ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿ ಹೈ ಇಮಾನ್..ಮೇರಾ..

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಜಂಜೀರ್~ ಚಿತ್ರದ `ಯಾರೀ ಮೇರಿ ಇಮಾನ್ ಮೇರಾ ಯಾರ್ ಮೇರಿ ಜಿಂದಗಿ...~ ಹಾಡು, ಅಮಿತಾಬ್‌ಗಿಂತಲೂ ಖ್ಯಾತಿಯಾಗಿತ್ತು.ಪಠಾಣನ ಪಾತ್ರದಲ್ಲಿದ್ದ ಪ್ರಾಣ್ ಸಹ ಈ ಹಾಡಿನೊಂದಿಗೆ ನೆನಪಾಗದೇ ಇರಲಾರರು. ಹಿಂದಿ ಚಿತ್ರ ರಂಗದ ಹೆಸರಾಂತ ಖಳರಲ್ಲಿ ಒಬ್ಬರಾದ ಪ್ರಾಣ್ ತಮ್ಮ ಯಾರ್ ಕಲಾಕಾರ ಅಮಿತಾಬ್‌ಗೆ ಇತ್ತೀಚೆಗೆ ಕರೆಮಾಡಿದ್ದರಂತೆ.

82 ವರ್ಷದ ಈ ಹಿರಿಯಜ್ಜ, ಅಮಿತಾಬ್‌ಗೆ ಕರೆ ಮಾಡಿ, `ಸುಮ್ಮನೆ ನಿನ್ನ ಧ್ವನಿ ಕೇಳಬೇಕೆನಿಸಿತ್ತು~ ಎಂದವರೇ ಫೋನು ಇಟ್ಟರಂತೆ.  ಹೀಗೆ ಅಮಿತಾಬ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಪ್ರಾಣ್ ಕೇವಲ ವಜ್ರಕಠಿಣ ಧ್ವನಿಯ ಕ್ರೂರ ಪಾತ್ರಗಳನ್ನು ನಿರ್ವಹಿಸುವ ನಟರಾಗಿ ಎಲ್ಲರಿಗೂ ಗೊತ್ತು.
 
ಆದರೆ ಅವರಲ್ಲೊಬ್ಬ ಕೋಮಲ ಮನಸಿನ ಕವಿ ಇದ್ದಾನೆ. ತುಂಟ ಮನಸಿನ ಹಾಸ್ಯಪ್ರಜ್ಞೆಯುಳ್ಳ ಆಸಕ್ತಿಕರ ವ್ಯಕ್ತಿತ್ವವೂ ಅವರದ್ದು. ಅವರೊಂದಿಗೆ ನಟಿಸಿರುವ ಎಲ್ಲ ಚಿತ್ರಗಳಲ್ಲಿಯೂ ಆನಂದದಿಂದ ಸಮಯವನ್ನು ಕಳೆದಿದ್ದೇವೆ. ಪ್ರಾಣ್‌ಗೆ ಗಣಿತವೆಂದರೂ ಪ್ರಾಣವಾಗಿತ್ತಂತೆ.

ಎಷ್ಟೇ ದೊಡ್ಡ ಲೆಕ್ಕಾಚಾರ ನೀಡಿದರೂ ಬಾಯಿಲೆಕ್ಕ ಮಾಡಿ ಉತ್ತರವನ್ನು ಹೇಳುತ್ತಿದ್ದರಂತೆ. `ಅಮರ್ ಅಕ್ಬರ್ ಆಂಥೋನಿ~, `ಇನ್ಕಿಲಾಬ್~, `ಜಂಜೀರ್~, `ಡಾನ್~ ಮುಂತಾದ ಚಿತ್ರಗಳಲ್ಲಿ ಅಮಿತಾಬ್ ಮತ್ತು ಪ್ರಾಣ್ ಒಟ್ಟಿಗೆ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT