ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌ ಚುನಾವಣೆಗೆ ಭಾರತದ ಸಹಕಾರ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಮತದಾರರ ಪಟ್ಟಿ ಸಿದ್ಧಪಡಿಸುವಿಕೆ, ಚುನಾವಣೆ ನಿರ್ವಹಣೆ ಕುರಿತು ಯೆಮನ್‌ಗೆ ಅಗತ್ಯ ನೆರವು ನೀಡಲು ಭಾರತ ಮುಂದಾ­ಗಿದ್ದು, ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌ ಅವರು ಯೆಮನ್‌ಗೆ ಭೇಟಿ ನೀಡಿದ್ದು, ಈ  ಸಂದ­ರ್ಭ­ದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಯೆಮನ್‌ನ ಚುನಾವಣಾ ಸುಪ್ರೀಂ ಆಯೋಗದ ಅಧ್ಯಕ್ಷರ ಜತೆ ಸಂಪತ್‌  ಸಮಾಲೋಚನೆ ನಡೆಸಿದರು ಎಂದು ಸನಾದಲ್ಲಿರುವ ಭಾರತದ ರಾಯ­ಭಾರ ಕಚೇರಿ ಪ್ರಕಟಣೆ ತಿಳಿಸಿದೆ. ‘ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾ­ಪ್ರಭುತ್ವ ರಾಷ್ಟ್ರ ಎನಿ­ಸಿದ್ದು, ಮುಕ್ತ, ನ್ಯಾಯಸಮ್ಮತ ಚುನಾವಣೆ­ಗಳನ್ನು ನಡೆಸುವ ವಿಷಯ­ದಲ್ಲಿ ಅಗಾಧ ಅನುಭವ ಹೊಂದಿದೆ. ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳುವಲ್ಲೂ ಭಾರತ ಮುಂದೆ ಇದ್ದು ಈ ವಿಷಯ­ದಲ್ಲಿ ಯೆಮನ್‌ಗೆ ಅಗತ್ಯ ಸಹಕಾರ ಬೇಕಾಗಿದೆ’ ಎಂದು ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಲೋಕಸಭಾ ಚುನಾ­ವ­ಣೆ­ಗಳು ನಡೆಯಲಿದ್ದು, ಈ ಸಂದರ್ಭ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ನಿಯೋಗ ಕಳುಹಿಸು­ವಂತೆ ಸಂಪತ್‌, ಯೆಮನ್‌ ಅಧಿಕಾರಿ­ಗಳಿಗೆ ಇದೇ ವೇಳೆ ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT