ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ನಿರ್ದೇಶಕರ ಕಾರ್ಯಾಗಾರ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ರಂಗಭೂಮಿಯು ಕಲಾತ್ಮಕ ಹಾಗೂ ಸೈದ್ದಾಂತಿಕ ನಿಲುವುಗಳನ್ನು ರೂಪಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ~ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಕೆ. ಮರಳಸಿದ್ದಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯು ಸುಬ್ಬಯ್ಯ ವೃತ್ತದ ಜೈಭೀಮ ಭವನದಲ್ಲಿ ಬುಧವಾರ ಏರ್ಪಡಿಸಿದ್ದ 10 ದಿನಗಳ ರಾಜ್ಯ ಮಟ್ಟದ ರಂಗ ನಿರ್ದೇಶಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
`ಹಿಂದಿನ ದಿನಗಳಿಗಿಂತ ಇಂದು ರಂಗಚಟುವಟಿಕೆಗಳಿಗೆ ಮಹತ್ವ ಪಡೆಯುತ್ತಿದ್ದು, ನಾಟಕಗಳ ಪ್ರದರ್ಶನ ಹೆಚ್ಚಾಗಿದೆ.

ಇದರಿಂದಾಗಿ ರಂಗಚಟುವಟಿಕೆಗಳು ರಾಜ್ಯಾದ್ಯಂತ ವಿಸ್ತಾರವಾಗಿದೆ~ ಎಂದು ಅವರು ತಿಳಿಸಿದರು.
`ರಂಗಭೂಮಿಯಲ್ಲಿ ಜಾಹಿರಾತು ಕಾಣಿಸದೇ ಇರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಸರ್ಕಾರ ಯಾವುದೇ ಸಾಹಿತ್ಯ ಚಟುವಟಿಕೆಗಳಿಗೆ ಬೆಂಬಲವನ್ನು ನೀಡಿ, ಉತ್ತಮ ಅಭಿರುಚಿಯನ್ನು ಸೃಷ್ಟಿಸುವ ಮಾಧ್ಯಮವಾಗಬೇಕು~ ಎಂದರು.

ಸಮಾರಂಭದಲ್ಲಿ ಮೈಸೂರು ರಂಗಾಯಣ ಮಾಜಿ ನಿರ್ದೇಶಕ ಚಿದಂಬರ್ ರಾವ್ ಜಂಬೆ, ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಅಧ್ಯಕ್ಷ ಆರ್.ಕೆ. ಹುಡಗಿ, ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT