ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರಿಯಾ ಕೊರತೆ: ರೈತರ ಪರದಾಟ

Last Updated 13 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಬಿಳಿಗೆರೆ ಹೋಬಳಿ ಸೇರಿದಂತೆ ಎಲ್ಲೆಡೆ ಯೂರಿಯಾ ರಸಗೊಬ್ಬರ ಸಾಕಷ್ಟು ದಾಸ್ತಾನು ಇಲ್ಲದೇ ರೈತರು ಪರದಾಡುವಂತಾಗಿದೆ.

ತಾಲ್ಲೂಕಿನ ಕಬಿನಿ ಬಲದಂಡೆ ನಾಲೆ, ಹುಲ್ಲಹಳ್ಳಿ ಮತ್ತು ರಾಂಪುರ ನಾಲೆ ವ್ಯಾಪ್ತಿಯಲ್ಲಿ  ಮುಂಗಾರು ಹಂಗಾಮಿನ ಬತ್ತದ ಬೆಳೆಯ ಕೃಷಿ ಚಟುವಟಿಕೆ ನಡೆದಿದೆ. ಈಗ ಕಳೆ ಕೀಳುವ ಹಂತ ತಲುಪಿದೆ. ಈ ಸಂದರ್ಭದಲ್ಲಿ ಯೂರಿಯಾ ರಸಗೊಬ್ಬರ ಕೃಷಿಗೆ ಬೇಕಾಗಿದೆ. ಆದರೆ, ತಾಲ್ಲೂಕು ಆಡಳಿತ ಯೂರಿಯಾವನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಿಲ್ಲ. ಪರಿಣಾಮ ರೈತರು ದಿನವಿಡೀ ಸರತಿ ಸಾಲಿನಲ್ಲಿ ನಿಂತು ಗೊಬ್ಬರ ಪಡೆಯಲು ಹರಸಾಹಸ ಮಾಡಬೇಕಿದೆ. ದಾಸ್ತಾನು ಕೊರತೆಯಿಂದ ಎಲ್ಲ ರೈತರಿಗೂ ಗೊಬ್ಬರ ಸಿಗುತ್ತಿಲ್ಲ. ಬಿಳಿಗೆರೆ ರೈತ ಸಹಕಾರ ಸಂಘದಲ್ಲಿ ಯೂರಿಯಾ ಪಡೆಯಲು ನೂರಾರು ರೈತರು, ಮಹಿಳೆಯರು ಶುಕ್ರವಾರ ಸಾಲುಗಟ್ಟಿ ನಿಂತಿದ್ದರು. ಆದರೆ, ಗೊಬ್ಬರ ಸಿಗದ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕಿ ಮನೆಯತ್ತ ಮುಖ ಮಾಡಿದರು.

ಬಿಳಿಗೆರೆ ಹೋಬಳಿಗೆ ಇನ್ನೂ 40 ಟನ್ ಗೊಬ್ಬರ ಬೇಕಾಗಿದೆ. ಖಾಸಗಿ ಅಂಗಡಿ ಮೂಲಕ ಮಾರಾಟಕ್ಕೆ ಅವಕಾಶ ಕೊಟ್ಟರೆ, ಅವರು ಹೆಚ್ಚಿನ ಬೆಲೆಗೆ ಮಾರುತ್ತಾರೆ. ಹಾಗಾಗಿ ಸಹಕಾರ ಸಂಘದ ಮೂಲಕವೇ ಗೊಬ್ಬರ ಮಾರಾಟಕ್ಕೆ ವ್ಯವಸ್ಥೆ ಮಾಡುವಂತೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿಳಿಗರೆ ಗುರುಲಿಂಗೇಗೌಡ ಒತ್ತಾಯಿಸಿದ್ದಾರೆ.

ಬೈಪಾಸ್ ರಸ್ತೆಯಲ್ಲಿ ಬೀದಿ ದೀಪಗಳ ಸಾಲು
ನಂಜನಗೂಡು: ಪಟ್ಟಣ ಹೊರ ವಲಯದ ಮೈಸೂರು- ಚಾಮರಾಜನಗರ ಬೈಪಾಸ್ ಜೋಡಿ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮುಡಿಕಟ್ಟೆವರೆಗೆ ಅಳವಡಿಸಿರುವ ಬೀದಿ ದೀಪಗಳ ಸಾಲನ್ನು ಶಾಸಕ ವಿ.ಶ್ರೀನಿವಾಸಪ್ರಸಾದ್ ಈಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮೊದಲ ಹಂತದಲ್ಲಿ 39 ಕಂಬಗಳನ್ನು ಸ್ಥಾಪಿಸಿ 78 ಸೋಡಿಯಂ ದೀಪಗಳನ್ನು ಅಳವಡಿಸಲಾಗಿದೆ. ಇದಕ್ಕೆ 20 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT