ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಸೆಮಿಫೈನಲ್ ತಲುಪಿದ ಮುಂಬೈ, ತಮಿಳುನಾಡು

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್/ಪಿಟಿಐ): ಮುಂಬೈ, ತಮಿಳುನಾಡು, ಹರಿಯಾಣ ಹಾಗೂ ರಾಜಸ್ತಾನ ತಂಡಗಳು ಈ ಋತುವಿನ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.

ಇಂದೋರ್‌ನಲ್ಲಿ ಕೊನೆಗೊಂಡ ಮಧ್ಯ ಪ್ರದೇಶ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಮುಂಬೈ ಡ್ರಾ ಮಾಡಿಕೊಂಡಿತು. ಈ ತಂಡ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಇದರಿಂದ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು. ಈ ಮೂಲಕ 40ನೇ ಸಲ `ರಣಜಿ ರಾಜ~ ನಾಗುವ ಕನಸಿಗೆ ಸಮೀಪ ಈ ತಂಡ ಹೆಜ್ಜೆಹಾಕಿದೆ.

ಮಧ್ಯ ಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ 103 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 474 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ವಾಸೀಂ ಜಾಫರ್ ನೇತೃತ್ವದ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ113 ರನ್ ಗಳಿಸಿತು. ಈ ಮೂಲಕ ನಾಲ್ಕು ದಿನಗಳ ಆಟಕ್ಕೆ ತೆರೆ ಬಿದ್ದಿತು.

ಬೆಂಗಳೂರಿನಲ್ಲಿ ಬುಧವಾರ ಕೊನೆಗೊಂಡ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಆರು ವಿಕೆಟ್‌ಗಳ ಜಯ ಪಡೆದ ಹರಿಯಾಣ ಸಹ ನಾಲ್ಕರ ಘಟ್ಟ ಪ್ರವೇಶಿಸಿದೆ.

ಸಂಕ್ಷಿಪ್ತ ಸ್ಕೋರು: ಮಧ್ಯ ಪ್ರದೇಶ: 55.1 ಓವರ್‌ಗಳಲ್ಲಿ 192 ಮತ್ತು ಎರಡನೇ ಇನಿಂಗ್ಸ್ 103 ಓವರ್‌ಗಳಲ್ಲಿ 3 ವಿಕೆಟ್‌ಗೆ 474 ಡಿಕ್ಲೇರ್ಡ್. (ಮೋನಿಶ್ ಮಿಶ್ರಾ ಔಟಾಗದೇ 174, ದೇವೀಂದ್ರ ಬುಂದೆಲಾ ಔಟಾಗದೇ 101; ರಮೇಶ್ ಪವಾರ್ 88ಕ್ಕೆ1, ಸೂರ್ಯ ಕುಮಾರ್ ಯಾದವ್ 20ಕ್ಕೆ1). ಮುಂಬೈ: 146.4 ಓವರ್‌ಗಳಲ್ಲಿ 434 ಹಾಗೂ ದ್ವಿತೀಯ ಇನಿಂಗ್ಸ್ 34 ಓವರ್‌ಗಳಲ್ಲಿ 1 ವಿಕೆಟ್‌ಗೆ 113. (ಪ್ರಫುಲ್ ವಾಘೇಲಾ ಔಟಾಗದೇ 51, ಕೌಸ್ತುಬ್ ಪವಾರ್ ಔಟಾಗದೇ 52). ಫಲಿತಾಂಶ: ಡ್ರಾ, ಮುಂಬೈಗೆ ಇನಿಂಗ್ಸ್ ಮುನ್ನಡೆ ಹಾಗೂ ಸೆಮಿಫೈನಲ್ ಪ್ರವೇಶ.

ಮಹಾರಾಷ್ಟ್ರ: 93 ಓವರ್‌ಗಳಲ್ಲಿ 232 ಹಾಗೂ ಎರಡನೇ ಇನಿಂಗ್ಸ್ 95 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 321 (ಚಿರಾಗ್ ಖುರಾನಾ 102, ಕೇದಾರ್ ಜಾಧವ್ 69; ಸನ್ನಿ ಗುಪ್ತಾ69ಕ್ಕೆ2). ತಮಿಳುನಾಡು: 143.2ಓವರ್‌ಗಳಲ್ಲಿ 415 ಹಾಗೂ ದ್ವಿತೀಯ ಇನಿಂಗ್ಸ್ 14 ಓವರ್‌ಗಳಲ್ಲಿ 1 ವಿಕೆಟ್‌ಗೆ 45. (ಮುರಳಿ ವಿಜಯ್  9, ಅಭಿನವ್ ಮುಕುಂದ್ ಔಟಾಗದೇ 21, ಸನ್ನಿ ಗುಪ್ತಾ ಔಟಾಗದೇ 13; ಚಿರಾಗ್ ಖುರಾನಾ 14ಕ್ಕೆ1). ಫಲಿತಾಂಶ: ಡ್ರಾ, ತಮಿಳುನಾಡಿಗೆ ಇನಿಂಗ್ಸ್ ಮುನ್ನಡೆ ನಾಲ್ಕರ ಘಟ್ಟಕ್ಕೆ ಲಗ್ಗೆ.

ರಾಜಸ್ತಾನ: 167.1 ಓವರ್‌ಗಳಲ್ಲಿ 421 ಹಾಗೂ ಎರಡನೇ ಇನಿಂಗ್ಸ್ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 25. (ಆಕಾಶ್ ಚೋಪ್ರಾ ಔಟಾಗದೇ 8, ವಿನೀತ್ ಸೆಕ್ಸೆನಾ ಔಟಾಗದೇ 16). ಹೈದರಾಬಾದ್: 55 ಓವರ್‌ಗಳಲ್ಲಿ 144 ಹಾಗೂ ದ್ವಿತೀಯ ಇನಿಂಗ್ಸ್ 98 ಓವರ್‌ಗಳಲ್ಲಿ 2 ವಿಕೆಟ್‌ಗೆ 431. (ಅಕ್ಷತ್ ರೆಡ್ಡಿ 151, ರವಿ ತೇಜ ಔಟಾಗದೇ 185, ತಿರುಮಲಶೆಟ್ಟಿ ಸುಮನ್59; ಪಂಕಜ್ ಸಿಂಗ್ 113ಕ್ಕೆ1) ಫಲಿತಾಂಶ: ಡ್ರಾ, ರಾಜಸ್ತಾನಕ್ಕೆ ಮೊದಲ ಇನಿಂಗ್ಸ್ ಮುನ್ನಡೆ. ಸೆಮಿಫೈನಲ್ ಪ್ರವೇಶ.

ಸೆಮಿಫೈನಲ್ ವೇಳಾಪಟ್ಟಿ: ಹರಿಯಾಣ-ರಾಜಸ್ತಾನ (ರೋಹ್‌ತಕ್, ಜನವರಿ 10ರಿಂದ 13ರ ವರೆಗೆ); ಮುಂಬೈ-ತಮಿಳುನಾಡು (ಮುಂಬೈ, ಜನವರಿ 10ರಿಂದ 13ರ ವರೆಗೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT