ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೋಪ್ ಆರ್ಥಿಕ ಬಿಕ್ಕಟ್ಟು: ಭಾರತದ ಸಲಹೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯೂರೋಪ್ ಒಕ್ಕೂಟದ ದೇಶಗಳು ತಮ್ಮ ಸಾಲದ ಬಿಕ್ಕಟ್ಟಿನಿಂದ ಹೊರಬರುವ ದಾರಿಯನ್ನು ತಾವೇ ಕಂಡುಕೊಳ್ಳಬೇಕು ಮತ್ತು ತಮಗೆ ಬೇಕಿರುವ ಸಾಲದ ಅಗತ್ಯದ ವಿಶ್ವಾಸಾರ್ಹ ಅಂದಾಜು ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ `ಜಿ-20~ ವಾಣಿಜ್ಯ ಸಚಿವರ ಸಭೆಯಲ್ಲೂ, ಯೂರೋಪ್ ದೇಶಗಳು  ತಮ್ಮ ಸಾಲದ ಬಿಕ್ಕಟ್ಟಿಗೆ ತಾವೇ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಅಭಿ   ಪ್ರಾಯ ವ್ಯಕ್ತವಾಗಿದೆ ಎಂದರು.

ಸಾಲದ ಬಿಕ್ಕಟ್ಟು ನಿಗ್ರಹಕ್ಕೆ ಸಂಬಂಧಿಸಿದಂತೆ ಯೂರೋಪ್ ಆರ್ಥಿಕ ತಜ್ಞರು ಅಕ್ಟೋಬರ್ 23ರಂದು ಸಭೆ ನಡೆಸಲಿದ್ದಾರೆ. ಸಾಲದ ಬಿಕ್ಕಟ್ಟು ನಿಗ್ರಹಕ್ಕೆ ಯೂರೋಪ್ ಅಂತರರಾಷ್ಟ್ರೀಯ ಸಮುದಾಯದಿಂದ ಹೆಚ್ಚುವರಿಯಾಗಿ ಯಾವ ನೆರವು ಬಯಸುತ್ತದೆ ಎನ್ನುವುದು ಈ ಸಭೆಯ ನಂತರ ತಿಳಿಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT