ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್ ಸಮಿತಿಗಳಿಗೆ ಆಯ್ಕೆ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ಸಂಜೆ ನಡೆದಿದ್ದು, ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.

ಮಧ್ಯಾಹ್ನ 3ಗಂಟೆವರೆಗೂ ಮತದಾನ ನಡೆಯಿತು. ನಂತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜಯನಗರದಲ್ಲಿ ನಡೆಯಿತು. ಉಳಿದಂತೆ ಬೆಂಗಳೂರು ಸೆಂಟ್ರಲ್ ಮತ್ತು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ರಾತ್ರಿ ಬಹುಹೊತ್ತಿನವರೆಗೂ ಮತ ಎಣಿಕೆ ನಡೆಯಿತು.

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಭಾಕರರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಆರ್.ನಾಯ್ಡು ಆಯ್ಕೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಗೌತಮ್ ಆಯ್ಕೆಯಾಗಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ರಾತ್ರಿ ಬಹುಹೊತ್ತಿನವರೆಗೂ ನಡೆಯಿತು.

ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ವಿವರ:
ರಾಜಾಜಿನಗರ- ಶಶಿವರ್ಧನ್, ಸಿ.ವಿ.ರಾಮನ್‌ನಗರ- ಆನಂದ್, ಗಾಂಧಿನಗರ- ಉಮೇಶ್, ಮಹದೇವಪುರ- ಅನಿಲ್, ಶಿವಾಜಿನಗರ- ನಟರಾಜ್, ಶಾಂತಿನಗರ- ಪಿಂಟೊ, ಪದ್ಮನಾಭನಗರ- ಹರೀಶ್, ಬೊಮ್ಮನಹಳ್ಳಿ- ಯೋಗೀಶ್ ಗೌಡ, ಬಿಟಿಎಂ ಲೇಔಟ್- ರಾಜೇಂದ್ರ, ವಿಜಯನಗರ- ವಾಸು, ಗೋವಿಂದರಾಜನಗರ-ಅಭಿಷೇಕ್, ಬಸವನಗುಡಿ- ಕಿರಣ್, ಜಯನಗರ- ಪ್ರಶಾಂತ್, ಚಿಕ್ಕಪೇಟೆ- ಯುವರಾಜ್.

ದಾಸರಹಳ್ಳಿ- ಕುಮಾರಸಿಂಗ್, ಮಲ್ಲೇಶ್ವರ- ಸುರೇಶ, ಹೆಬ್ಬಾಳ- ಫೈರೋಜ್, ಬ್ಯಾಟರಾಯನಪುರ- ಗೌರೀಶ್, ಮಹಾಲಕ್ಷ್ಮೀಲೇಔಟ್- ಕೆ.ವಿ.ಸಂತೋಷ್, ಯಶವಂತಪುರ- ಪುಟ್ಟು, ಕೆ.ಆರ್.ಪುರ- ರವಿಕುಮಾರ್, ಪುಲಿಕೇಶಿನಗರ- ವರುಣ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT