ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜಾ ವೇತನಕ್ಕಾಗಿ ಒತ್ತಾಯ ಪೌರ ಕಾರ್ಮಿಕರ ಪ್ರತಿಭಟನೆ

Last Updated 4 ಅಕ್ಟೋಬರ್ 2011, 6:25 IST
ಅಕ್ಷರ ಗಾತ್ರ

ಗದಗ: ರಜಾ ದಿನದಲ್ಲಿ ಸಲ್ಲಿಸಿದ ಸೇವೆಗೆ ವೇತನ ನೀಡುವಂತೆ ಒತ್ತಾಯಿಸಿ ಗದಗ-ಬೆಟಗೇರಿ ನಗರಸಭೆ ಪೌರಕಾರ್ಮಿಕರು ಸೋಮವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು. ರಜೆ ವೇತನ, ಹಬ್ಬದ ಮುಂಗಡ ಹಣ ಹಾಗೂ ಪ್ರತಿವರ್ಷ ವಾರ್ಷಿಕ ಬಡ್ತಿ, ಶೇ. 22.75ರಲ್ಲಿ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಪ್ರತಿಭಟನಾ ನಿರತ ಕಾರ್ಮಿಕರು ಆಗ್ರಹಿಸಿದರು.

ದಿನನಿತ್ಯ ಸೇವೆ ಸಲ್ಲಿಸುತ್ತಿರುವ ದಲಿತ ಪೌರಕಾರ್ಮಿಕರಿಗೆ ಪ್ರತಿವರ್ಷದಂತೆ ಸಿಗುತ್ತಿರುವ ಸರ್ಕಾರಿ ದಿನಗಳಲ್ಲಿ ಸೇವೆ ಸಲ್ಲಿಸಿದ 15 ದಿನಗಳ ರಜೆ ವೇತನ ನೀಡಬೇಕು. ಪ್ರತಿ ವರ್ಷ ವಾರ್ಷಿಕ ಬಡ್ತಿ ನೀಡಬೇಕು. ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಪೌರ ಕಾರ್ಮಿಕರಿಗೆ ದೊರೆಯಬೇಕಾದ ಅಗತ್ಯ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪೌರಕಾರ್ಮಿಕರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಪೌರಕಾರ್ಮಿಕರ ಮನವಿಗೆ ಸ್ಪಂದಿಸಿದ ಪೌರಾಯುಕ್ತ ಎಸ್. ಶೇಖರಪ್ಪ ಸುಮಾರು 12.50 ಲಕ್ಷ ರೂಪಾಯಿ ವೇತನವನ್ನು 234 ಕಾರ್ಮಿಕರಿಗೆ ಮಂಜೂರು ಮಾಡಿದರು.
 

ಈ ಸಂದರ್ಭದಲ್ಲಿ ನಗರಸಭೆ ಪೌರ ಕಾರ್ಮಿಕರರ ನೌಕರರ ಸಂಘದ ಅಧ್ಯಕ್ಷ ಸುರೇಶ ಕಲ್ಮನಿ, ಪ್ರಧಾನ ಕಾರ್ಯದರ್ಶಿ ರಾಮು ಬಳ್ಳಾರಿ, ವಿರೂಪಾಕ್ಷ ರಾಮಗಿರಿ, ತಾಯಪ್ಪ ಗೌಡರ, ವಿ.ಕೆ. ಬಳ್ಳಾರಿ, ರಾಮು ಆಸಂಗಿ, ಮಹೇಶ ಐನಾಪೂರ, ಅರವಿಂದ ಕುರ್ತಕೋಟಿ, ಯಮನಪ್ಪ ಸಂಗಾಪೂರ, ಹನುಮಂತಪ್ಪ ಚಲವಾದಿ, ದತ್ತಪ್ಪ ಬಳ್ಳಾರಿ, ಆನಂದ ದೊಡ್ಡಮನಿ, ಯಲ್ಲಪ್ಪ ಅಕ್ಕಿ, ದ್ಯಾಮಣ್ಣ ರಾಮಗಿರಿ, ಯಲ್ಲಪ್ಪ ಬಳ್ಳಾರಿ, ಮೃತ್ಯುಂಜಯ ದೊಡ್ಡಮನಿ, ಮಾರುತಿ ಕಾಳೆ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT