ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಯುಗಾಸ್' ಉತ್ಸವಕ್ಕೆ ಚಾಲನೆ

ವಾಣಿಜ್ಯ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಮಾವೇಶ
Last Updated 4 ಏಪ್ರಿಲ್ 2013, 6:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಿಯಾಲಿಟಿ ಕಾರ್ಯಕ್ರಮಗಳನ್ನು ಆಧಾರವಾಗಿಟ್ಟು ಕೊಂಡು ರೂಪಿಸಿರುವ `ಯುಗಾಸ್-13' ರಾಷ್ಟ್ರಮಟ್ಟದ ವಾಣಿಜ್ಯ ವಿದ್ಯಾರ್ಥಿಗಳ ಉತ್ಸವಕ್ಕೆ ಬುಧವಾರ ಆಕ್ಸ್‌ಫರ್ಡ್ ಕಾಲೇಜು ಆವರಣದಲ್ಲಿ ಚಾಲನೆ ದೊರೆಯಿತು.

ಕೆಎಸ್‌ಎಫ್‌ಸಿ ಉಪ ಮುಖ್ಯ ವ್ಯವಸ್ಥಾಪಕ ಪಿ.ಆರ್. ಜಾಧವ ಯುಗಾಸ್ ಉತ್ಸವವನ್ನು ಉದ್ಘಾಟಿಸಿದರು.`ರಿಯಾಲಿಟಿ ಕಾರ್ಯಕ್ರಮಗಳನ್ನು ಆಧಾರವಾಗಿಟ್ಟುಕೊಂಡು ಆಯೋಜಿಸಿರುವ ಈ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಒದಗಿಸುತ್ತವೆ. ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಈ ಸ್ಪರ್ಧೆಗಳು ಸಹಕಾರಿಯಾಗಲಿವೆ' ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗಬಾರದು. ಬದುಕಿಗೆ ಅಗತ್ಯವಾದ ಪ್ರಾಯೋಗಿಕ ಜ್ಞಾನ ಮತ್ತು ತಂತ್ರಜ್ಞಾನದ ಅರಿವು ಪಡೆಯಬೇಕು. ಅದರಲ್ಲೂ ವಾಣಿಜ್ಯ ವಿಷಯದ ವಿದ್ಯಾರ್ಥಿಗಳು ಮಾರುಕಟ್ಟೆಯ ಮಿಡಿತವನ್ನು ಅರಿಯಬೇಕು ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.

12ಕ್ಕೂ ಹೆಚ್ಚು ಕಾಲೇಜುಗಳ ಸಹಭಾಗಿತ್ವ: ವಿವಿಧ ಸ್ಪರ್ಧೆ
ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹೊಸಪೇಟೆ, ದಾವಣಗೆರೆ ಮೊದಲಾದ ಭಾಗಗಳ 12ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಎರಡು ದಿನಗಳ ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ನೃತ್ಯ, ರಸಪ್ರಶ್ನೆಗಳ ಜೊತೆಗೆ ಮಾನಸಿಕ, ಬುದ್ಧಿಮತ್ತೆ ಪರೀಕ್ಷಿಸುವ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT