ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಬತ್ತಳಿಕೆಗೆ ಸೈನಾ, ಜ್ವಾಲಾ...?

ಇಂಡಿಯನ್ ಬ್ಯಾಡ್ಮಿಂಟನ್ ಲೀಗ್: ಇಂದು ಹರಾಜು ಪ್ರಕ್ರಿಯೆ
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಐಪಿಎಲ್ ಮಾದರಿಯಲ್ಲೇ ಆರಂಭಗೊಳ್ಳುತ್ತಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನ (ಐಬಿಎಲ್) ಹರಾಜು ಪ್ರಕ್ರಿಯೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಐಬಿಎಲ್ ಆಟಗಾರರ ಹರಾಜು ಪ್ರಕ್ರಿಯೆಯನ್ನು ಲಂಡನ್ ಮೂಲದ ಬಾಬ್ ಹೆಟನ್ ನಡೆಸಿಕೊಡಲಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಸೇರಿದಂತೆ ಭಾರತದ ಹಾಗೂ ಅಂತರರಾಷ್ಟ್ರೀಯ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್, ಹಾಕಿ ಪ್ರೀಮಿಯರ್ ಲೀಗ್ ಸಾಲಿಗೆ ಬ್ಯಾಡ್ಮಿಂಟನ್ ಇದೀಗ ಹೊಸ ಸೇರ್ಪಡೆ. ಐಪಿಎಲ್ ಮಾದರಿಯಲ್ಲೇ ಐಬಿಎಲ್ ನಡೆಯಲಿದ್ದು, ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಇದರ ಮುಂದಾಳತ್ವ ವಹಿಸಿದೆ.

ಸೈನಾ ಸೇರಿದಂತೆ ಪ್ರಸಿದ್ಧ ಆಟಗಾರರಿಗೆ 50 ಸಾವಿರ ಡಾಲರ್ (ಸುಮಾರು 29.66 ಲಕ್ಷ ರೂಪಾಯಿ) ಆರಂಭಿಕ ಮೌಲ್ಯ ನಿಗದಿ ಮಾಡಲಾಗಿದ್ದು, ಹರಾಜಿನಲ್ಲಿ ಸ್ಟಾರ್ ಆಟಗಾರರರ ಮೌಲ್ಯ ಎಷ್ಟು ಹೆಚ್ಚಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಟೂರ್ನಿಯಲ್ಲಿ ಚೀನಾದ ಖ್ಯಾತ ಆಟಗಾರರು ಪಾಲ್ಗೊಳ್ಳುತ್ತಿಲ್ಲ. ಆದರೆ ಇಬ್ಬರು ಮಾಜಿ ಬ್ಯಾಡ್ಮಿಂಟನ್ ಆಟಗಾರರಾದ ಜೆಂಗ್ ಬೊ ಹಾಗೂ ಬಾವೊ ಚುನ್ಲೆ ಐಬಿಎಲ್‌ನಲ್ಲಿ ಆಡಲಿದ್ದಾರೆ. `ಐಬಿಎಲ್ ಟೂರ್ನಿಯ ಸಮಯದಲ್ಲೇ ಚೀನಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿರುವುದರಿಂದ ಅವರು ಭಾಗವಹಿಸುತ್ತಿಲ್ಲ' ಎಂದು ಬಿಎಐ ಉಪಾಧ್ಯಕ್ಷ ಟಿ.ಪಿ.ಎಸ್.ಪುರಿ ತಿಳಿಸಿದ್ದಾರೆ.

ವೆಚ್ಚ ಮಿತಿ: ಇನ್ನು ಹರಾಜಿನಲ್ಲಿ ಭಾಗವಹಿಸುವ ಪ್ರತಿ ಫ್ರಾಂಚೈಸ್‌ಗೂ ವೆಚ್ಚ ಮಿತಿ ಹೇರಲಾಗಿದೆ. ಆರು ಸ್ವದೇಶಿ, ನಾಲ್ಕು ವಿದೇಶಿ ಹಾಗೂ ಒಬ್ಬ ಜೂನಿಯರ್ ಆಟಗಾರನನ್ನು ಒಳಗೊಂಡ ತಂಡ ಖರೀದಿಸಲು ಫ್ರಾಂಚೈಸ್‌ಗಳು 1.5 ಕೋಟಿ ರೂಪಾಯಿ ಹಣ ಖರ್ಚು ಮಾಡಬಹುದು.

ಬಹುಮಾನ ಎಷ್ಟು?: ಒಂದು ಮಿಲಿಯನ್ ಡಾಲರ್ (ಸುಮಾರು 5.5 ಕೋಟಿ). ಇದು ವಿಶ್ವದಲ್ಲಿಯೇ ಅತೀ ಹೆಚ್ಚು ಬಹುಮಾನ ಹೊಂದಿರುವ ಬ್ಯಾಡ್ಮಿಂಟನ್ ಟೂರ್ನಿ ಎನಿಸಲಿದೆ. ವಿಜೇತ ತಂಡಕ್ಕೆ ಬಹುಮಾನ ಮೊತ್ತದ ಶೇಕಡಾ 65 ರಷ್ಟು ಹಣ ಹಾಗೂ ರನ್ನರ್‌ಅಪ್‌ಗೆ ತಂಡ ಶೇಕಡಾ 35 ರಷ್ಟು ಹಣ ಲಭಿಸಲಿದೆ.

ಪಂದ್ಯ ನಡೆಯುವ ಸ್ಥಳ: ದೆಹಲಿ, ಲಖನೌ, ಮುಂಬೈ, ಪುಣೆ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರತಿ ಫ್ರಾಂಚೈಸ್‌ಗಳು ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಆಗಸ್ಟ್ 14 ರಂದು ನವದೆಹಲಿಯಲ್ಲಿ ಐಬಿಎಲ್ ಟೂರ್ನಿಯ ಉದ್ಘಾಟನೆ ನಡೆಯಲಿದ್ದು, ಒಟ್ಟು 90 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ದೆಹಲಿ ಸ್ಮ್ಯಾಶರ್ಸ್ ಹಾಗೂ ಪುಣೆ ಪಿಸ್ಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಲಖನೌ ತಂಡಕ್ಕೆ ಹಫೀಜ್ ಹಾಶಿಮ್ ಕೋಚ್: ಸಹಾರಾ ಇಂಡಿಯಾ ಒಡೆತನದ ಲಖನೌ ವಾರಿಯರ್ಸ್ ತಂಡವು ಮಲೇಷ್ಯದ ಮೊಹಮ್ಮದ್ ಹಫೀಜ್ ಹಾಶಿಮ್ ಅವರನ್ನು ಕೋಚ್ ಆಗಿ ನೇಮಿಸಿದೆ.

ಹಾಶಿಮ್ ಅವರು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಕೂಡಾ ಹೌದು. `ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಜೊತೆ ಸೇರಿಕೊಳ್ಳಲು ಸಾಧ್ಯವಾಗಿರುವುದು ಸಂತಸದ ವಿಷಯ. ವಿಶ್ವದ ಯಾವುದೇ ಭಾಗವಿರಲಿ, ಬ್ಯಾಡ್ಮಿಂಟನ್ ಕ್ರೀಡೆಗೆ ಉತ್ತೇಜನ ದೊರೆಯುವುದು ಅಗತ್ಯ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಮಾಸ್ಟರ್ಸ್ ತಂಡ ಒಲಿಂಪಿಯನ್ ಅಪರ್ಣಾ ಪೋಪಟ್ ಅವರನ್ನು ಕೋಚ್ ಆಗಿ ನೇಮಿಸಿದೆ.ನವದೆಹಲಿ (ಐಎಎನ್‌ಎಸ್): ಐಪಿಎಲ್ ಮಾದರಿಯಲ್ಲೇ ಆರಂಭಗೊಳ್ಳುತ್ತಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನ (ಐಬಿಎಲ್) ಹರಾಜು ಪ್ರಕ್ರಿಯೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಐಬಿಎಲ್ ಆಟಗಾರರ ಹರಾಜು ಪ್ರಕ್ರಿಯೆಯನ್ನು ಲಂಡನ್ ಮೂಲದ ಬಾಬ್ ಹೆಟನ್ ನಡೆಸಿಕೊಡಲಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಸೇರಿದಂತೆ ಭಾರತದ ಹಾಗೂ ಅಂತರರಾಷ್ಟ್ರೀಯ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್, ಹಾಕಿ ಪ್ರೀಮಿಯರ್ ಲೀಗ್ ಸಾಲಿಗೆ ಬ್ಯಾಡ್ಮಿಂಟನ್ ಇದೀಗ ಹೊಸ ಸೇರ್ಪಡೆ. ಐಪಿಎಲ್ ಮಾದರಿಯಲ್ಲೇ ಐಬಿಎಲ್ ನಡೆಯಲಿದ್ದು, ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಇದರ ಮುಂದಾಳತ್ವ ವಹಿಸಿದೆ.

ಸೈನಾ ಸೇರಿದಂತೆ ಪ್ರಸಿದ್ಧ ಆಟಗಾರರಿಗೆ 50 ಸಾವಿರ ಡಾಲರ್ (ಸುಮಾರು 29.66 ಲಕ್ಷ ರೂಪಾಯಿ) ಆರಂಭಿಕ ಮೌಲ್ಯ ನಿಗದಿ ಮಾಡಲಾಗಿದ್ದು, ಹರಾಜಿನಲ್ಲಿ ಸ್ಟಾರ್ ಆಟಗಾರರರ ಮೌಲ್ಯ ಎಷ್ಟು ಹೆಚ್ಚಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಟೂರ್ನಿಯಲ್ಲಿ ಚೀನಾದ ಖ್ಯಾತ ಆಟಗಾರರು ಪಾಲ್ಗೊಳ್ಳುತ್ತಿಲ್ಲ. ಆದರೆ ಇಬ್ಬರು ಮಾಜಿ ಬ್ಯಾಡ್ಮಿಂಟನ್ ಆಟಗಾರರಾದ ಜೆಂಗ್ ಬೊ ಹಾಗೂ ಬಾವೊ ಚುನ್ಲೆ ಐಬಿಎಲ್‌ನಲ್ಲಿ ಆಡಲಿದ್ದಾರೆ. `ಐಬಿಎಲ್ ಟೂರ್ನಿಯ ಸಮಯದಲ್ಲೇ ಚೀನಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿರುವುದರಿಂದ ಅವರು ಭಾಗವಹಿಸುತ್ತಿಲ್ಲ' ಎಂದು ಬಿಎಐ ಉಪಾಧ್ಯಕ್ಷ ಟಿ.ಪಿ.ಎಸ್.ಪುರಿ ತಿಳಿಸಿದ್ದಾರೆ.

ವೆಚ್ಚ ಮಿತಿ: ಇನ್ನು ಹರಾಜಿನಲ್ಲಿ ಭಾಗವಹಿಸುವ ಪ್ರತಿ ಫ್ರಾಂಚೈಸ್‌ಗೂ ವೆಚ್ಚ ಮಿತಿ ಹೇರಲಾಗಿದೆ. ಆರು ಸ್ವದೇಶಿ, ನಾಲ್ಕು ವಿದೇಶಿ ಹಾಗೂ ಒಬ್ಬ ಜೂನಿಯರ್ ಆಟಗಾರನನ್ನು ಒಳಗೊಂಡ ತಂಡ ಖರೀದಿಸಲು ಫ್ರಾಂಚೈಸ್‌ಗಳು 1.5 ಕೋಟಿ ರೂಪಾಯಿ ಹಣ ಖರ್ಚು ಮಾಡಬಹುದು.

ಬಹುಮಾನ ಎಷ್ಟು?: ಒಂದು ಮಿಲಿಯನ್ ಡಾಲರ್ (ಸುಮಾರು 5.5 ಕೋಟಿ). ಇದು ವಿಶ್ವದಲ್ಲಿಯೇ ಅತೀ ಹೆಚ್ಚು ಬಹುಮಾನ ಹೊಂದಿರುವ ಬ್ಯಾಡ್ಮಿಂಟನ್ ಟೂರ್ನಿ ಎನಿಸಲಿದೆ. ವಿಜೇತ ತಂಡಕ್ಕೆ ಬಹುಮಾನ ಮೊತ್ತದ ಶೇಕಡಾ 65 ರಷ್ಟು ಹಣ ಹಾಗೂ ರನ್ನರ್‌ಅಪ್‌ಗೆ ತಂಡ ಶೇಕಡಾ 35 ರಷ್ಟು ಹಣ ಲಭಿಸಲಿದೆ.

ಪಂದ್ಯ ನಡೆಯುವ ಸ್ಥಳ: ದೆಹಲಿ, ಲಖನೌ, ಮುಂಬೈ, ಪುಣೆ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರತಿ ಫ್ರಾಂಚೈಸ್‌ಗಳು ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಆಗಸ್ಟ್ 14 ರಂದು ನವದೆಹಲಿಯಲ್ಲಿ ಐಬಿಎಲ್ ಟೂರ್ನಿಯ ಉದ್ಘಾಟನೆ ನಡೆಯಲಿದ್ದು, ಒಟ್ಟು 90 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ದೆಹಲಿ ಸ್ಮ್ಯಾಶರ್ಸ್ ಹಾಗೂ ಪುಣೆ ಪಿಸ್ಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಲಖನೌ ತಂಡಕ್ಕೆ ಹಫೀಜ್ ಹಾಶಿಮ್ ಕೋಚ್: ಸಹಾರಾ ಇಂಡಿಯಾ ಒಡೆತನದ ಲಖನೌ ವಾರಿಯರ್ಸ್ ತಂಡವು ಮಲೇಷ್ಯದ ಮೊಹಮ್ಮದ್ ಹಫೀಜ್ ಹಾಶಿಮ್ ಅವರನ್ನು ಕೋಚ್ ಆಗಿ ನೇಮಿಸಿದೆ.

ಹಾಶಿಮ್ ಅವರು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಕೂಡಾ ಹೌದು. `ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಜೊತೆ ಸೇರಿಕೊಳ್ಳಲು ಸಾಧ್ಯವಾಗಿರುವುದು ಸಂತಸದ ವಿಷಯ. ವಿಶ್ವದ ಯಾವುದೇ ಭಾಗವಿರಲಿ, ಬ್ಯಾಡ್ಮಿಂಟನ್ ಕ್ರೀಡೆಗೆ ಉತ್ತೇಜನ ದೊರೆಯುವುದು ಅಗತ್ಯ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಮಾಸ್ಟರ್ಸ್ ತಂಡ ಒಲಿಂಪಿಯನ್ ಅಪರ್ಣಾ ಪೋಪಟ್ ಅವರನ್ನು ಕೋಚ್ ಆಗಿ ನೇಮಿಸಿದೆ.

ತಂಡಗಳು
ಹೈದರಾಬಾದ್ ಹಾಟ್‌ಶಾಟ್ಸ್, ಬಂಗಾ ಬೀಟ್ಸ್, ಲಖನೌ ವಾರಿಯರ್ಸ್, ಮುಂಬೈ ಮಾಸ್ಟರ್ಸ್, ಪುಣೆ ಪಿಸ್ಟನ್ಸ್ ಹಾಗೂ ದೆಹಲಿ ಸ್ಮ್ಯಾಶರ್ಸ್.

ಪ್ರಮುಖ ಆಟಗಾರರು
ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ, ಪಿ.ಕಶ್ಯಪ್, ಜ್ವಾಲಾ ಗುಟ್ಟಾ, ಪಿ.ವಿ. ಸಿಂಧು, ವಿಶ್ವ ಅಗ್ರರ‌್ಯಾಂಕಿಂಗ್ ಆಟಗಾರ ಮಲೇಷ್ಯಾದ ಲೀ ಚೊಂಗ್ ವೀ, ಥಾಯ್ಲೆಂಡ್‌ನ ಬೂನ್ಸಾಕ್ ಪೊನ್ಸಾನ ಹಾಗೂ ಹಾಂಗ್‌ಕಾಂಗ್‌ನ ಹ್ಯು ಯುನ್, ಜರ್ಮನಿಯ ಜೂಲಿಯನ್ ಶೆಂಕ್, ಥಾಯ್ಲೆಂಡ್‌ನ ರಾಚನಾಕ್ ಇಂಟಾನೊನ್ ಹಾಗೂ ಇಂಡೊನೇಷ್ಯಾದ ತೌಫಿಕ್ ಹಿದಾಯತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT