ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರಿಗೆ 2 ಸಾವಿರ ಮನೆ: ಶಾಸಕ

Last Updated 15 ಫೆಬ್ರುವರಿ 2012, 7:55 IST
ಅಕ್ಷರ ಗಾತ್ರ

ಯಳಂದೂರು: `ವಾಜಪೇಯಿ ಕೊಳಚೆ ನಿರ್ಮೂಲನ ಮಂಡಲಿ ವತಿಯಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಯಳಂದೂರು ಪಟ್ಟಣಕ್ಕೆ ಎರಡು ಸಾವಿರ ಮನೆಗಳನ್ನು ನಿರ್ಮಿ ಸಲು ಅನುಮತಿ ದೊರಕಿರುವುದಾಗಿ~ ಶಾಸಕ ಜಿ.ಎನ್. ನಂಜುಂಡಸ್ವಾಮಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಈ ಯೋಜನೆಯಲ್ಲಿ ರಾಜ್ಯದಿಂದ ಶೇ 60 ಹಾಗೂ ಕೇಂದ್ರ ಸರ್ಕಾರದಿಂದ ಶೇ 40 ರಷ್ಟು ಅನುದಾನ ದೊರಕಲಿದೆ.

ಕರ್ನಾಟಕ ಈ ಯೋಜನೆಯ ಅನುಷ್ಟಾ ನದಲ್ಲಿ ದೇಶದಲ್ಲಿ ಎರಡನೇ ಸ್ಥಾನ ದಲ್ಲಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ ಎರಡು ಲಕ್ಷ ಮನೆಗಳನ್ನು ನಿರ್ಮಿಸಿ ಕೊಡುವ ಭರವಸೆಯನ್ನು ವಸತಿ ಸಚಿವರು ನೀಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಒಟ್ಟು 5 ಸಾವಿರ ಮನೆಗಳ ನಿರ್ಮಾ ಣದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಮನೆಗಳ ನಿರ್ಮಾಣಕ್ಕೆ ರೂ. 3 ಲಕ್ಷ ನೀಡಲಾಗುತ್ತದೆ. ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ಆಹ್ವಾನಿಸಿ ಶೀಘ್ರವಾಗಿ ಇದನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

ಘನತ್ಯಾಜ್ಯ ಘಟಕಕ್ಕೆ ಶೀಘ್ರ ಚಾಲನೆ ನೀಡಲು ಸೂಚನೆಯನ್ನೂ ನೀಡಿದರು. ಇದಕ್ಕೆ ನಿಗದಿಯಾಗಿರುವ ಜಾಗದಲ್ಲೇ ಘಟಕವನ್ನು ಸ್ಥಾಪಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿರುವುದರಿಂದ ಈ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸುವಂತೆ ಸಲಹೆ ನೀಡಿದರು.

ಕಾವೇರಿ ಕುಡಿಯುವ ನೀರನ್ನು ಪೈಪ್ ಲೈನ್ ಅಳವಡಿಸಿರುವ ಕೆಲವು ಗ್ರಾಮಗಳಿಗೂ ನೀಡುವ ಯೋಜನೆ ಇದೆ. ಗ್ರಾಮಗಳಿಗೆ ನೀರು ಪೂರೈಕೆ ಮಾಡುವುದರಿಂದ ಆಯಾ ಗ್ರಾಮಗಳ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀಟರ್‌ಗಳನ್ನು ಅಳವಡಿಸಿ ಜಿಲ್ಲಾ ಪಂಚಾಯಿತಿ ಮೂಲಕ ಪಟ್ಟಣ ಪಂಚಾಯಿತಿಗೆ ಶುಲ್ಕ ಕಟ್ಟಬೇಕು ಎಂದು ಸದಸ್ಯರು ಒಕ್ಕೊರಲ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಂಡು ಆದಷ್ಟು ಬೇಗ ಕ್ರಮ ಕೈಗೊಳ್ಳವ ಭರವಸೆ ನೀಡಿದರು.

ಎಸ್‌ಇಪಿ ಹಾಗೂ ಟಿಎಸ್‌ಪಿ ಅನು ದಾನಗಳ ಮೂಲಕ ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ 11 ಲಕ್ಷ ರೂ. ವೆಚ್ಚದಲ್ಲಿ ಹಸುಗಳನ್ನು ವಿತರಿ ಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಬರೆಯದ ನಡವಳಿ, ಸದಸ್ಯರ ಆಕ್ರೋಶ: ಸಭೆ ಮುಗಿದರೂ, ಸಭೆಯಲ್ಲಿ ಕೈಗೊಂಡ ತೀರ್ಮಾನ ಗಳನ್ನು ನಡವಳಿ ಪುಸ್ತಕ್ಕೆ ದಾಖಲಿಸದೇ ಇದ್ದರಿಂದ ಕೆಲವು ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.

ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅಂದೇ ನಡವಳಿ ಪುಸ್ತಕದಲ್ಲಿ ದಾಖಲಿಸಬೇಕು. ಆದರೆ ಇದನ್ನು ದುರುದ್ದೇಶ ಪೂರ್ವಕವಾಗಿಯೇ ದಾಖಲಿಸಿಲ್ಲ. ಕಚೇರಿ ಸಮಯ ಮುಗಿದಿದ್ದರೂ ಇನ್ನೂ ಕೂಡ ಪುಸ್ತಕಕ್ಕೆ ಬರೆದಿಲ್ಲ. ಹಾಗಾಗಿ ಇದು ಹಲವು ಅನುಮಾನ ಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಸದಸ್ಯರಾದ ಶ್ರೀನಿವಾಸ ನಾಯಕ, ಸೋಮನಾಯಕ, ನಾಗರತ್ನಮಹೇಶ್ ದೂರಿದರು.

ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಚಿನ್ನಮ್ಮಮರಯ್ಯ, ಸದ್ಯರಾದ ಮೀನಾಕ್ಷಿ ಮಹದೇವಸ್ವಾಮಿ, ನಾಗರತ್ನಮಹೇಶ್, ಉಷಾರಾಣಿ,  ಜಯರಾಂ, ರಮೇಶ್, ಶ್ರೀನಿವಾಸನಾಯಕ, ಸೋಮನಾಯಕ, ಮಲ್ಲಯ್ಯ, ವೈ.ಎನ್. ಮನೋಹರ್ ನಾಮನಿರ್ದೇಶಿತ ಸದಸ್ಯರಾದ ಸೈಯದ್ ಷಫೀಕ್, ನಾಗೇಶ್ ಮುಖ್ಯಾಧಿಕಾರಿ ವಿಜಯ, ಉಮಾಶಂಕರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT