ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಯುವಕರಿಗೆ ಶ್ರೀನಿವಾಸ ರಾಮಾನುಜನ್ ಮಾದರಿ'

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಇಂದಿನ ಯುವಜನತೆಗೆ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರು ಮಾದರಿಯಾಗಿದ್ದಾ ರೆ' ಎಂದು ಗಣಿತಜ್ಞ ಪ್ರೊ.ಎಂ.ಎಸ್.ನರಸಿಂಹನ್ ಹೇಳಿದರು.

ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಶುಕ್ರವಾರ ನಡೆದ `ಗಣಿತ ಶಾಸ್ತ್ರಜ್ಞ ರಾಮಾನುಜನ್ ಕುರಿತ ವಸ್ತು ಪ್ರದರ್ಶನ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ರಾಮಾನುಜನ್ ಗಣಿತವನ್ನು ಅವರೇ ಕಲಿತರು. ಅದರಲ್ಲಿ ಹೊಸ ಆವಿಷ್ಕಾರ ಮಾಡಿದರು. ಜಗತ್ತಿನ ಗಣಿತಕ್ಕೆ ರಾಮಾನುಜನ್ ಅವರ ಕೊಡುಗೆ ಅಪಾರವಾಗಿದೆ' ಎಂದು ನೆನೆಪಿಸಿಕೊಂಡರು.

`ರಾಮಾನುಜನ್ ತುಂಬ ಬಡತನದಲ್ಲಿ ಬೆಳೆದವರು. ಆದರೂ, ಬಡತನವು ಅವರ ಪ್ರತಿಭೆಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಲಾಗಲಿಲ್ಲ. ಅವರು ಅಪ್ರತಿಮ ಪ್ರತಿಭಾವಂತರು ಮತ್ತು ಬುದ್ಧಿಶಾಲಿಯಾಗಿದ್ದರು. ಅವರು ತಮ್ಮ ಪ್ರಯತ್ನದಿಂದಲೇ ಬೆಳೆದು ಸಾಧನೆ ಮಾಡಿದರು.

ಸಂಶೋಧನೆಯಲ್ಲಿನ ಪ್ರತಿ ಸೋಲು ಅವರಿಗೆ ಮುಂದಿನ ಸಂಶೋಧನೆಗೆ ಸ್ಫೂರ್ತಿಯಾಯಿತು' ಎಂದರು.

`ದೇಶವನ್ನು ಸುಭದ್ರಗೊಳಿಸಲು ಬರೀ ಮಿಲಿಟರಿ ಪಡೆಯೊಂದನ್ನೇ ಬಲಿಷ್ಠಗೊಳಿಸಿದರೆ ಸಾಲದು. ಅದರ ಜತೆಗೆ ಬೇರೆ-ಬೇರೆ ಕ್ಷೇತ್ರಗಳನ್ನು ಬಲಪಡಿಸಲು ಪ್ರಯತ್ನ ಮಾಡಬೇಕು. ಹೊಸ ತಂತ್ರಜ್ಞಾನಗಳಿಗೂ ಪ್ರೋತ್ಸಾಹವನ್ನು ನೀಡಬೇಕು' ಎಂದು ಸಲಹೆ ನೀಡಿದರು.

`ಡಿ.22 (ಶನಿವಾರ) ಶ್ರೀನಿವಾಸ ರಾಮಾನುಜನ್ ಅವರು ಹುಟ್ಟಿದ ದಿನ ಇದರಿಂದ ಆ ದಿನವನ್ನು ಗಣಿತ ದಿನವೆಂದು ಮತ್ತು ಅವರ 125 ನೇ ಹುಟ್ಟಿದ ವರ್ಷದ ಸಂದರ್ಭವನ್ನು ಗಣಿತದ ವರ್ಷವೆಂದು ದೇಶದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಇದು ಅವರ ಅಪಾರವಾದ ಕೊಡುಗೆಗೆ ನಾವು ನೀಡುವ ಅತ್ಯಲ್ಪ ಕಾಣಿಕೆಯಾಗಿದೆ' ಎಂದರು.

`ಗಣಿತದ ಬಗ್ಗೆ ಇಂದಿನ ಯುವ ಜನತೆಗೆ ಇರುವ ಭಯವನ್ನು ಹೋಗಲಾಡಿಸಬೇಕು. ಗಣಿತದ ಸಂಖ್ಯೆಗಳ ಜತೆಗೆ ಇಂದಿನ ಯುವಕರು ಆಟವಾಡುವಂತಾಗಬೇಕು. ಗಣಿತದಲ್ಲಿ ಹೊಸ ಸಂಶೋಧನೆಗಳು ನಡೆಯಬೇಕು. ಚಿಕ್ಕ ಮಕ್ಕಳಿಗೆ ಮತ್ತು ಯುವಕರಿಗೆ ಗಣಿತದಲ್ಲಿ ಆಸಕ್ತಿ ಬೆಳೆಯಲು ಪ್ರೋತ್ಸಾಹ ನೀಡಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT