ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ರಾಜಕಾರಣಿಗೆ ಬದ್ಧತೆ ಇದೆ?

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿ ವಿವಿ ಹಮ್ಮಿಕೊಂಡಿದ್ದ ರಾಜ್ಯಶಾಸ್ತ್ರ ಉಪನ್ಯಾಸಕರ ಸಮ್ಮೇಳನವನ್ನು ಉದ್ಘಾಟಿಸುತ್ತಾ ‘ರಾಜಕೀಯವು ಬದ್ಧತೆ ಇದ್ದ ವ್ಯಕ್ತಿಗಳ ಕೈಯಲ್ಲಿ ಸಿಕ್ಕಾಗ ಮಾತ್ರ ಸಮಾಜದ ಉನ್ನತಿ, ಅಭಿವೃದ್ಧಿ ಸಾಧ್ಯ ಮತ್ತು ರಾಜಕೀಯ ಶಕ್ತಿ ಉತ್ತಮ ವ್ಯಕ್ತಿಯ ಕೈಯಲ್ಲಿ ಸಿಕ್ಕಾಗ ಮಾತ್ರ ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರ ನಿರ್ಮೂಲನೆ ಆಗಲು ಸಾಧ್ಯ’ ಎಂದು ಈ ಅಣಿಮುತ್ತುಗಳನ್ನು ಉದುರಿಸಿದ್ದಾರೆ.

ನಮ್ಮ ದೇಶವು ಸ್ವತಂತ್ರವಾದಂದಿನಿಂದಲೂ ನಮ್ಮ ರಾಜಕಾರಣಿಗಳು ಈ ಮುತ್ತುಗಳನ್ನು ಉದುರಿಸುತ್ತಲೇ ಬಂದಿದ್ದಾರೆ. ಆದರೆ ಇದಕ್ಕೆ ಯಾರು ಬದ್ಧರಾಗಿದ್ದಾರೆ? ಯಾವ ಪಕ್ಷದವರು ಬದ್ಧರಾಗಿದ್ದಾರೆ? ನುಡಿಯುವುದು ಬಹಳ ಸುಲಭ ಆದರೆ ನಡೆಯುವುದು?

ದೇಶದಲ್ಲಿ ಲಕ್ಷಾಂತರ ಮಂದಿ ರಾಜಕಾರಣಿಗಳಿದ್ದಾರೆ ಅವರಲ್ಲಿ ಖರ್ಗೆ ಅವರು ಹೇಳಿದ ಬದ್ಧತೆ ಇರುವವರು ಊರಿಗೆ, ತಾಲ್ಲೂಕಿಗೆ, ಜಿಲ್ಲೆಗೆ ಅಥವಾ ರಾಜ್ಯಕ್ಕೆ ಒಬ್ಬರಾದರೂ ಸಿಕ್ಕುತ್ತಾರೆಯೆ? ಸಿಕ್ಕಿದರೆ ಇಷ್ಟರಲ್ಲಿಯೇ ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳು ಹೇಳ ಹೆಸರಿಲ್ಲದಂತೆ ನಾಶವಾಗುತ್ತಿದ್ದವು. ಆದರೆ ಬದ್ಧತೆ ಇಲ್ಲದ ಎಲ್ಲಾ ಪಕ್ಷಗಳ ರಾಜಕಾರಣಿಗಳು ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ಇವು ನಾಶವಾಗಲು ಹೇಗೆ ಸಾಧ್ಯ?

ಈ ನಾಲ್ಕೂ ಭಯಾನಕವಾದ ಅನಿಷ್ಟಗಳೆ ಆದರೂ ಇವುಗಳನ್ನು ನಿವಾರಿಸಬೇಕಾದ ಎಲ್ಲಾ ಪಕ್ಷಗಳ ರಾಜಕಾರಣಿಗಳು ಇಂದು ಪರಸ್ಪರ ಕಿರುಚಾಟ, ಕಳ್ಳಾಟ, ಬೈಯ್ದಾಟಗಳಲ್ಲಿಯೇ ಮುಳುಗಿಹೋಗಿದ್ದಾರೆ. ಬೈಗುಳಂತೂ ತೀರ ಅಸಹ್ಯಕರವಾದವುಗಳು ಕೇಳಲು ಮಾನವರಲ್ಲ ಪ್ರಾಣಿಗಳೇ ನಾಚುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT