ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನ ಪ್ರಾಣಕ್ಕೆ ಎರವಾದ ಮೊಬೈಲ್ ಸಂದೇಶ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ): ಕಳೆದ ವಾರ ಮೊಬೈಲ್ ಸಂದೇಶ ಬರೆಯುವಾಗ ಮೈಮರೆತು ಅಪಘಾತಕ್ಕೆ ಒಳಗಾಗಿ ಮೃತಪಟ್ಟ ಅಮೆರಿಕದ ಯುವಕನ ಪಾಲಕರು ಆತ ಬರೆದಿದ್ದ ಸಂದೇಶವನ್ನು ಬಹಿರಂಗ ಪಡಿಸಿದ್ದಾರೆ.

ವಾಹನ ಚಾಲನೆ ಮಾಡುವಾಗ ಟೆಕ್ಸ್ಟ್ ಸಂದೇಶ ಕಳುಹಿಸುವುದು ಸರಿಯಲ್ಲ. ಇದು ಪ್ರಾಣಕ್ಕೆ ಎರವಾಗುತ್ತದೆ. ಯುವ ಜನರಿಗೆ ಕಿವಿಮಾತು ಹೇಳುವ ಉದ್ದೇಶದಿಂದಲೇ ಈ ಸಂದೇಶ ಬಿಡುಗಡೆ ಮಾಡಿದ್ದಾಗಿ ಆ ಯುವಕನ ತಾಯಿ ಶರೋನ್ ಹೇಟ್ ತಿಳಿಸಿದ್ದಾರೆ.

`ಹೀಗೆ ಮಾಡುವುದರಿಂದ ನೀವು ಕ್ಷಣಾರ್ಧದಲ್ಲಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಹುದು. ಬೇರೆಯವರಿಗೆ ಗಾಯ ಮಾಡಬಹುದು ಅಥವಾ ಅವರನ್ನು ಸಾಯಿಸಬಹುದು. ನಿಮ್ಮನ್ನು ಪ್ರೀತಿಸುವ ಎಲ್ಲರ ಹೃದಯಕ್ಕೆ ನೋವು ನೀಡಬಹುದು' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕೊಲರಡೊ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಅಲೆಕ್ಸಾಂಡರ್ ಹೇಟ್, ತನ್ನ ಸ್ನೇಹಿತನಿಗೆ ಮೊಬೈಲ್ ಸಂದೇಶ ಕಳುಹಿಸುವ ಭರದಲ್ಲಿ ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿ ಅಪಘಾತಕ್ಕೆ ಒಳಗಾಗಿದ್ದ. ಅಲ್ಲದೇ ಅಪಘಾತದಲ್ಲಿ ಮೃತಪಟ್ಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT