ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಸಾಧ್ಯತೆಯ ಶೋಧನೆಗೆ ಸಲಹೆ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಂಗಭೂಮಿಯ ಆಳದಲ್ಲಿ ಅಡಗಿರುವ ರಂಗ ಸಾಧ್ಯತೆಗಳನ್ನು ಶೋಧಿಸುವ ಮೂಲಕ ಹೊಸ ರಂಗಪ್ರಯೋಗಕ್ಕೆ ನಾಂದಿ ಹಾಡಬೇಕಿರುವ ಅಂಶವನ್ನು ಕೃತಿಯ ಹೆಸರಿನಲ್ಲೇ ಸೂಚ್ಯವಾಗಿ ತಿಳಿಸಿರುವುದು ವಿಶೇಷವಾಗಿದೆ~ ಎಂದು ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು ಅಭಿಪ್ರಾಯಪಟ್ಟರು.

ಸಮುದಾಯ ಸಂಘಟನೆಯು ಕನ್ನಡ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕ.ವೆಂ.ರಾಜಗೋಪಾಲ ಅವರ `ಕನ್ನಡ ರಂಗಭೂಮಿಯ ಶೋಧದಲ್ಲಿ~ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಕೆ.ವಿ.ಸುಬ್ಬಣ್ಣ, ಟಿ.ಪಿ.ಕೈಲಾಸಂ ಸೇರಿದಂತೆ ವಿವಿಧ ನಾಟಕಕಾರರ ಕಾಲಘಟ್ಟದಲ್ಲಿ ರಚನೆಯಾದ ನಾಟಕಗಳು ಮತ್ತು ಅದರ ಒಟ್ಟು ಆಶಯಗಳನ್ನು ಮೆಚ್ಚುತ್ತಲೇ ಅದಕ್ಕೆ ಮುಖಾಮುಖಿಯಾಗಿ ಹಲವು ಪ್ರಮುಖ ಪ್ರಶ್ನೆಗಳನ್ನು ಕೃತಿಯು ಮುಂದಿಡುತ್ತದೆ. ಇದರಿಂದ ರಂಗಪ್ರಯೋಗಗಳಲ್ಲಿ ನಡೆಯಬೇಕಿರುವ ಪ್ರಮುಖ ಬದಲಾವಣೆಯ ಕುರಿತು ಓದುಗರನ್ನು ಚಿಂತನೆಗೆ ಹಚ್ಚುತ್ತದೆ~ ಎಂದು ಹೇಳಿದರು.

`ರಂಗಭೂಮಿ ಚರಿತ್ರೆಯ ಪುಟಗಳನ್ನು ತೆರೆಯುತ್ತಲೇ ಅದಕ್ಕೆ ಸಂಬಂಧಪಟ್ಟ ಒಳನೋಟಗಳನ್ನು ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಓದುಗರು ಒಳನೋಟಕ್ಕೆ ಸಹಮತ ಅಥವಾ ವಿರೋಧ ವ್ಯಕ್ತಪಡಿಸುತ್ತಲೇ ರಂಗಭೂಮಿಯ ಕುರಿತು ಗಂಭೀರ ಚರ್ಚೆ ನಡೆಸುವಂತೆ ಮಾಡುತ್ತದೆ~ ಎಂದರು.

ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, `ಹಿರಿಯ ರಂಗಕರ್ಮಿಗಳ ಜೀವಾನುಭವವನ್ನು ದಾಖಲಿಸುವ ಮೂಲಕ ಅವರ ಅನುಭವ ಜಗತ್ತನ್ನು ತಮ್ಮದಾಗಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಂಗಕರ್ಮಿಗಳೆಲ್ಲರೂ ಒಂದಾಗಬೇಕು~ ಎಂದು ಕರೆ ನೀಡಿದರು. ಕ.ವೆಂ.ರಾಜಗೋಪಾಲ, ಸಮುದಾಯದ ಸಿ.ಕೆ.ಗುಂಡಣ್ಣ, ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT