ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಸಪ್ತಾಹ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿವಬಾಲಯೋಗಿ ಮಹಾರಾಜ ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಯೋಗ ಸಪ್ತಾಹದ ಉದ್ಘಾಟನಾ ಸಮಾರಂಭ ಫೆ. 4 ರಂದು ಬೆಳಿಗ್ಗೆ 9.30ಕ್ಕೆ ನಗರದ ಜೆ.ಪಿ.ನಗರದ ಶಿವಬಾಲಯೋಗಿ ಮಹಾರಾಜ ಆಶ್ರಮದ ಆವರಣದಲ್ಲಿರುವ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಿವಬಾಲಯೋಗಿ ಮಹಾರಾಜ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಕಾಳಪಂಡ ಬಿ.ವಿಶ್ವನಾಥ್, ಒಟ್ಟು 40 ದಿನಗಳ ಕಾಲ ನಡೆಯಲಿರುವ ನಡೆಯಲಿರುವ ಶಿಬಿರದಲ್ಲಿ ಯೋಗ ಶಿಕ್ಷಕರು ಯೋಗ, ಧ್ಯಾನ, ಪ್ರಾಣಾಯಾಮ, ಪ್ರಕೃತಿ ಚಿಕಿತ್ಸೆ ವಿಧಾನದ ಬಗ್ಗೆ ತಿಳಿಸಲಿದ್ದಾರೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅತಿಥಿಯಾಗಿ ಆಗಮಿಸಲಿದ್ದು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಟ್ರಸ್ಟ್‌ನ ಪದಾಧಿಕಾರಿಗಳಾದ ಎಂ.ಶ್ರೀನಿವಾಸ್,ಶ್ರೀಪಾದರಾವ್, ಎಸ್.ನರಸಿಂಹಮೂರ್ತಿ ಸ್ವಾಮೀಜಿ ಹಾಗೂ ಕಪಿಲಾ ಶ್ರೀಧರ ಮತ್ತಿತರರು ಇದ್ದರು. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ನೋಂದಣಿಗೆ ಡಾ. ಎಂ.ಎಂ.ಶಿವಕುಮಾರ (94485 93241), ಎಂ.ವಿ.ರೆಡ್ಡಿ (99029 56190) ಅಥವಾ ಕೆ.ಜಿ.ಸೇತುರಾಮ್ (97404 44555) ಅವರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT