ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್: ಹತ್ತು ಬಂಡಕೋರರ ಹತ್ಯೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸನಾ (ಎಎಫ್‌ಪಿ): ಆಡಳಿತ ವಿರೋಧಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದ ಯೆಮನ್‌ನ ಸೇನಾ ಬಣವೊಂದರ ಹತ್ತು ಬಂಡುಕೋರರನ್ನು ಗುಂಡಿಟ್ಟು ಕೊಲ್ಲಲಾಗಿದೆ.

ಕರ್ತವ್ಯ ನಿರತವಾಗಿದ್ದ ಸಶಸ್ತ್ರ ಸೇನಾ ವಿಭಾಗದ ಜನರಲ್ ಅಲಿ ಮೊಹಸೀನ್ ಅಲ್ ಅಹಮರ್ ನೇತೃತ್ವದ ತುಕಡಿಯ ಒಂಬತ್ತು ಜನರು ಹಾಗೂ ಸ್ವತಃ ಅಲಿ ಮೊಹಸಿನ್ ಅವರನ್ನು ಸರ್ಕಾರವು ಮೋಸದಿಂದ ಕೊಂದು ಹಾಕಿದೆ. ಶನಿವಾರ ಮತ್ತು ಭಾನುವಾರ  ಈ ಹತ್ಯೆ ನಡೆಸಲಾಗಿದೆ ಎಂದು ಬಂಡುಕೋರರ ಬಣದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹೇಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು ಇದಕ್ಕೆಲ್ಲಾ ಯೆಮೆನ್ ಅಧ್ಯಕ್ಷರ ಪುತ್ರ ಅಹಮ್ಮದ್ ಮತ್ತು ಈತನ ಸಂಬಂಧಿಕರೇ ಇರುವ ಇತರೆ ರಕ್ಷಣಾ ಪಡೆಗಳು ಕಾರಣವಾಗಿವೆ ಎಂದು ಆಪಾದಿಸಿದೆ.

ಇಂತಹ ಕೃತ್ಯವು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸುವ ಬದಲಿಗೆ ಅವರ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿಕೆ ವಿವರಿಸಿದೆ.ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರ ಸುದೀರ್ಘ 33 ವರ್ಷಗಳ ನಿರಂಕುಶ ಆಡಳಿತವನ್ನು ವಿರೋಧಿಸಿ ಪ್ರಜಾಪ್ರಭುತ್ವ ವಾದಿಗಳು ಇದೇ ಜನವರಿಯಿಂದಲೇ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT