ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗೆ ಆಕ್ಷೇಪ ಸರಿಯಲ್ಲ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಹಣವನ್ನು ನೇರವಾಗಿ ಅವರವರ ಬ್ಯಾಂಕ್ ಖಾತೆಗಳಿಗೇ ವರ್ಗಾಯಿಸಬೇಕೆಂದಿರುವ ಭಾರತ ಸರ್ಕಾರದ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಬಡತನ ರೇಖೆಯ ಕೆಳಗೆ ಕೋಟಿ ಕೋಟಿ ಬಡವರನ್ನು ಶೋಷಿಸುತ್ತಿರುವ ಲಂಚಕೋರ ನೌಕರಶಾಹಿ ಈಗ ಸಾಕಷ್ಟು ಮುನಿಸಿಕೊಂಡಿದೆ. ಆದರೂ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಗೆ ವರ್ಗಾಯಿಸುವ ಹಿಂದಿನ ಹಂತದಲ್ಲೇ, ನೌಕರಶಾಹಿಯ ಅದೇ ಲಂಚಾವತಾರ ನಡೆಯುವುದಿಲ್ಲವೆಂದೇನೂ ಭಾವಿಸಬೇಕಾಗಿಲ್ಲ.

ಈ ವಿಷಯದಲ್ಲಿ ಅತಿ ಸೂಕ್ಷ್ಮವಾದ ಕಾನೂನಿನ ಅಂಶವೊಂದು ಚರ್ಚೆಗೆ ಒಳಗಾಗಿರುವಂತೆ ತೋರುತ್ತದೆ. ಗುಜರಾತ್ ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಾರಿ ಮಾಡಿರುವ ಈ ಯೋಜನೆ ಚುನಾವಣಾ ನೀತಿಸಂಹಿತೆಗೆ ವಿರುದ್ಧವಾಗಿದೆ ಎಂಬುದು ಚುನಾವಣಾ ಆಯೋಗದ ಆಕ್ಷೇಪ. ಆದರೆ, ಚುನಾವಣಾ ಆಯೋಗದ ಈ ಆಕ್ಷೇಪವು, ಕಾನೂನು ಪ್ರಕಾರ ಸಮರ್ಥನೀಯ ಎಂದೆನಿಸುವಂತಿಲ್ಲ.

ಹಾಗಾದರೆ, ಈ ಯೋಜನೆ ಜಾರಿಯ ಕಾರಣಕ್ಕಾಗಿ ಗುಜರಾತ್ ಚುನಾವಣೆಯನ್ನೇ ಮುಂದೂಡುವ ನಿರ್ಧಾರ ಚುನಾವಣಾ ಆಯೋಗಕ್ಕೆ ಸಾಧ್ಯವೆ? ಈ ಯೋಜನೆಯನ್ನು ಕುರಿತ ರಾಜಕೀಯ ಪಕ್ಷಗಳ ಟೀಕೆಗಳೇ ಬೇರೆ. ಆದರೆ, ಚುನಾವಣಾ ಆಯೋಗವು ಈ ಯೋಜನೆಯನ್ನು ಆಕ್ಷೇಪಿಸುತ್ತಿರುವುದು ಸರಿಯಲ್ಲ. ಏಕೆಂದರೆ, ಈ ಯೋಜನೆಯು ಗುಜರಾತ್ ಚುನಾವಣೆಯ ನೆಪದಲ್ಲೇ ಜಾರಿಯಾಗುತ್ತಿರುವುದಲ್ಲ.

ಬದಲಾಗಿ, ಈ ಹಿಂದೆ ಪ್ರಣವ್ ಮುಖರ್ಜಿ ಹಣಕಾಸು ಸಚಿರಾಗಿದ್ದಾಗಲೇ ಈ ಯೋಜನೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ ಎಂಬುದು ಸಂವಿಧಾನಾತ್ಮಕವಾದ ಸಂಗತಿ ಎಂಬುದನ್ನು, ರಾಜಕೀಯ ಪಕ್ಷಗಳಿಗಿಂತಲೂ ಪ್ರಥಮವಾಗಿ ಚುನಾವಣಾ ಆಯೋಗವೇ ಅರ್ಥಮಾಡಿಕೊಳ್ಳುವುದು ಕಾನೂನಿನ ಪ್ರಕಾರ ಅರ್ಥಪೂರ್ಣವಾದುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT