ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಮಾದರಿಯಲ್ಲಿ ಹಾಕಿ ಟೂರ್ನಿ?

Last Updated 15 ಜೂನ್ 2011, 19:30 IST
ಅಕ್ಷರ ಗಾತ್ರ

ಭೋಪಾಲ್ (ಐಎಎನ್‌ಎಸ್): ಈಗಾಗಲೇ ಪಾತಾಳ ಕಂಡಿರುವ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಮೇಲೆತ್ತಲು ರಣಜಿ ಕ್ರಿಕೆಟ್ ಟ್ರೋಫಿ ಮಾದರಿಯಲ್ಲಿ ರಾಷ್ಟ್ರೀಯ ಹಾಕಿ ಟೂರ್ನಿ ಆಯೋಜಿಸಲು `ಹಾಕಿ ಇಂಡಿಯಾ~ ಚಿಂತನೆ ನಡೆಸಿದೆ.

ರಣಜಿ ಟ್ರೋಫಿಯಂತೆ ಎಲೈಟ್ ಹಾಗೂ ಪ್ಲೇಟ್ ವರ್ಗಗಳಾಗಿ ವಿಂಗಡಣೆ ಮಾಡಿ ಟೂರ್ನಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು `ಹಾಕಿ ಇಂಡಿಯಾ~ ಕಾರ್ಯದರ್ಶಿ ನರಿಂದರ್ ಬಾತ್ರಾ ತಿಳಿಸಿದ್ದಾರೆ.

`ಚಾಂಪಿಯನ್‌ಷಿಪ್ ಸ್ಪರ್ಧಾತ್ಮಕವಾಗಿರಬೇಕು. ಹಾಗಾಗಿ ರಣಜಿ ಟ್ರೋಫಿ ಟೂರ್ನಿಯಂತೆ ನಡೆಯಬೇಕು. ಎಲ್ಲವೂ ಸರಿ ಹೋದರೆ ಮುಂದಿನ ವರ್ಷದಿಂದ ಅದು ಜಾರಿಗೆ ಬರಲಿದೆ~ ಎಂದು ಬಾತ್ರಾ ಹೇಳಿದ್ದಾರೆ.
`ಭವಿಷ್ಯದಲ್ಲಿ ತಂಡಗಳಿಗೆ ಶ್ರೇಯಾಂಕ ನೀಡಲಾಗುವುದು~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT