ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಪ್ರಭಾವಿ ಶಿಕ್ಷಣ ಮಾಧ್ಯಮ:ಜಂಬೆ

Last Updated 3 ಡಿಸೆಂಬರ್ 2012, 6:07 IST
ಅಕ್ಷರ ಗಾತ್ರ

ಹೊಸಪೇಟೆ : `ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಅರ್ಥಪೂರ್ಣ ಸಂದೇಶ ಗಳನ್ನು ತನ್ನಲ್ಲಿ ಅಡಗಿಸಿಕೊಂಡ ರಂಗಭೂಮಿ, ಪ್ರಭಾವಿ ಶಿಕ್ಷಣ ಮಾಧ್ಯಮವಾಗಲಿದೆ ಎನ್ನುವುದನ್ನು ಪ್ರಾಯೋಗಿಕವಾಗಿ ಹೇಳುವ ಪ್ರಯತ್ನವೊಂದನ್ನು ರಾಷ್ಟ್ರೀಯ ನಾಟಕ ಶಾಲೆಯ ನಡೆಸುತ್ತಿದೆ' ಎಂದು ಪ್ರಾಧ್ಯಾಪಕ ಚಿದಂಬರರಾವ್ ಜಂಬೆ ಹೇಳಿದರು.

ಭಾನುವಾರ  ಹೊಸಪೇಟೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿನಿ ರೊಂದಿಗೆ ಸಂವಾದ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

`ನಾವು ಕಲಿಸಲು ಬಂದಿಲ್ಲ. ನಿಮ್ಮಂದಿಗೆ ಬೆರೆತು ನಿಮ್ಮಿಂದ ಕಲಿತು ಹೋಗುತ್ತೇವೆ. ಸಂವಾದ ನಡೆಸುವ ಮೂಲಕವೇ ನಾವು ಕಲಿಯ ಬಹುದಾಗಿದೆ. ಸ್ಲಂಗಳ ಮಕ್ಕಳಿಗೂ ಶಿಕ್ಷಣ ಪಡೆಯಬೇಕು ಎನ್ನುವ ತವಕ ಹಾಗೂ ಶಿಕ್ಷಣ ಪಡೆಯುವ ಮಕ್ಕಳು ಸ್ಲಂ ಮಕ್ಕಳ ಸೃಜನಶೀಲತೆ ಕಲಿಯಬೇಕು ಎಂಬ ಆಸಕ್ತಿಪರಿಣಾಮಗಳನ್ನು ಇಟ್ಟು ಕೊಂಡು ಹೆಣೆಯಲಾದ ಹಾದಿ ಬೀದಿ ನಾಟಕ.

ನಂತರ ಮಕ್ಕಳೊಂದಿಗೆ ಆಟ ಪಾಟ ನಡೆಸುವ ಮೂಲಕ ಮುಖವಾಡ ತಯಾರಿಕೆ ಮತ್ತಿತರ ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳು ತೊಡ ಗುವಂತೆ ಮಾಡಿ ಕಾರ್ಯಾಗಾರ ವನ್ನು ಯಶಸ್ವಿಗೊಳಿಸಲು ಕಾರಣವಾಯಿತು'

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದ ಅಸ್ಸಾಂನ ಮಕ್ಕಳ ಶಿಕ್ಷಣದ ರಂಗಭೂಮಿಯಲ್ಲಿ ಹೆಸರು ಮಾಡಿರುವ ಅಸ್ಸಾಂನ ಪಬಿತ್ತರಾಭ ಅವರ  ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ `ಹಾದಿ ಬೀದಿ' ಎಂಬ ನಾಟಕ ಪ್ರಸ್ತುತ ಪಡಿಸಲಾಯಿತು.

ಭಾವೈಕ್ಯತಾ ವೇದಿಕೆಯ ಸಂಚಾಲಕ ಪಿ.ಅಬ್ದುಲ್, ಪರುಶುರಾಮ ಕಲಾಲ್, ಮುಖ್ಯ ಶಿಕ್ಷಕ ಎಸ್.ಎಂ ವೀರಭದ್ರಯ್ಯ ಹಾಜರಿದ್ದರು. ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಲೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹಾಕುವ ಮೂಲಕ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT