ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಸರ್ಕಾರ ರಚನೆಗೆ ಯುವಕರಿಗೆ ಕರೆ

Last Updated 13 ಏಪ್ರಿಲ್ 2013, 5:36 IST
ಅಕ್ಷರ ಗಾತ್ರ

ಸೊರಬ: ಈ ಬಾರಿಯ ಚುನಾವಣೆಯಲ್ಲಿ 18 ವರ್ಷದ ಯುವಕ ಮತದಾರರು ತಮ್ಮ ಮೊದಲ ಮತವನ್ನು ಯಶಸ್ವಿ ಸರ್ಕಾರವನ್ನು ರಚನೆ ಮಾಡಲು ಯೋಗ್ಯವಾದ ವ್ಯಕ್ತಿಗಳಿಗೆ ನೀಡುವುದರ ಮೂಲಕ ಶುಭ್ರ ಆಡಳಿತಕ್ಕೆ ಮುನ್ನುಡಿ ಬರೆಯಬೇಕು ಎಂದು ಮಾಜಿ ಸಚಿವ ಕುಮಾರ್‌ಬಂಗಾರಪ್ಪ ಕರೆ ಕೊಟ್ಟರು.

ಕಾಂಗ್ರೆಸ್‌ನ ಕಚೇರಿಯಲ್ಲಿ ವಿವಿಧ ಪಕ್ಷಗಳಿಂದ ಶುಕ್ರವಾರ ಸೇರ್ಪಡೆಗೊಂಡ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹುಟ್ಟು ಹಾಕಿದ ಅಶಾಂತಿ ರಾಜ್ಯದ ಜನರನ್ನು ಗೊಂದಲದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ರಾಜ್ಯದ ಗಡಿಭಾಗಗಳಲ್ಲಿ ಗಡಿ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದೆ. ಕರಾವಳಿ ಭಾಗದಲ್ಲಿ ಧರ್ಮದ ಹೆಸರಿನಲ್ಲಿ, ಚರ್ಚ್‌ಗಳ ಮೇಲೆ ದಾಳಿ ನಡೆಸಿ ಅರಾಜಕತೆ ಸೃಷ್ಟಿಮಾಡಿದೆ. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಭೂಮಿ ಬೆಲೆಯನ್ನು ಹೆಚ್ಚು ಮಾಡಿ ಬಡವರು ಸೂರು ಕಟ್ಟಿ ಕೊಳ್ಳಲು ಸಹಾ ಪರದಾಡುವಂತ ಸ್ಥಿತಿ ಬಿಜೆಪಿ ಸರ್ಕಾರದಿಂದ ಆಗಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ  ಸಾಕಷ್ಟು ಸಚಿವರು, ಶಾಸಕರು ಕಳ್ಳತನ ಮಾಡಿ ಹಣ ಹಂಚಿಕೊಳ್ಳುವಾಗ ವ್ಯತ್ಯಾಸ ಉಂಟಾಗಿ ಕೆಜಿಪಿ ಪಕ್ಷ ಹುಟ್ಟಿದೆ. ಇದಕ್ಕೆಲ್ಲಾ ಮಾರ್ಗದರ್ಶಕರು ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಕುಮಾಸ್ವಾಮಿ ಎಂದು ಕಿಡಿಕಾರಿದರು.

ಅನೇಕ ಬೇರೆ ಬೇರೆ ಪಕ್ಷದ ಕಾರ್ಯಕರ್ತ ಮಿತ್ರರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಬದ್ಧತೆಯ ರಾಜಕಾರಣ ಮಾಡಲು ಸಾಧ್ಯ ಎಂದು ಮನವರಿಕೆಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು.

18 ವರ್ಷದಿಂದ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಾಕಪ್ಪ ಇಂದು ಅಧಿಕೃತ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಮಾತನಾಡಿ, ಜನರನ್ನು ಬಾಡಿಗೆ ಕರೆದುಕೊಂಡು ಸಮಾರಂಭ ಮಾಡುವರೆಲ್ಲಾ ಶಾಸಕರಾಗಲು ಸಾಧ್ಯವಿಲ್ಲ. ಜೆಡಿಎಸ್‌ನಲ್ಲಿ ವಲಸೆಗರ ದರ್ಪದಿಂದ 2 ವರ್ಷದಿಂದ ರಾಜಕಾರಣದಲ್ಲಿ ನಿಷ್ಕ್ರಿಯಗೊಂಡಿದ್ದೆ. ಕುಮಾರ್‌ಬಂಗಾರಪ್ಪ ಅವರ ನಾಯಕತ್ವ ಮತ್ತು ದೂರದೃಷ್ಟಿತ್ವ ನೋಡಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾಕಪ್ಪ ಅವರ ಮುಂದಾಳತ್ವದಲ್ಲಿ, ಗಣಪತಿ ಹುಲ್ತಿಕೊಪ್ಪ, ಷಣ್ಮುಖ, ನಗರಾಜ್‌ಗೌಡ್ರು ಗುಡುವಿ, ಉಮಾಪತಿ ಗೌಡ್ರು ಗುಂಜನೂರು, ಸುರೇಶ್ ಮಾವಲಿ ಕುಮಾರ್‌ಬಂಗಾರಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಬ್ಲಾಕ್ ಅಧ್ಯಕ್ಷ ಕೆ. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಬಲಿ ಬಂಗಾರಪ್ಪ, ಮಹಿಳಾ ಅಧ್ಯಕ್ಷೆ ಲೋಲಾಕ್ಷಮ್ಮ, ಯುವ ಅಧ್ಯಕ್ಷ ಮಧುಕೇಶ್ವರ, ಪಟ್ಟಣ ಪಂಚಾಯ್ತಿ ಸದಸ್ಯ ಎಂ.ಡಿ. ಉಮೇಶ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಶಿವಾನಂದಪ್ಪ, ರೇವಣಪ್ಪ, ಬಸವರಾಜಪ್ಪ ಗೀತಮ್ಮ, ಸುರೇಶ್, ಗೀರೀಶ್, ಬಂದಗಿ ಬಸವರಾಜ್ ಶೇಟ್, ನಜೀರ್ ಸಾಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT