ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಕಮ್ಮಿಯಿಲ್ಲ!

Last Updated 2 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬಿಇಎಲ್ ಸಂಸ್ಥೆ ನಡೆಸುತ್ತಿರುವ ಭಿನ್ನ ಸಾಮರ್ಥ್ಯದ ಮಕ್ಕಳ ವಿಶೇಷ ಶಾಲೆ ‘ಆಶಾಂಕುರ’ದ ವಾರ್ಷಿಕೋತ್ಸವ ‘ಉಡಾನ್-2011’ನಲ್ಲಿ ಈ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಮಿಡಿದವು.

ಬಿಇಎಲ್ ನಿರ್ದೇಶಕ ಎಚ್.ಎಸ್.ಬಡೋರಿಯ ಉದ್ಘಾಟಿಸಿದರು. ಜನರಲ್ ಮ್ಯಾನೇಜರ್‌ಗಳಾದ ಫಿಲಿಪ್ ಜಾಕಬ್ ಮತ್ತು ಆಸಿ ನೌಟಿಯಾಲ್, ಮುಖ್ಯ ಶಿಕ್ಷಕಿ ದೇಚಮ್ಮ ಪ್ರಭು ಮತ್ತಿತರರು ಇದ್ದರು.

ಯೋಗ ಶಿಕ್ಷಕ ನಂಜುಂಡ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾದರಪಡಿಸಿದ ದೀಪ ನೃತ್ಯ, ಬಾಲ್ಯದ ನೆನಪುಗಳ ಬಿತ್ತುವ ‘ಸವಿ ಸವಿ ನೆನಪು’, ಟ್ವಿಸ್ಟ್ ಅಂಡ್ ಟರ್ನ್, ಕೀಬೋರ್ಡ್ ವಾದನ, ಬಾಲಿವುಡ್ ನೃತ್ಯ, ಕೋಲಾಟ, ಪಂಜಾಬಿ ನೃತ್ಯಭೇಷ್ ಎನಿಸಿದವು.

ಇತ್ತ ಸುಬ್ರಹ್ಮಣ್ಯಪುರದ ಅರೇಹಳ್ಳಿಯ ಮಾಡರ್ನ್ ಇಂಗ್ಲಿಷ್ ಶಾಲೆಯಲ್ಲಿ ನಡೆದ ಫನ್‌ಫೇರ್‌ಗೂ ಭಾರಿ ಪ್ರತಿಕ್ರಿಯೆ. ಮಕ್ಕಳ ಹಾಡು, ಕುಣಿತದ ಜತೆ ದೊಡ್ಡವರಿಗೂ ವಿವಿಧ ಸ್ಪರ್ಧೆಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT