ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಭಾಪುರಿ ಶ್ರೀ ಅಡ್ಡಪಲ್ಲಕ್ಕಿ ಮಹೋತ್ಸವ

Last Updated 22 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ಮಸ್ಕಿ: ನೆತ್ತಿಯ ಮೇಲೆ ಸುಡು ಬಿಸಿಲು, ಕಾದ ನೆಲ ಒಂದೆಡೆ, ಮಡಿಯನ್ನುಟ್ಟು ತಲೆಯ ಮೇಲೆ ಕುಂಭ ಹೊತ್ತ ಮಹಿಳೆಯರು, ಒಡಪು, ವೀರಗಾಸೆ, ನಂದಿ ಕುಣಿತದ ಭಾವುಕ ಭಕ್ತರ ಭಕ್ತಿಯ ಪರಾಕಾಷ್ಠೆ ಮತ್ತೊಂದೆಡೆ, ಎರಡರ ಸಂಗಮವಾಗಿ ಪಟ್ಟಣದಲ್ಲಿ ಮಂಗಳವಾರ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವಯುತವಾಗಿ ಜರುಗಿತು.

ಪಟ್ಟಣದ ಸಂತೆ ಬಜಾರಿನಲ್ಲಿ ನೂತನವಾಗಿ ನಿರ್ಮಿಸಿದ ಕಾಳಿಕಾ ದೇವಿಯ ಗುಡಿ ಉದ್ಘಾಟನೆ, ಕಾಳಿಕಾ, ಗಣೇಶ, ನವಗ್ರಹ, ನಾಗದೇವತೆ, ಈಶ್ವರ, ನಂದಿ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಗಚ್ಚಿನ ಹಿರೇಮಠದಿಂದ ಪ್ರಾರಂಭವಾದ ಅಡ್ಡಪಲ್ಲಕ್ಕಿ ಮೆರವಣಿಗೆ ಕನಕ ವೃತ್ತದ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಶಾಸಕ ಪ್ರತಾಪಗೌಡ ಪಾಟೀಲ, ಜಿ.ಪಂ.ಸದಸ್ಯ ಎಚ್.ಬಿ.ಮುರಾರಿ, ಮಹಾದೇವಪ್ಪಗೌಡ, ಕೆ.ವೀರನಗೌಡ, ಪಂಚಾಕ್ಷರಯ್ಯ, ಅಂದಾನಪ್ಪ ಗುಂಡಳ್ಳಿ, ಮಲ್ಲಪ್ಪ ಕುಡತನಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ, ಅಪ್ಪಾಜಿಗೌಡ, ಷಡಕ್ಷರಪ್ಪ ಬಾಳೆಕಾಯಿ, ಹನುಮಂತ ಮೋಚಿ, ಮಲ್ಲಯ್ಯ ನಾಗರಾಳ, ಶೇಖರಪ್ಪ ಗೋನ್ವಾರ, ಈಶಪ್ಪ ಗಂಗಾವತಿ, ಮಲ್ಲಪ್ಪ ನಾಯಿಕೊಡೆ, ಅಮರಪ್ಪ ಗುಡದೂರು, ಘನಮಠದಯ್ಯ ಸಾಲಿಮಠ, ವೀರಭದ್ರಯ್ಯ, ಅಮರಯ್ಯ ಕೊನ್ನಾಪುರ ಹಾಗೂ ಇತರರು ಭಾಗವಹಿಸಿದ್ದರು.                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT