ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ: ತಪ್ಪು ತಿಳಿವಳಿಕೆ ತಿದ್ದಲು ವೈದ್ಯರ ಸಲಹೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: `ವೈಜ್ಞಾನಿಕವಾಗಿ ಎಷ್ಟೇ ಆವಿಷ್ಕಾರಗಳು ನಡೆದಿದ್ದರೂ ಇಂದಿಗೂ ಮಾನವನ ರಕ್ತಕ್ಕೆ ಸರಿಸಮಾನವಾದ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ~ ಎಂದು  ತಾ.ಪಂ.ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್ ಹೇಳಿದರು.

ಅವರು ನಗರದ ಅಭಯ್ ಟ್ರಸ್ಟ್ ಮತ್ತು ಶ್ರೀರಾಮ ಆಸ್ಪತ್ರೆ ಸಹಯೋಗದೊಂದಿಗೆ ವಿದ್ಯಾಶಿಲ್ಪ ಪ್ರೌಢಶಾಲೆಯಲ್ಲಿ ನಡೆದ ಸ್ವಯಂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

`ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳಿವಳಿಕೆಗಳಿಂದ ಬಹಳಷ್ಟು ಜನ ರಕ್ತದಾನದಲ್ಲಿ ಆಸಕ್ತಿ ಇದ್ದರೂ ಹಿಂಜರಿಯುತ್ತಿದ್ದಾರೆ. ರಕ್ತದಾನದಿಂದ ಇತರರ ಜೀವ ಉಳಿಸುವುದರೊಂದಿಗೆ ದೇಹದ ಚೈತನ್ಯಕ್ಕೂ ಅನುಕೂಲವಾಗಲಿದೆ. ನಿಯಮಿತ ರಕ್ತದಾನದಿಂದ ಹಲವಾರು ಪ್ರಯೋಜನಗಳಿವೆ ಎಂದ ಅವರು ದಿನೇ ದಿನೇ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಮೂರು ಲಕ್ಷ ಜನಸಂಖ್ಯೆ ಇರುವ ತಾಲ್ಲೂಕಿನಲ್ಲಿ ರಕ್ತನಿಧಿ ತೆರೆಯುವ ಅಗತ್ಯವಿದ್ದು ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ~ ಎಂದರು.

ರಕ್ತದಾನದ ಮಹತ್ವ ಕುರಿತು ಮಾತನಾಡಿದ ಎಂವಿಜೆ ಮೆಡಿಕಲ್ ಕಾಲೇಜಿನ ಡಾ.ಉಮಾಬಾಯಿ, `ರಕ್ತದಾನದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರೆ ವಯಸ್ಕರಾದಾಗ ರಕ್ತದಾನ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ರಕ್ತದಾನ ಮಾಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗಿ ಆರೋಗ್ಯವಂತರಾಗಲು ಸಹಕಾರಿಯಾಗುತ್ತದೆ. ಆರೋಗ್ಯವಂತರಾದ 18 ರಿಂದ 60 ವರ್ಷದ ಒಳಗಿನವರು ರಕ್ತದಾನ ಮಾಡಲು ಹಿಂಜರಿಯುವ ಅಗತ್ಯ ಇಲ್ಲ. ರಕ್ತದಾನ ನೀಡಿದ 24 ಗಂಟೆಯೊಳಗೆ ಅಷ್ಟೇ ಪ್ರಮಾಣದ ರಕ್ತ ನಮ್ಮ ದೇಹದಲ್ಲಿ ಸೃಷ್ಟಿಯಾಗುತ್ತದೆ. ರಕ್ತದಾನದಿಂದ ಜ್ಞಾಪಕ ಶಕ್ತಿ ವೃದ್ದಿ, ಸೌಂದರ್ಯ ಅಲ್ಲದೆ ರಕ್ತದ ಒತ್ತಡ, ಕೊಬ್ಬು ಕಡಿಮೆಯಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT