ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಂದ ವ್ಯಾಪಕ ಬೆಂಬಲ: ತಮ್ಮಣ್ಣ

Last Updated 24 ಏಪ್ರಿಲ್ 2013, 6:18 IST
ಅಕ್ಷರ ಗಾತ್ರ

ಮದ್ದೂರು: ಕ್ಷೇತ್ರದಲ್ಲಿ ತಮಗೆ ಯುವಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ತಮ್ಮನ್ನು ಪಕ್ಷಾತೀತವಾಗಿ ಬೆಂಬಲಿಸುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಸಂತಸ ವ್ಯಕ್ತಪಡಿಸಿದರು.

ಸಮೀಪದ ಚನ್ನಸಂದ್ರ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ಹಲವು ಯುವ ಮುಖಂಡರು ತಮ್ಮನ್ನು ಬೆಂಬಲಿಸಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಈ ಚುನಾವಣೆಯಲ್ಲಿ ಶಾಸಕನಾಗಿ ಪುನರ್ ಆಯ್ಕೆಗೊಂಡರೆ ತಾಲ್ಲೂಕಿನಲ್ಲಿ ಬೃಹತ್ ಕೈಗಾರಿಕೆ ಘಟಕಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.

ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಹಿರಿಯ ಮುಖಂಡ ಕಾಳೀರಯ್ಯ, ಯುವ ಮುಖಂಡರಾದ ಯೋಗೇಶ್, ಅನಿಲ್‌ಕುಮಾರ್, ಚೆಲುವರಾಜು, ಪ್ರೀತಿ ಶಂಕರ್, ಸದಾನಂದ, ಪ್ರತಾಪ್, ನವೀನ್, ಚಂದ್ರು, ಪ್ರಸನ್ನ, ಸಿ.ಸಿ.ಚಂದ್ರು, ಲಿಂಗರಾಜು ಆನಂದ್ ಇದ್ದರು.

ಚುನಾವಣಾ ಅಕ್ರಮ: ದೂರು ನೀಡಲು ಮನವಿ
ಮಂಡ್ಯ: ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮಗಳ ಬಗ್ಗೆ ತುರ್ತು ಕ್ರಮಕೈಗೊಳ್ಳಲು ಕೆಳಕಂಡ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಾರ್ವಜನಿಕರು, ಅಭ್ಯರ್ಥಿಗಳು ದೂರು ನೀಡಬಹುದಾಗಿದೆ.

ಮದ್ದೂರು ತಾಲ್ಲೂಕು ಕಛೇರಿ ದೂರುನಿರ್ವಹಣಾ ಕೋಶ-08232-232080, ಕಸಬಾ ಹೋಬಳಿಗೆ ಸಂಬಂಧಿಸಿದಂತೆ ದೈಹಿಕ ಶಿಕ್ಷಕ ಪರಿವೀಕ್ಷಕ ರಾಜು, ಮೊ.9845796799 ಹಾಗೂ ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಚಿಕ್ಕನಂಜಯ್ಯ ಮೊ.ಸಂ. 9448513779, ಆತಗೂರು ಹೋಬಳಿಗೆ ಸಂಬಂಧಿಸಿದಂತೆ ಮದ್ದೂರು    ಆಹಾರ ನಿರೀಕ್ಷಕ ಹುಚ್ಚಯ್ಯ ಮೊ.8904019137, ಕೊಪ್ಪ     ಕೃಷಿ ಅಧಿಕಾರಿ ಮಂಜು-7259005719,  ಸಿ.ಎ.ಕೆರೆ ಹೋಬಳಿಗೆ ಸಂಬಂಧಿಸಿದಂತೆ ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ ರೆಡ್ಡಿ 9740877970, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ  ನಾಗರಾಜು 8050576206, ಕೊಪ್ಪ ಹೋಬಳಿಗೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿ ಶಶಿಧರ್ 9901405236, ಉಪ ತಹಶೀಲ್ದಾರ್ ವೆಂಕಟೇಶ ರೆಡ್ಡಿ 9964515937 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT