ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಜಾರಿಗೆ ಶಾಸಕರ ಸೂಚನೆ

ಐದು ಗ್ರಾ.ಪಂಗಳ ಕಾಮಗಾರಿ ಪರಿಶೀಲನಾ ಸಭೆ
Last Updated 10 ಜನವರಿ 2014, 8:26 IST
ಅಕ್ಷರ ಗಾತ್ರ

ಕೂಡ್ಲಿಗಿ: ‘ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಲ್ಲೂಕಿನ ಐದು ಗ್ರಾಮ ಪಂಚಾಯ್ತಿಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪ­ಕವಾಗಿ ಜಾರಿ ಗೊಳಿಸಬೇಕು’ ಎಂದು ಶಾಸಕ ಭೀಮಾ ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗಂಗಾಕಲ್ಯಾಣ ಮತ್ತು ವಸತಿ ಯೋಜನೆಗಳು ಬಡವರಿಗೆ ನೀಡಬೇಕು, ಆದರೆ ಇವುಗಳನ್ನು ಹಣ ಪಡೆದು ಉಳ್ಳವರಿಗೆ ನೀಡಲಾಗುತ್ತದೆ.

ಹಗರಿ­ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ತ್ರೈಮಾಸಿಕ ಅಭಿವೃದ್ಧಿ ಹಾಗೂ ಜಾಗೃತ ಸಮಿತಿ ಸಭೆಗಳನ್ನು ನಡೆಸಿಲ್ಲ. ಹಗರಿಬೊಮ್ಮನ­ಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಆಡಳಿತವಿದ್ದ ೪ ಗ್ರಾಮ ಪಂಚಾಯ್ತಿಗಳಿಗೆ ಐದು ವರ್ಷಗಳಲ್ಲಿ ಒಂದೇ ಒಂದು ಮನೆಯನ್ನು ನೀಡಿಲ್ಲ. ನಾವು ಯಾವುದೇ ರಾಜಕೀಯ ಮಾಡಲ್ಲ. ಎಲ್ಲಿಯೇ ಅಗಲಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂದು ಹೇಳಿದರು.

ಕೆ.ಅಯ್ಯನಹಳ್ಳಿ ಮತ್ತು ಕಂದಗಲ್ಲು ಗ್ರಾಮ ಪಂಚಾಯ್ತಿಯಲ್ಲಿ ಬಸವ ವಸತಿ ಯೋಜನೆಯಲ್ಲಿ ಭಾರಿ ಅವ್ಯವಹಾರ­ವಾಗಿದ್ದು, ಫಲಾನುಭವಿ­ಗಳಿಂದ ಹಣ ಪಡೆದು ಈಗಾಗಲೇ ವಸತಿ ಯೋಜನೆಡಿಯಲ್ಲಿ ಮನೆ ಪಡೆದವರಿಗೆ, ಶ್ರೀಮಂತರಿಗೆ ನೀಡಲಾಗಿದೆ. ಈ ಪಟ್ಟಿಯನ್ನು ತಕ್ಷಣ ರದ್ದುಪಡಿಸಿ ವಿಶೇಷ ಗ್ರಾಮ ಸಭೆಯನ್ನು ನಡೆಸಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು, ಫಲಾನುಭವಿಗಳು ಹೆಚ್ಚಾಗಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಇದಕ್ಕೆ ತಾಲ್ಲೂಕು ಪಂಚಾಯ್ತಿ ಸಿಇಒ ಜವಾಬ್ದಾರಿ ಎಂದು ಎಚ್ಚರಿಸಿದರು.

ಸಭೆಯಲ್ಲಿದ್ದ ಕಂದಗಲ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಇದರಲ್ಲಿ ಯಾವುದೇ ಅವ್ಯವಹಾರ ಮಾಡದೆ  ಸೂಕ್ತ ಆಯ್ಕೆ ಮಾಡಲಾಗಿದೆ ಎಂದರು. ಆದರೆ ಶಾಸಕ ಭೀಮನಾಯ್ಕ ಇದನ್ನು ಒಪ್ಪದೆ ವಿಶೇಷ ಗ್ರಾಮ ಸಭೆಯನ್ನು ನಡೆಸಬೇಕು ಎಂದು ಸೂಚಿಸಿದರು.

ಮುಂದಿನ ದಿನಗಳಲ್ಲಿ ನೀರಿಗೆ ತೊಂದ­ರೆಯಾಗದಂತೆ ಕ್ರಮ ಕೈಗೊಳ್ಳ­ಬೇಕು ಎಂದು ಜಿಲ್ಲಾ ಪಂಚಾಯ್ತಿ ಕಾರ್ಯ­ನಿರ್ವಹಣಾಧಿಕಾರಿಗೆ ತಿಳಿಸಿ­ದರು. ನೂತನ ಬೋರವೆಲ್ ಕೊರೆದಾಗ ನೀರು ಬಂದಿಲ್ಲವಾದರೆ ತಕ್ಷಣವೇ ಮತ್ತೊಂದು ಕಡೆ ಕೊರೆಸುವಂತೆ ಹೇಳಿದರು.
ಕ್ಷೇತ್ರದಲ್ಲಿನ  ಪಂಚಾಯ್ತಿಗಳಲ್ಲಿ  ಹೆಚ್ಚು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಜನರಿರುವ ಗ್ರಾಮಗಳಲ್ಲಿ ೧೦ ಲಕ್ಷ ವೆಚ್ಚದ ಅಂಬೇಡ್ಕರ್ ಮತ್ತು ವಾಲ್ಮೀಕಿ ಭವನಗಳನ್ನು ನಿರ್ಮಿಸಲು ಪ್ರಸ್ತಾವ ಸಲ್ಲಿಸಲು ಸಮಾಜ ಕಲ್ಯಾಣಧಿಕಾರಿ ಮಂಜುಳಾ ಅವರಿಗೆ ಸೂಚಿಸಿದರು.

ತಾಲ್ಲೂಕಿನ ಅಕ್ಕಾಪುರ ಗ್ರಾಮಕ್ಕೆ ಮಂಜೂರಾಗಿದ್ದ ಅಂಗನವಾಡಿ ಕಟ್ಟಡವನ್ನು ಯಾರನ್ನು ಕೇಳಿ ತಿಮ್ಮಲಪುರಕ್ಕೆ ವರ್ಗಾವಣೆ ಮಾಡಿದಿರಿ ಎಂದು ಶಾಸಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೃಷ್ಣಮೂರ್ತಿ ಅವರನ್ನು ಕೇಳಿದರು. ಅಲ್ಲಿಯ ಜನ ಕಟ್ಟಡ ನಿರ್ಮಿಸಲು ನಿವೇಶನ ನೀಡುತ್ತಿಲ್ಲ. ಅದರಿಂದ ತಿಮ್ಮಲಾಪುರಕ್ಕೆ ವರ್ಗಾಯಿಸಲಾಗಿದೆ ಎಂದು ಸಿಡಿಪಿಒ ತಿಳಿಸಿದರು. ಶಾಸಕರು ಸ್ವತಃ ತಾವೇ ಸ್ಥಳಕ್ಕೆ ಬಂದು ನಿವೇಶನ ಗುರುತಿಸಿ ಕೊಡುತ್ತೇವೆ ಅಕ್ಕಾಪುರದಲ್ಲಿಯೇ ಅಂಗನವಾಡಿ ಕಟ್ಟದ ನಿರ್ಮಿಸಿ ಎಂದು ತಾಕೀತು ಮಾಡಿದರು.

ಕೊಟ್ಟೂರು ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಮುಖ್ಯ ರಸ್ತೆಯ ಕಾಮಗಾರಿ ಬಹಳ ಕಳಪೆಯಾಗಿದೆ ಎಂದು ದೂರುಗಳಿದ್ದು, ಅವುಗಳನ್ನು ಪರಿಶೀಲನೆ ಮಾಡುವವರೆಗೆ ಕಾಮಗಾರಿಯನ್ನು ತಡೆಹಿಡಿಯುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹನುಮಂತ ರಾಜು ಅವರಿಗೆ ಹೇಳಿದರು.

ಸಭೆಯಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ, ಪಶು ಸಂಗೋಪನೆ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಇಲಾಖೆ, ಸಣ್ಣ ನೀರವರಿ ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಾರದ ರಾಜೇಂದ್ರ ಪ್ರಸಾದ್, ಪಿ.ಚನ್ನಬಸವನ ಗೌಡ, ಹುಲಗಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಎ.ಎಂ. ಗುರುಪ್ರಸಾದ್, ಕೊಳ್ಳಿ ಹೊನ್ನೂರಮ್ಮ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT