ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಜಿಗೂ ಘಟಿಕೋತ್ಸವ!

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಪ್ಪರ್ ಕಿಂಡರ್ ಗಾರ್ಟನ್ (ಯುಕೆಜಿ) ಮಕ್ಕಳಿಗೆ ಪದವಿ ಪ್ರದಾನ ಅಥವಾ ಘಟಿಕೋತ್ಸವ ನಡೆಸುವುದನ್ನು ಕೇಳಿದರೆ ನಗು ಬರುವುದಿಲ್ಲವೇ! ಪುಟಾಣಿಗಳಿಗೆ ಅದೆಲ್ಲ ಏಕೆ? ಅವರಿಗೆ ಏನು ಅರ್ಥವಾಗುತ್ತದೆ ಎನಿಸುವುದು ಸಹಜ ಆದರೆ, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ ಗುರುದರ್ಶನ್ ಪಬ್ಲಿಕ್ ಸ್ಕೂಲ್ ಇಂತದ್ದೊಂದು ಪ್ರಯೋಗಕ್ಕೆ ಕೈಹಾಕಿತ್ತು. ಯಶಸ್ವಿಯೂ ಆಯಿತು.

`ಒಂದನೇಯ ತರಗತಿಗೆ ತೆರಳುವ ಮಕ್ಕಳು ಪ್ರಿ ಕೆಜಿ, ಎಲ್‌ಕೆಜಿ, ಯುಕೆಜಿಗಿಂತ ಭಿನ್ನವಾದ ವಾತಾವರಣದಲ್ಲಿ ವ್ಯಾಸಂಗ ಮಾಡಬೇಕು. ಅದಕ್ಕಾಗಿ ಮಕ್ಕಳನ್ನು ಮಾನಸಿಕವಾಗಿ ಸಜ್ಜುಗೊಳಿಸುವುದು ಅಗತ್ಯ ಎನಿಸಿತು. ಯುಕೆಜಿ ಕೊನೆಯಲ್ಲಿ ಘಟಿಕೋತ್ಸವ ಮಾಡುವುದು ಸೂಕ್ತ ಎಂಬ ಪರಿಕಲ್ಪನೆ ಇರಿಸಿಕೊಂಡು ಪುಟಾಣಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ಆಯೋಜಿಸಿದ್ದೇವೆ' ಎನ್ನುತ್ತದೆ ಶಾಲೆಯ ಶಿಕ್ಷಕವರ್ಗ.

ಪುಟಾಣಿ ಮಕ್ಕಳು ಪದವಿ ಸ್ವೀಕರಿಸಲು ಗೌನ್ ಮತ್ತು ಕ್ಯಾಪ್ ಧರಿಸಿ ಬಂದಾಗ ಎಲ್ಲ ಪೋಷಕರಿಂದಲೂ ಮೆಚ್ಚುಗೆಯ ಉದ್ಗಾರ. ಹೊರ ಹೋಗುತ್ತಿರುವ ಹಿರಿಯ (ಯುಕೆಜಿ) ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಮನರಂಜಿಸುವುದಕ್ಕಾಗಿ ಪ್ರಿ ಕೆಜಿ ಮತ್ತು ಎಲ್‌ಕೆಜಿ ವಿದ್ಯಾರ್ಥಿಗಳು ಡ್ಯಾನ್ಸ್ ಕೂಡ ಮಾಡಿದರು. ಯುಕೆಜಿ ಮಕ್ಕಳಿಗೆ ನರ್ಸರಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ವೆಲ್‌ವೆಟ್ ಬಟ್ಟೆಯ ಸರ್ಟಿಫಿಕೆಟ್ ನೀಡಲಾಯಿತು. ಹಾಲುಗಲ್ಲದ ಮಕ್ಕಳ ಈ ಪದವಿ ಪ್ರದಾನ ಕಂಡು ಪೋಷಕರ ಹಿಗ್ಗು ಹೇಳತೀರದಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT