ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ನಾಯಕರು

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಯುವ ನಾಯಕರು
ಸ್ಯಾಂಕಿ ಉದ್ಯಾನ ನಡಿಗೆದಾರರ ಸಂಘ ಸಾರ್ವಜನಿಕರಲ್ಲಿ ನಿಸರ್ಗ ಸಂಪತ್ತು ಮತ್ತು ಪ್ರಕೃತಿ ಸಂರಕ್ಷಣೆಯ ಅರಿವು ಮೂಡಿಸಲು ಭಾನುವಾರ ಯುವ ನಾಯಕರು ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ಹಸಿರು ಸಂತೆ, ರಕ್ತದಾನ ಶಿಬಿರ ನಡೆಯಲಿದೆ.ಸ್ಥಳ: ಮಲ್ಲೇಶ್ವರಂ ಬಾಲಕಿಯರ ಪ್ರೌಢಶಾಲೆ, 4ನೇ ಮೇನ್, 13ನೇ ಕ್ರಾಸ್ ಮಲ್ಲೇಶ್ವರಂ. ಬೆಳಿಗ್ಗೆ 10.30ರಿಂದ.

ಕಾರಾ ಕಾರ್ನಿವಲ್
ಪೂರ್ವ ಪ್ರಾಥಮಿಕ ಶಾಲಾ ಸಮೂಹ ‘ಕಾರಾ ಫಾರ್ ಕಿಡ್ಸ್’ ಶನಿವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಮಕ್ಕಳಿಗಾಗಿ ರಂಜನೀಯ ಕಥೆ ಹೇಳುವ ಕಾರ್ಯಾಗಾರ, ಗೊಂಬೆಯಾಟ ಪ್ರದರ್ಶನ ಏರ್ಪಡಿಸಿದೆ. ಸ್ಥಳ: ಕ್ರಾಸ್‌ವರ್ಡ್ ಮಳಿಗೆ, ಫ್ರೆಜರ್‌ಟೌನ್. ಮಾಹಿತಿಗೆ: 98449 14141

ಕಥಾ ಕಾರ್ಯಾಗಾರ
ಬ್ರಿಟಿಷ್ ಕೌನ್ಸಿಲ್ 18 ವರ್ಷ ಮೇಲ್ಪಟ್ಟವರಿಗಾಗಿ ಶನಿವಾರ ಬೆಳಿಗ್ಗೆ 10.30ರಿಂದ ಕಥಾ ಕಾರ್ಯಾಗಾರ ಏರ್ಪಡಿಸಿದೆ. ಕಲಿಕೆ ಮತ್ತು ಬದುಕಿನಲ್ಲಿ ಕಥೆ ಹೇಳುವುದರ ಪರಿಣಾಮ, ಮಹತ್ವವನ್ನು ಇಲ್ಲಿ ತಿಳಿಸಿಕೊಡಲಾಗುವುದು. ಶಿಕ್ಷಣತಜ್ಞೆ ಗೀತಾ ರಾಮಾನುಜಂ ಮತ್ತು ಸ್ವೀಡನ್‌ನ ಒಲಾ ಹೆನ್ರಿಕ್‌ಸನ್ ಇದನ್ನು ನಡೆಸಿಕೊಡುತ್ತಾರೆ. ಮೊದಲು ಬಂದ 30 ಜನರಿಗೆ ಮಾತ್ರ ಅವಕಾಶ. ಮಾಹಿತಿ ಮತ್ತು ನೋಂದಣಿಗೆ:  2248 9220

ಲೋಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಶನಿವಾರ ಮತ್ತು ಭಾನುವಾರ ‘ಜಾನಪದ ಲೋಕ’ದಲ್ಲಿ ಲೋಕೋತ್ಸವ ಆಚರಿಸುತ್ತಿದೆ. ಶನಿವಾರ ಲೋಕೋತ್ಸವ ಉದ್ಘಾಟನೆ,  ಸ್ಥಳ: ಜಾನಪದ ಲೋಕ, ಬೆಂಗಳೂರು, ಮೈಸೂರು ಹೆದ್ದಾರಿ, ರಾಮನಗರ.

ಹಸಿರು ಕಾಳಜಿ
ದಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(ಐಜಿಬಿಸಿ)ನ ವಿದ್ಯಾರ್ಥಿ ಪಡೆ ರೂಪಿಸಲು ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಭಾರತೀಯ ವಿಜ್ಞಾನ ಮಂದಿರ ಆವರಣದ ಜೆ ಎನ್ ಟಾಟಾ ಸಭಾಂಗಣದಲ್ಲಿ ಶನಿವಾರ ‘ಗ್ರೀನ್ ವೇವ್ಸ್’ ಎಂಬ ಸಂವಾದ ರೂಪದ ಕಾರ್ಯಾಗಾರ ನಡೆಸಲಿದೆ.

 ಶಾನ್ ಜತೆ ಹಾಡು
ದೇಸಿತಾರಾ.ಕಾಮ್, ಈ ಬಾರಿ ಬೀದರ್ ಉತ್ಸವದಲ್ಲಿ ಗಾಯಕ ಶಾನ್ ಜತೆ ಹಾಡುವ ಅಮೋಘ ಅವಕಾಶ ಕಲ್ಪಿಸುತ್ತಿದೆ. ಅದಕ್ಕಾಗಿ ನಿಮ್ಮ ಹಾಡಿನ ವಿಡಿಯೊವನ್ನು ಇಂದು ಶನಿವಾರದ ಒಳಗಾಗಿ desitara.com  ನಲ್ಲಿ ಅಪ್‌ಲೋಡ್ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT