ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿಯತ್ತ `ಪ್ರೇಮ್ ಅಡ್ಡ'

Last Updated 14 ಡಿಸೆಂಬರ್ 2012, 10:08 IST
ಅಕ್ಷರ ಗಾತ್ರ

ಹುಬ್ಬಳ್ಳಿ:  `ಪ್ರೇಮ್ ಅಡ್ಡ ಸಿನಿಮಾಕ್ಕೆ ರಾಜ್ಯದಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ' ಎಂದು ಸಿನಿಮಾದ ನಿರ್ದೇಶಕ ಮಹೇಶ ಬಾಬು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸಿನಿಮಾದಲ್ಲಿ ತಾಯಿ ಹಾಗೂ ಅತ್ತಿಗೆ ಸೆಂಟಿಮೆಂಟಲ್ ಇದೆ. ಜೊತೆಗೆ ಲವ್ ಸ್ಟೋರಿ ಕೂಡಾ ಇದೆ. ಸ್ನೇಹಿತರು ಹೇಗಿರುತ್ತಾರೆ ಹಾಗೂ ಹೇಗಿರಬಾರದು ಎನ್ನುವುದನ್ನು ಬಿಂಬಿಸುವ ಸಿನಿಮಾ ವಿದು' ಎಂದು ಅವರು ಹೇಳಿದರು.

`ಹಿಂದೆ 50-60 ಥಿಯೇಟರುಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿತ್ತು. ಮೊದಲು ಎ ಸೆಂಟರ್‌ಗಳಲ್ಲಿ ಬಿಡುಗಡೆ ಕಂಡ ಬಳಿಕ, ಬಿ ಸೆಂಟರ್‌ಗಳಿಗೆ ಆಮೇಲೆ ಸಿ ಸೆಂಟರ್‌ಗಳಿಗೆ ತೆರೆ ಕಾಣುತ್ತಿದ್ದವು. ಈಗ 100-150 ಥಿಯೇಟುರುಗಳಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಜೋಗಯ್ಯ ಸಿನಿಮಾ 249 ಥಿಯೇಟರುಗಳಲ್ಲಿ ಬಿಡುಗಡೆ ಕಂಡಿತ್ತು. ಕಡಿಮೆ ಅವಧಿಯಲ್ಲಿ ಲಾಭ ಗಳಿಸುವ ಐಡಿಯಾ ಇದು. ಜೊತೆಗೆ ಸಿನಿಮಾ ಬಿಡುಗಡೆಯಾದ ಕೂಡಲೇ ನೋಡಬೇಕೆನ್ನುವ ಪ್ರೇಕ್ಷಕರಿಗೆ ಸ್ಪಂದಿಸುವ ಕ್ರಮ ಇದು' ಎಂದು ನಾಯಕನಟ ಪ್ರೇಮ್ ವಿವರಿಸಿದರು.

`ಇನ್ನೂ ಮೂರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವೆ. ಇದರಲ್ಲಿ ಸ್ವಂತ ನಿರ್ಮಾಣದ ಜೊತೆಗೆ ಮುನಿರತ್ನ ನಿರ್ಮಾಣದ ಸಿನಿಮಾದಲ್ಲಿ ನಾಯಕನಟ ನಾಗುವೆ. ಇನ್ನೊಂದು ಸಿನಿಮಾ ಪಕ್ಕಾ ಆಗಬೇಕು. ಅಲ್ಲದೇ ಸೌಂದರ್ಯ ಜಗದೀಶ ನಿರ್ಮಾಣದ ಸಿನಿಮಾ ನಿರ್ದೇ ಶಿಸುವೆ. ಮುಂದಿನ ವರ್ಷ ಸಿನಿಮಾ ವೊಂದರಲ್ಲಿ ನಟಿಸುವುದರ ಜೊತೆಗೆ ಸಿನಿಮಾವೊಂದನ್ನು ನಿರ್ದೇಶಿಸುವುದು ಪಕ್ಕಾ ಆಗಿದೆ' ಎಂದರು.  ನಿರ್ಮಾಪಕ ಮೇಕಾ ಮುರಳಿಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT