ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೇಂದ್ರ ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ

Last Updated 1 ಜೂನ್ 2011, 18:55 IST
ಅಕ್ಷರ ಗಾತ್ರ

ಬೆಂಗಳೂರು: ಯೋಗೇಂದ್ರ ಪಾಲ್ ಸಿಂಗ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

2007ರ ನವೆಂಬರ್‌ನಿಂದ ಈ ಹುದ್ದೆಯಲ್ಲಿದ್ದ ರವಿ ಸವಾನಿ ಅವರು ನಿವೃತ್ತಿ ಹೊಂದುತ್ತಿದ್ದು ಅವರ ಸ್ಥಾನವನ್ನು 55 ವರ್ಷ ವಯಸ್ಸಿನ ಸಿಂಗ್ ತುಂಬಲಿದ್ದಾರೆಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮೂವತ್ತು ವರ್ಷಗಳ ಕಾಲ ಪೊಲೀಸ್ ಸೇವೆಯಲ್ಲಿದ್ದ ಸಿಂಗ್ ಅವರು ಸಿಬಿಐ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆದ್ದರಿಂದ ಅವರನ್ನು ಸೂಕ್ತವೆಂದು ಐಸಿಸಿ ಪರಿಗಣಿಸಿದೆ ಎಂದು ಐಸಿಸಿ ಮಾಧ್ಯಮ ವ್ಯವಸ್ಥಾಪಕ ಜೇಮ್ಸ ಫಿಟ್‌ಗೆರಾಲ್ಡ್ ಹೇಳಿದ್ದಾರೆ.

ಸವಾನಿ ನಿವೃತ್ತಿ ಹೊಂದಿದ ನಂತರವೂ ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಅವರ ದೀರ್ಘ ಕಾಲದ ಅನುಭವವು ಐಸಿಸಿಗೆ ಅಗತ್ಯವಾಗಿದೆ ಎಂದು ಕೂಡ ಜೇಮ್ಸ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT