ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಡೋಣ: ಸಡಗರದ ಊರಜಾತ್ರೆ

Last Updated 9 ಜುಲೈ 2013, 12:49 IST
ಅಕ್ಷರ ಗಾತ್ರ

ಕಾರಟಗಿ: ಸಮೀಪದ ಯರಡೋಣ ಗ್ರಾಮದಲ್ಲಿ ದ್ಯಾವಮ್ಮ ದೇವಿ ಜಾತ್ರೆ ಎಂಬ ಊರಜಾತ್ರೆ ನಡೆಯಲಿದೆ. ಶತಮಾನದ ಬಳಿಕ ನಡೆಯುವ ಜಾತ್ರೆಗಾಗಿ ಇಡೀ ಗ್ರಾಮ ಸಡಗರದಲ್ಲಿ ಮುಳುಗಿದೆ.

ಮಣ್ಣೆತ್ತಿನ ಅಮಾವಾಸ್ಯೆಯಾದ ಸೋಮವಾರ ಗ್ರಾಮದ ಸೀಮೆಯ ಅಷ್ಟ ದಿಕ್ಕುಗಳಲ್ಲಿ ಹಾಲೆರೆಯುವ ಕಾರ್ಯಕ್ರಮವೆ ಜಾತ್ರೆಯ ಸಂಭ್ರಮದಂತೆ ನಡೆಯಿತು.

ನಾಗರಿಕರು, ಮಹಿಳೆಯರು, ಚಿಣ್ಣರು ಸಕಲ ವಾದ್ಯಮೇಳಗಳೊಂದಿಗೆ ಗ್ರಾಮದ ತಳವಾರರು, ವಾಲೇಕಾರರ ನೇತೃತ್ವದಲ್ಲಿ ಪಾಲ್ಗೊಂಡು ಭಕ್ತಿಯನ್ನು ಸಮರ್ಪಿಸಿದರು.

ಗ್ರಾಮದ ಗಡಿ ಆರಂಭವಾಗುವಲ್ಲಿ ಕಾವಲು ಕಾಯಲಾಗುತ್ತಿತ್ತು. ಗ್ರಾಮದಿಂದ ಹೊರೆಗೆ ಯಾರೂ ಹೋಗುವಂತಿಲ್ಲ, ಒಳಗೂ ಬರುವಂತಿಲ್ಲ. ಬಂದರೆ ಇಡಿ ದಿನ ಗ್ರಾಮದಲ್ಲಿರಬೇಕು ಅವರಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಶಾಲೆಗೆ ಅಘೋಷಿತ ರಜೆ, ಸಾರಿಗೆ ವ್ಯವಸ್ಥೆ ಬಂದ್ ಹೀಗೆ ಗ್ರಾಮದ ಕಾನೂನುಗಳೆ ಕಡ್ಡಾಯ.

ದ್ಯಾವಮ್ಮ ದೇವಿಯ ತವರು ಗ್ರಾಮ ಯರಡೋಣ. ಕಳೆದ ತಿಂಗಳು ಬೇವಿನಾಳ ಗ್ರಾಮದಿಂದ ಕರೆತರಲಾಗಿದೆ. ಜಾತ್ರೆಯ ಬಳಿಕ ಸಂಪ್ರದಾಯದಂತೆ ಕಳುಹಿಸಿಕೊಡಲಾಗುವುದು ಎಂದು ವರ್ತಕ ಶಿವಶರಣೆಗೌಡ ಹೇಳುತ್ತಾರೆ.

ಗ್ರಾಮದ ಹುಲಿಗೆಪ್ಪ ನಾಯಕ, ರಾಮಸಿಂಗ್, ಸೋಮಪ್ಪ, ಹುಸೇನಸಾಬ, ನಾಗನಗೌಡ, ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ ದ್ಯಾವಮ್ಮ ದೇವಿಯ ಜಾತ್ರೆ ಗ್ರಾಮದಲ್ಲಿ ಒಗ್ಗಟ್ಟನ್ನು ತಂದಿದೆ. ಎಲ್ಲರೂ ಮನೆಯ ಮದುವೆ ಎಂಬಂತೆ ಉತ್ಸವದಲ್ಲಿ ಪಾಲ್ಗೊಳ್ಳುವೆವು. ಪ್ರಾಣಿಬಲಿ ಇಲ್ಲದ ಊರಜಾತ್ರೆ ಎಂಬುದು ವಿಶೇಷ. ಹಬ್ಬದ ವಾತಾವರಣ ಗ್ರಾಮದಲ್ಲಿದ್ದು, ಎಲ್ಲರ ಮನೆಯಲ್ಲಿಯೂ ಸಿಹಿ ಊಟ ಸಾಮಾನ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT