ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗನರಸಿಂಹಸ್ವಾಮಿ ಹೊಸ ವಿಗ್ರಹಕ್ಕೆ ಅದ್ದೂರಿ ಸ್ವಾಗತ

Last Updated 9 ಅಕ್ಟೋಬರ್ 2011, 4:40 IST
ಅಕ್ಷರ ಗಾತ್ರ

ಸಾಲಿಗ್ರಾಮ: ಇಲ್ಲಿನ ಪುರಾತನ ಯೋಗನರಸಿಂಹಸ್ವಾಮಿ ದೇವಾಲಯದ ಮೂಲ ವಿಗ್ರಹ ಭಗ್ನಗೊಂಡ ಹಿನ್ನೆಲೆಯಲ್ಲಿ ಶಾಸಕ ಸಾ.ರಾ. ಮಹೇಶ್ ಅವರು ರೂ.5 ಲಕ್ಷ ವೆಚ್ಚದಲ್ಲಿ ಹೊಸ ವಿಗ್ರಹ ಕೆತ್ತನೆ ಮಾಡಿಸಿದ್ದು, ಶನಿವಾರ ಹೊಸ ವಿಗ್ರಹ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಪೂರ್ಣಕುಂಭ ಸ್ವಾಗತ ನೀಡಿದರು.

ಪ್ರಾಚ್ಯವಸ್ತು ಇಲಾಖೆ ರೂ.1ಕೋಟಿಗೂ ಅಧಿಕ ವೆಚ್ಚದಲ್ಲಿ ದೇವಾಲಯದ ಜೀಣೋದ್ಧಾರ ಕಾಮಗಾರಿಗೆ ಚಾಲನೆ ನೀಡುತ್ತಿದ್ದಂತೆ ನಾಗರಿಕರು ಯೋಗನರಸಿಂಹಸ್ವಾಮಿಯ ಮೂಲ ವಿಗ್ರಹ ಬದಲಿಸಲು ಮನವಿ ಮಾಡಿದರು. ಸ್ವಂತ ಹಣದಲ್ಲಿ ವಿಗ್ರಹ ನಿರ್ಮಿಸುವ ಭರವಸೆಯನ್ನು ಶಾಸಕರು ನೀಡಿದ್ದರು. ಮೈಸೂರಿನ ಭಾಷ್ಯಂ ಸ್ವಾಮಿಜೀ ಸಲಹೆಯಂತೆ ಈ ವಿಗ್ರಹ ಕೆತ್ತನೆ ಮಾಡಿಸಲಾಗಿದೆ. ಮಹಿಳೆಯರು ವಯೋವೃದ್ಧರಾದಿಯಾಗಿ ಎಲ್ಲರೂ ಶಾಸಕರಿಗೆ ತಿಲಕವಿಟ್ಟು ಆರತಿ ಬೆಳಗಿದರು.

ಪಟ್ಟಣದ ಗಾಂಧಿ ವೃತ್ತ, ಮಹಾವೀರ ರಸ್ತೆಯಿಂದ ದೇವಾಲಯದ ಪ್ರಾಂಗಣದ ತನಕ ಮಹಿಳೆಯರು ರಸ್ತೆ ಶುಚಿಗೊಳಿಸಿ ಮನೆಯ ಮುಂಭಾಗ ರಂಗೋಲಿ ಬಿಟ್ಟು ಪೂಜೆ ಸಲ್ಲಿಸಿದರು. ಕಳೆದ ಒಂದು ತಿಂಗಳಿಂದ ಮಳೆ ಬಾರದೆ ಕಂಗಾಲಾಗಿದ್ದ ಜನತೆ ಕಾಕತಾಳೀಯ ಎಂಬಂತೆ ಶನಿವಾರ ಹೊಸ ವಿಗ್ರಹ ಬರುವ ಮುನ್ನ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತು.

ಗ್ರಾ.ಪಂ. ಅಧ್ಯಕ್ಷ ಎಸ್.ಕೆ. ಶಿವಣ್ಣ, ತಾ.ಪಂ. ಸದಸ್ಯೆ ಜಾನಕಮ್ಮ, ಎಸ್.ಕೆ. ಶಿವಣ್ಣ, ಧರ್ಮದರ್ಶಿ ಅಂಜಿನೀ ಗೌಡ, ಎಸ್.ಆರ್. ರಾಮೇಗೌಡ, ಮೆಡಿಕಲ್ ರಾಜಣ್ಣ, ಕುಪ್ಪಳ್ಳಿ ಸೋಮು, ಯಜಮಾನ್ ಕರೀಗೌಡ, ಎಸ್.ಎಸ್. ರಾಮಕೃಷ್ಣೇ ಗೌಡ, ಜಯಮ ಎಸ್.ಎಚ್. ನಿಂಗೇಗೌಡ, ಶಿವರಾಜ್, ಬೆಲ್ಲದ ರಾಜಣ್ಣ, ಪೂರ್ಣಚಂದ್ರಗೌಡ, ಬಾಬು ಹನುಮಾನ್, ಎ.ಟಿ. ಸೋಮಶೇಖರ್, ಪಾರಿತಮ್ಮಯ್ಯಣ್ಣ, ಗೋಪಾಲ ಗೌಡ, ಕೆಇಬಿ ಕಿಟ್ಟಪ್ಪ, ರವಿ ಗೌಡ, ಎಸ್.ವಿ. ನಟರಾಜ್, ಎಸ್.ಬಿ. ಶೇಖರ್, ಪಾರ್ವತಿ, ಜವರೇಗೌಡ, ಎಸ್.ಎಸ್. ಅಶೋಕ್, ಕುಚೇಲ ಗೌಡ, ದೇವೇಗೌಡ, ನರಸಿಂಹ, ರೇವಣ್ಣ, ಎಸ್.ಬಿ. ಅಶೋಕ್, ಪಾಪಣ್ಣ, ವಸಂತ, ಕೊತ್ವಾಲ್ ಮಂಜ, ಜಯಣ್ಣ, ಪುಟ್ಟಸ್ವಾಮಿ ಗೌಡ, ಎಸ್.ಕೆ.ಯೋಗಣ್ಣ, ಕೃಷ್ಣೇಗೌಡ, ರೂಪಶ್ರೀ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT