ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಂಗೀತ ನೃತ್ಯೋತ್ಸವ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಇದೇ 16 ಹಾಗೂ 17ರಂದು ರಾಜ್ಯಮಟ್ಟದ ಯುವಸಂಗೀತ ನೃತ್ಯೋತ್ಸವ ಏರ್ಪಡಿಸಿದೆ.

ರಾಜ್ಯದೆಲ್ಲೆಡೆಯಿಂದ ನೂರಕ್ಕೂ ಅಧಿಕ ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸಲಿದ್ದು ಸಮೂಹ ಗೀತಗಾಯನ, ಸಮೂಹ ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ,  ಮೊದಲಾದ ಕಾರ್ಯಕ್ರಮ ನೀಡಲಿದ್ದಾರೆ.

ಕಾರ್ಯಕ್ರಮವನ್ನು ಮಹೇಶ್ ಜೋಷಿ ಉದ್ಘಾಟಿಸುವರು. ವೈಜಯಂತಿ ಕಾಶಿ, ವೈಸೂರು ವಿ.ಸುಬ್ರಹ್ಮಣ್ಯ, ಎಚ್.ಎಲ್.ಎನ್.ರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ವಿವರ: 16ರಂದು ಸಂಜೆ 6ರಿಂದ ಭರತನಾಟ್ಯ, ಸಮೂಹ ನೃತ್ಯ-ಕೃಷ್ಣಾ ಫೌಂಡೇಶನ್ ನೃತ್ಯ ಶಾಲೆ. ಗುರು: ನಾಗಲಕ್ಷ್ಮಿ.

ನೃತ್ಯ ನಿವೇದನ, ನೃತ್ಯ ರೂಪಕ-ವಿವೇಕಾನಂದ ಕಲಾಕೇಂದ್ರ. ಗುರು: ಶ್ವೇತಹರ್ಷ.
ಭರತನಾಟ್ಯ ದಂದ್ವ: ಕಲೆಮನೆ ಸೋದರಿಯರು, ಮೈಸೂರು. ಗುರು: ಡಾ.ಕೆ.ಕುಮಾರ್.

ಭರತನಾಟ್ಯ, ಸಮೂಹನೃತ್ಯ: ಡಾ.ಕೆ.ಕುಮಾರ್, ನೃತ್ಯ ಅಕಾಡೆಮಿ.
17ರಂದು ಮೃದಲಾಗೌಡ ಹಾಗೂ ಮೈತ್ರಿ ಜೆ.ಮಧ್ಯಸ್ಥ ಅವರಿಂದ ಭರತನಾಟ್ಯ.
ಸುಗಮ ಸಂಗೀತ: ಬಿ.ಪಿ.ಅದಿತಿ, ಗುರುರಾಘವೇಂದ್ರ ಸುಗಮ ಸಂಗೀತ ಶಾಲೆ-ಗುರು: ಆಶಾ ಬದ್ರಿನಾಥ್.

ಭರತನಾಟ್ಯ, ಸಮೂಹನೃತ್ಯ: ನಾಟ್ಯಾಂಜಲಿ ನೃತ್ಯ ಕಲಾಮಂದಿರ, ಹುಬ್ಬಳ್ಳಿ. ಗುರು: ಸಹನಾ ಭಟ್. ಆರೋಹಣ ಅಕಾಡೆಮಿ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್. ಗುರು: ದೀಪಾ ಕಾಮತ್. ಪ್ರತಿದಿನ ಸಂಜೆ 6ರಿಂದ. ಸ್ಥಳ: ನಯನ ಸಭಾಂಗಣ, ಕನ್ನಡ ಸಭಾಂಗಣ, ಜೆ.ಸಿ.ರಸ್ತೆ. ಮಾಹಿತಿಗೆ: 98805 11043
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT