ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಜೀವಂತಿಕೆಗೆ ಪರಿಶ್ರಮ ಅಗತ್ಯ

Last Updated 16 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಕಂಪ್ಲಿ: ರಂಗಭೂಮಿ ಜೀವಂತಿಕೆಗೆ ಪ್ರತಿಯೊಬ್ಬರ ಪರಿಶ್ರಮ ಹಾಗೂ  ಸಹಕಾರ ಅಗತ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಮರಿಯಮ್ಮನಹಳ್ಳಿ ಕೆ. ನಾಗರತ್ನಮ್ಮ ಅಭಿಪ್ರಾಯಪಟ್ಟರು.

ಸ್ಥಳೀಯ ನಟರಾಜ ಕಲಾ ವಿಜಯ ಸಂಘ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ಮೂರು ದಿನಗಳ ಗ್ರಾಮೀಣ ನಾಟಕೋತ್ಸವದ ಕೊನೆಯ ದಿನವಾದ ಭಾನುವಾರ ರಂಗಾಸಕ್ತರೊಂದಿಗೆ ರಂಗ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಳ್ಳಾರಿ ರಂಗ ನಿರ್ದೇಶಕ ಕೆ. ಜಗದೀಶ್ `ಹವ್ಯಾಸಿ ರಂಗಭೂಮಿಯ ಪ್ರಸ್ತುತ ಸವಾಲು~ಗಳು ಕುರಿತು ಮತ್ತು ಕಮಲಾಪುರ ಸ.ಪ.ಪೂ ಮಹಾ ವಿದ್ಯಾಲಯ ಉಪನ್ಯಾಸಕ ಡಾ. ದಯಾನಂದ ಕಿನ್ನಾಳ್ `ಬಳ್ಳಾರಿ ಜಿಲ್ಲೆಯ ರಂಗಭೂಮಿ~ ಕುರಿತು ಮಾತನಾಡಿದರು.

ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಚೋರನೂರು ಮಾತನಾಡಿ, ಮೂರು ದಿನಗಳ ಗ್ರಾಮೀಣ ನಾಟಕೋತ್ಸವದ ಯಶಸ್ಸಿಗೆ ಕಾರಣರಾದ ಸರ್ವರಿಗೆ ಅಭಿನಂದನೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಟಿ.ಬಿ.ಡ್ಯಾಂ ಕನ್ನಡ ಕಲಾ ಸಂಘದ ನಾಟಕ ರಚನಕಾರ ಆರ್.ಎಸ್. ಕುಲಕರ್ಣಿ, ಕಂಪ್ಲಿ ಕನ್ನಡ ಹಿತರಕ್ಷಕ ಸಂಘ ಗೌರವಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಹೊಸಪೇಟೆ ಪ್ರೌಢ ದೇವರಾಯ  ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಅರವಿ ಬಸವನಗೌಡ ಮಾತನಾಡಿದರು.

ರಂಗ ಗೌರವ:  ಚಿತ್ರದುರ್ಗ ಜಿಲ್ಲೆ ರಂಗಭೂಮಿ ಕಲಾವಿದರಾದ ಜಿ.ಡಿ. ತಿಮ್ಮಯ್ಯ ಹರಿಯಬ್ಬೆ, ಜಿ.ಎನ್.ಚಂದ್ರಪ್ಪ ಆಯಿತೋಳು ಇವರಿಗೆ `ರಂಗ ಗೌರವ~ ಸಲ್ಲಿಸಲಾಯಿತು. ನಂತರ ರಾರಾವಿ ಚಿದಾನಂದ ಗವಾಯಿಗಳು ರಂಗ ಗೀತೆಗಳ ಗಾಯನ ಪ್ರಸ್ತುತಪಡಿಸಿದರು.

ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರನ್ನು ಇದೇ ಸಂದರ್ಭದಲ್ಲಿ ಕಂಪ್ಲಿ ನಟರಾಜ ಕಲಾ ವಿಜಯ ಸಂಘ ಅಧ್ಯಕ್ಷ ಎಂ. ರಾಜೇಂದ್ರಕುಮಾರಸ್ವಾಮಿ, ಕೋಶಾಧ್ಯಕ್ಷ ಜಿ. ರಾಜಾರಾವು, ಕಾರ್ಯದರ್ಶಿ ಪಿ. ವೆಂಕನಗೌಡ, ಉಪಾಧ್ಯಕ್ಷ ಪಿ. ಕೊಟ್ರಪ್ಪ ಸೋಗಿ, ಸಹ ಕಾರ್ಯದರ್ಶಿ ಕಟ್ಟೆ ಮಾರೆಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಗರಡಿ ಗಿರಿಯಪ್ಪ, ಬಿ. ಹುಸೇನ್‌ಸಾಬ್, ಮೂಲೆಮನೆ ಮಲ್ಲಿಕಾರ್ಜುನ, ಬೂದಗುಂಪಿ ಅಂಬಣ್ಣ, ಎಚ್.ಎಂ. ಯಲ್ಲಪ್ಪ, ಸುಭಾಷ್ ಚಂದ್ರಬೋಸ್ ಸನ್ಮಾನಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT