ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ವೈಫಲ್ಯ-ಆರ್ಥಿಕತೆಗೆ ಧಕ್ಕೆ

Last Updated 25 ಫೆಬ್ರುವರಿ 2012, 10:15 IST
ಅಕ್ಷರ ಗಾತ್ರ

ಶಿರ್ವ(ಕಟಪಾಡಿ): `ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈವರೆಗೆ ಕೈಗೊಂಡಿರುವ ಎಲ್ಲ ಯೋಜನೆಗಳು ವಿಫಲವಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ದೇಶದ ಹಣಕಾಸು ವ್ಯವಸ್ಥೆ ಹಿಂದೆ ಬೀಳಲು ಕಾರಣ~ ಎಂದು  ಆರ್ಥಿಕ ತಜ್ಞ ಡಾ. ಜಿ.ವಿ. ಜೋಷಿ ಅಭಿಪ್ರಾಯ ಪಟ್ಟರು.

ವಿತ್ತೀಯ ಸೇರ್ಪಡೆ ಮಹತ್ವದ ಕುರಿತು ಶಿರ್ವದ ಎಂ.ಎಸ್. ಆರ್.ಎಸ್. ಕಾಲೇಜಿನಲ್ಲಿ  ಯು.ಜಿ.ಸಿ. ಪ್ರಾಯೋಜಕತ್ವದಡಿಯಲ್ಲಿ ಶುಕ್ರವಾರ ಜರುಗಿದ  ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. `ಆರ್ಥಿಕ ಸಬಲತೆಗೆ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕಾಗಿದೆ. ಭಾರತದಲ್ಲಿ 450 ಮಿಲಿಯನ್‌ಗೂ ಅಧಿಕ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಇನ್ನೂ ಮಾಹಿತಿ ಇಲ್ಲ~  ಎಂದರು.

`ಕರಾವಳಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿಗೆ ಮೂಲ್ಕಿ ಸುಂದರ್‌ರಾಂ ಶೆಟ್ಟಿ ಅವರ ಕೊಡುಗೆ ಅಪಾರ~ ಎಂದರು.
ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಯಶವಂತ್ ದೊಂಗ್ರೆ ಮಾತನಾಡಿ, `ಹಣಕಾಸು ವ್ಯವಸ್ಥೆ ವ್ಯವಸ್ಥಿತವಾಗಿ ಪ್ರಗತಿ ಕಾಣಬೇಕಾದರೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಸಾರ್ವಜನಿಕ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ನೀರು ಇನ್ನಿತರ ಮೂಲಸೌಕರ್ಯ ಯೋಜನೆಗಳು ತಳಮಟ್ಟದ ಗ್ರಾಮೀಣ ಪ್ರದೇಶದ ಜನರಿಗೂ ತಲುಪಬೇಕು~  ಎಂದರು.

ಕಾಲೇಜಿನ ಸಂಚಾಲಕ ಕೆ.ರಾಜರಾಂ ಶೆಟ್ಟಿ, ಪ್ರಾಂಶುಪಾಲ ಸುಧಾಕರ ಮಾರ್ಲ,  ಉಪನ್ಯಾಸಕರಾದ ಕರುಣಾಕರ ನಾಯಕ್, ವಿನೋಭ್ ನಾಥ್, ಸುಬ್ರಹ್ಮಣ್ಯ ಭಟ್, ಸುಪ್ರಿತಾ ಶೆಟ್ಟಿ, ಸಂದೀಪ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT