ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದಿಂದ ಏಕಾಗ್ರತೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನೆಲಮಂಗಲ: `ಯೋಗದಿಂದ ಏಕಾಗ್ರತೆ ಬರುತ್ತದೆ. ಧ್ಯಾನದಿಂದ ಆಜ್ಞಾನ ದೂರವಾಗುತ್ತದೆ. ಅಂತರಂಗ ಶುದ್ಧವಾಗಲು ಯೋಗ ಧ್ಯಾನಗಳೆರಡೂ ಅಗತ್ಯ~ ಎಂದು ಆರ್ಟ್ ಆಫ್ ಲಿವಿಂಗ್‌ನ ಅಧ್ಯಕ್ಷ ಶ್ರೀ ಶ್ರೀ ರವಿಶಂಕರ ಗುರೂಜಿ ತಿಳಿಸಿದರು.

ಸ್ಥಳೀಯ ಬಸವಣ್ಣದೇವರ ಮಠದಲ್ಲಿ ನಿಸರ್ಗ ಭಾರತಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ `ಮಹಾ ಸತ್ಸಂಗ~ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಕೊಳೆಗೇರಿ ಜನರ ಸುಧಾರಣೆಗೆ ಮುಂದಾಗಬೇಕು, ರೈತರು ವಿಷಪೂರಿತ ಗೊಬ್ಬರ ಬಳಸಿ ಭೂ ತಾಯಿಯನ್ನು ಮಲಿನ ಮಾಡದೆ ಸಾವಯವ ಕೃಷಿಯಲ್ಲಿ ತೊಡಗಬೇಕು ಪಾವಿತ್ರ್ಯವನ್ನು ಕಾಪಾಡಬೇಕು~ ಎಂದು ಸೂಚಿಸಿದರು.

`ಬೇರೆಯವರ ಬಗ್ಗೆ ಕಲ್ಪನೆ ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಕಾಲ ಹರಣ ಮಾಡದೆ, ಸೇವೆಯಲ್ಲಿ ತೊಡಗಿಸಿಕೊಂಡು, ಸುತ್ತಮುತ್ತಲ ವಾತಾವರಣ ಶುಚಿಯಾಗಿಡಬೇಕು~ ಎಂದು ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT