ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದಿಂದ ಜ್ಞಾನವೃದ್ಧಿ: ಅಪ್ಪಣ್ಣ ಹೆಗ್ಡೆ

ಅಂಪಾರು: ಐವರು ಕಲಾಸಾಧಕರಿಗೆ ಸನ್ಮಾನ
Last Updated 13 ಡಿಸೆಂಬರ್ 2012, 9:38 IST
ಅಕ್ಷರ ಗಾತ್ರ

ಅಂಪಾರು (ಸಿದ್ದಾಪುರ): ಯಕ್ಷಗಾನ ವೀಕ್ಷಣೆಯಿಂದ ಜ್ಞಾನಾಭಿವೃದ್ಧಿ ಸಾಧ್ಯ ಎಂದು ಬಸ್ರೂರು ಮಹಾಲಿಂಗೇಶ್ವರ ದೇವಳದ ಆಡಳಿತ ಟ್ರಸ್ಟಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

ಅಂಪಾರುವಿನಲ್ಲಿ ಮಂಗಳವಾರ ಕಲಾ ಪೊಷಕರಾದ ಶೈಲಜಾ ಮತ್ತು ಸುಕುಮಾರ ವೈದ್ಯ ದಂಪತಿಗಳ ಷಷ್ಠ್ಯಬ್ಧ ಪೂರ್ತಿ ವರ್ಷಾಚರಣೆ ಅಂಗವಾಗಿ ನಡೆದ ಕಲಾಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಹಿರಿಯರು ಮಕ್ಕಳಿಗೆ ಮಾಡಬೇಕು. ರಾಮಾಯಣ ಮತ್ತು ಮಹಾಭಾರತ ಕಥೆಗಳಲ್ಲಿ ಬರುವ ಪಾತ್ರಗಳನ್ನು ಯಕ್ಷಗಾನಗಳಲ್ಲಿ ಮಾಡಿ ಆಧುನಿಕ ಜಗತ್ತಿಗೆ ಹಿಂದಿನ ಋಷಿ ಪರಂಪರೆಗಳನ್ನು ತೋರ್ಪಡಿಸಲಾಗುತ್ತದೆ. ಈ ಪಾತ್ರಗಳಲ್ಲಿ ಬರುವ ಉತ್ತಮ ವಿಷಯಗಳನ್ನು ಯಕ್ಷಗಾನದ ಮೂಲಕ ಯುವಪರಂಪರೆ ಕಂಡುಕೊಳ್ಳಬೇಕು ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ವಾಸುದೇವ ಅಡಿಗ, ಕರಾವಳಿಯ ಯಕ್ಷಗಾನ ಕಲೆಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದರು.
ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ಕೊಲ್ಲೂರು ಮೂಕಾಂಬಿಕ ದೇವಳದ ಮಾಜಿ ಧರ್ಮದರ್ಶಿ ಸುಕುಮಾರ ಶೆಟ್ಟಿ, ದೇಗುಲಗಳ ನೆಲೆಬೀಡಾದ ಕರಾವಳಿಯಲ್ಲಿ ಧಾರ್ಮಿಕ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕಮಲಶಿಲೆ ದೇವಳದ ಆಡಳಿತ ಟ್ರಸ್ಟಿ ಸಚ್ಚಿದಾನಂದ ಚಾತ್ರ ಶೆಟ್ಟಿಪಾಲು, ಜೆಡಿಎಸ್‌ಮಹಿಳಾ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ವಿ.ಪ್ರಸಾದ್, ಹದ್ದೂರು ರಾಜೀವ ಶೆಟ್ಟಿ, ಗಣಪಯ್ಯ ಶೆಟ್ಟಿ ರತ್ನಾಕರ ಶೆಟ್ಟಿ ಮಾತನಾಡಿದರು.

ಪಳ್ಳಿ ಕಿಶನ್ ಹೆಗ್ಡೆ, ತಾರಾನಾಥ ಶೆಟ್ಟಿ, ಶೈಲಜಾ ವೈದ್ಯ, ಸುಕುಮಾರ ವೈದ್ಯ, ಮೋಹನ್ ವೈದ್ಯ ವೇದಿಕೆಯಲ್ಲಿದ್ದರು.ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ದಾರೇಶ್ವರ, ರಾಘವೇಂದ್ರ ಮಯ್ಯ ಹಾಲಾಡಿ, ಬಳ್ಕೂರು ಕೃಷ್ಣಯಾಜಿ, ಹಳ್ಳಾಡಿ ಜಯರಾಮ ಶೆಟ್ಟಿ, ರಮೇಶ ಭಂಡಾರಿ ಮೂರೂರು ಮತ್ತು ಶಶಿಕಾಂತ ಶೆಟ್ಟಿ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಬಳ್ಕೂರು ಕೃಷ್ಣಯಾಜಿ ಅವರು ಮಾತನಾಡಿದರು. ಅಂಪಾರು ಗ್ರಾ.ಪಂ. ಅಧ್ಯಕ್ಷ ಎ.ಕಿರಣ್ ಹೆಗ್ಡೆ ಇದ್ದರು.

ತೋನ್ಸೆ ಪುಷ್ಕಳ್ ಕುಮಾರ ಸಂಗೀತ ರಸಸಂಜೆ ಮತ್ತು ಹಾಸ್ಯ ಸಿಂಚನ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಭಾರ್ಗವಿ ತಂಡದ ಭಾವಯೋಗ ನೃತ್ಯ ಕಾರ್ಯಕ್ರಮಗಳು ಜರಗಿತು.ಸಾಲಿಗ್ರಾಮ ಮೇಳದ ರಂಗನಾಯಕಿ ಯಕ್ಷಗಾನ ಪ್ರದರ್ಶನ ನಡೆಯಿತು. ಸುಬ್ರಹ್ಮಣ್ಯ ದಾರೇಶ್ವರ ಅತಿಥಿಗಳಾಗಿದ್ದರು.

ಸಂಘಟಕ ಉದ್ಯಮಿ ದಿನೇಶ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ಶೆಟ್ಟಿ ಮೂಡುಬಗೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಮೇಶ ವೈದ್ಯ, ಪ್ರಾಂಜಲಿ ದಿನೇಶ್ ವೈದ್ಯ, ಚೈತ್ರಾ ದೀಪಕ್, ಉಮೇಶ ವೈದ್ಯ, ಜ್ಯೋತಿ ಗುರುರಾಜ್, ದೀಪಕ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT