಾಕ್ಸಿನ್ಸ್)

ಯಕೃತ್ತಿನ ರೋಗದ ಲಕ್ಷಣಗಳು:
ಸ್ಪಷ್ಟವಾದ ಲಕ್ಷಣಗಳಿಲ್ಲದೆ ತಮ್ಮ ಯಕೃತ್ತಿಗೆ ಹಾನಿಯುಂಟಾಗಬ ಹುದೆಂದು ಜನರು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸಾಮಾನ್ಯವಾಗಿ ಯಕೃತ್ತಿನ ರೋಗವು ಕಾಮಾಲೆಯ ಜೊತೆಯಲ್ಲಿ ಕಂಡುಬರುತ್ತದೆ. ಕಣ್ಣಿನ ಬಿಳಿ ಪೊರೆಯು ಹಳದಿ ಬಣ್ಣಕ್ಕೆ ತಿರುಗುವುದು. ಆದರೆ ಬಹಳಷ್ಟು ಜನರಲ್ಲಿ ಯಕೃತ್ತಿನ ರೋಗ ಕೊನೆಯ ಮಟ್ಟಕ್ಕೆ ಬಂದಾಗಲೂ ಕೂಡಾ ಗುರುತಿಸಬಹುದಾದ ಕಾಮಾಲೆ ಇರುವುದಿಲ್ಲ.

ಯಕೃತ್ತಿನ ತೀವ್ರರೋಗ (ಸಿರೋಸಿಸ್): ಯಾವುದೇ ಯಕೃತ್ತಿನ ರೋಗವು ಯಕೃತ್ತಿಗೆ ದೀರ್ಘವಾದ ಹಾನಿಯಿಂದ ಉಂಟಾಗಿದ್ದರೆ ಅದು ಮುಂದೆ ಹೋಗಿ ಯಕೃತ್ತಿನ ತೀವ್ರರೋಗಕ್ಕೆ ಅಂದರೆ ಸೊರೋಸಿಸ್‌ಗೆ ಕಾರಣವಾಗುತ್ತದೆ.  ಯಕೃತ್ತು ನಿಧಾನವಾಗಿ ಕೆಟ್ಟುಹೋಗುವಂತಹ ಮತ್ತು ತೀವ್ರವಾದ ಗಾಯದಿಂದಾಗಿ ದೋಷಪೂರಿತವಾದ ಕೆಲಸವನ್ನು ಮಾಡುವಂತಹ ಒಂದು ಸ್ಥಿತಿ  ‘ಸಿರೋಸಿಸ್’ನಲ್ಲಿ ಬರುತ್ತದೆ. ಆರೋಗ್ಯವಂತ ಯಕೃತ್ತಿನ ಅಂಗಾಂಶವು ಕಲೆಯಿರುವ ಅಂಗಾಂಶವಾಗಿ ಮಾರ್ಪಾಡಾಗಿ ಯಕೃತ್ತಿನ ಮೂಲಕ ರಕ್ತಸಂಚಾರವನ್ನು ಭಾಗಶಃ ತಡೆಗಟ್ಟುವುದು. ಸೋಕುಜಾಡ್ಯಗಳನ್ನು ತಡೆಗಟ್ಟುವ ಯಕೃತ್ತಿನ ಸಾಮರ್ಥ್ಯವನ್ನು, ರಕ್ತದಿಂದ ಬ್ಯಾಕ್ಟೀರಿಯಾ ಮತ್ತು ವಿಷಗಳನ್ನು ತೆಗೆದುಹಾಕುವುದನ್ನು, ಪೋಷಕ ಪದಾರ್ಥಗಳು, ಹಾರ್ಮೋನುಗಳು ಮತ್ತು ಔಷಧಿಗಳ ಕ್ರಿಯಾ ವಿಧಾನವನ್ನು, ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಣಗೊಳಿಸುವಂತಹ ಪ್ರೋಟೀನುಗಳ ಉತ್ಪಾದನೆಯನ್ನು, ಮೇದಸ್ಸನ್ನು ಹೀರಿಕೊಳ್ಳುವಂತಹ ಪಿತ್ತರಸವನ್ನು ತಯಾರಿಸುವುದು ಅಂದರೆ - ಕೊಲೆಸ್ಟ್ರಾಲ್ ಸೇರಿದಂತೆ - ಮತ್ತು ಮೇದಸ್ಸಿನಲ್ಲಿ ಕರಗುವ ವಿಟಮಿನ್‌ಗಳನ್ನು ಹೀರಿಕೊಳ್ಳಲು ಸಹಾಯಮಾಡುವುದನ್ನೂ ಸಹ ಕಲೆಗಳು ದುರ್ಬಲಗೊಳಿಸುತ್ತವೆ. ಯಕೃತ್ತಿನ ತೀವ್ರವಾದ ರೋಗವು ಕ್ರಮೇಣ ಕ್ಯಾನ್ಸರ್‌ಗೂ ತಿರುಗಬಹುದು.

ಸಿರೋಸಿಸ್ ಕಾರಣಗಳು:
ಹೆಪಟೈಟಿಸ್ ಬಿ.ವೈರಸ್ (ಎಚ್‌ಬಿವಿ) ಮತ್ತು ಹೆಪಟೈಟಿಸ್ ಸಿ. ವೈರಸ್‌ನಿಂದಾಗಿ (ಎಚ್‌ಸಿವಿ) ಬರುವಂತಹ ದೀರ್ಘಕಾಲದ ವೈರಸ್ ಹೆಪಟೈಟಿಸ್ ಭಾರತವನ್ನೂ ಸೇರಿದಂತೆ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಯಕೃತ್ತಿನ ತೀವ್ರ ರೋಗಕ್ಕೆ ಮತ್ತು ಯಕೃತ್ತಿನ ಕ್ಯಾನ್ಸರಿಗೆ ಇರುವಂತಹ ಪ್ರಮುಖ ಕಾರಣ.

ಭಾರತದಲ್ಲಿ ಮದ್ಯಪಾನಕ್ಕೆ ಸಂಬಂಧಿಸಿದ ಯಕೃತ್ತಿನ ರೋಗಗಳು ಹೆಚ್ಚು. ಯಕೃತ್ತಿನಲ್ಲಿ ಮೇದಸ್ಸಿನ ನಿರ್ಮಾಣವು ಸಿರೋಸಿಸ್‌ಗೆ ಕಾರಣವಾಗಿದೆ. ಬೊಜ್ಜು, ಮಧುಮೇಹ, ಪ್ರೋಟೀನಿನ ಕೊರತೆ, ಕಾರ್ಟಿಕೋಸ್ಟೆರೊಯ್ಡಿನ ಚಿಕಿತ್ಸೆ  - ಇವೆಲ್ಲವುಗಳು ಹೆಚ್ಚುತ್ತಿರುವ ಯಕೃತ್ತಿನ ರೋಗಕ್ಕೆ ಕಾರಣಗಳು.

ಚಿಕಿತ್ಸೆ: ಯಕೃತ್ತಿನ ರೋಗದ ನಿರ್ವಹಣೆಯನ್ನು  ಹೆಪಾಲೊಜಿಸ್ಟ್ ಮತ್ತು ಯಕೃತ್ತಿನ ಶಸ್ತ್ರ ಚಿಕಿತ್ಸಕರೇ ಮಾಡಬೇಕು.  ವೈರಲ್ ಹೆಪಾಟೈಟಿಸ್ ಮತ್ತು ಟ್ಯುಮೊರಸ್ಸಿಗಾಗಿ ಚಿಕಿತ್ಸೆಗಳು ಈಗ ದೊರೆಯುತ್ತಿವೆ.ಇವುಗಳ ಚಿಕಿತ್ಸೆಯನ್ನು ಮೊದಲನೆಯ ಹಂತದಲ್ಲಿರುವಾಗಲೇ ಶಸ್ತ್ರಚಿಕಿತ್ಸೆ ಮತ್ತು ಇತರ ಸಹಾಯದಿಂದ ಮಾಡ ಬಹುದು. ಕೊನೆಯ ಹಂತದ ಯಕೃತ್ತಿನ ರೋಗದ ಪರಿಸ್ಥಿತಿಯಲ್ಲಿ ಅಂದರೆ ಯಾವುದು ಸಿರೋಸಿಸ್ ಮತ್ತು ತೀವ್ರ ಯಕೃತ್ತಿನ ವಿಫಲತೆ ಯಿಂದಾಗಿ ಉಂಟಾಗು ವುದೋ ಆಗ ಯಕೃತ್ತಿನ ಕಸಿ ಮಾಡುವುದು ಒಂದೇ ಗುಣಪಡಿ ಸಬಹುದಾದ ಚಿಕಿತ್ಸೆಯಾಗಿದೆ. ಯಕೃತ್ತಿನ ಕಸಿಗಾಗಿ ಸೌಕರ್ಯಗಳು ಭಾರತದಲ್ಲಿನ  ಕೆಲವೊಂದು ಆಯ್ದ ಆಸ್ಪತ್ರೆಗಳಲ್ಲಿ  ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT