ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಸಿಎಲ್: ವಿದ್ಯುತ್ ಉತ್ಪಾದನೆ ಸ್ಥಗಿತ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪಡುಬಿದ್ರಿ: ನಂದಿಕೂರಿನಲ್ಲಿರುವ ಉಡುಪಿ ಪವರ್ ಕಾರ್ಪೊರೇಷನ್ ಲಿ.(ಯುಪಿಸಿಎಲ್) ಘಟಕ ಶುಕ್ರವಾರ ರಾತ್ರಿಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಇದೇ ಪರಿಸ್ಥಿತಿ ಒಂದೆರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

`ಅ. 7ರಿಂದ ಒಂದು ತಿಂಗಳ ಕಾಲ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯಲಿದೆ. ಈವರೆಗೆ ಯುಪಿಸಿಎಲ್ ವಿದ್ಯುತ್ ಸ್ಥಾವರದಲ್ಲಿ 600 ಮೆ.ವಾ. ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ವಿದ್ಯುತ್ ಖರೀದಿಸುತ್ತಿದ್ದ ಮೆಸ್ಕಾಂ ಅದನ್ನು ಉಡುಪಿ ಹಾಗೂ ಮಂಗಳೂರಿಗೆ ಸರಬರಾಜು ಮಾಡುತ್ತಿತ್ತು~ ಎಂದು ಕಂಪೆನಿ ಈ ಮೊದಲೇ ಹೇಳಿಕೊಂಡಿತ್ತು. ಕ್ರವಾರದಿಂದ ಪಡುಬಿದ್ರಿ ಸುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.

`ನಿರ್ವಹಣಾ ಕಾರ್ಯಕ್ಕಾಗಿ ಯುಪಿಸಿಎಲ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಒಂದು ಅಥವಾ ಎರಡು ತಿಂಗಳ ಕಾಲ ನಿರ್ವಹಣಾ ಕಾರ್ಯ ನಡೆಯುವ ಸಾಧ್ಯತೆ ಇದೆ. ಈಗ ಬೇರೆ ಗ್ರಿಡ್‌ನಿಂದ ವಿದ್ಯುತ್ ಪಡೆದು ಪೂರೈಸಲಾಗುತ್ತಿದೆ~ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT