ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಪ್ರಗತಿ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಗಸ್ಟ್ ತಿಂಗಳಲ್ಲಿ ದೇಶದ ಒಟ್ಟು ರಫ್ತು ವಹಿವಾಟು  ಶೇ 44ರಷ್ಟು ಪ್ರಗತಿ ದಾಖಲಿಸಿದ್ದು, 24 ಶತಕೋಟಿ ಡಾಲರ್ ( ರೂ1,08,000 ಕೋಟಿ) ವಹಿವಾಟು ದಾಖಲಿಸಿದೆ. ಕಬ್ಬಿಣದ ಅದಿರು, ಎಂಜಿನಿಯರಿಂಗ್  ಉತ್ಪನ್ನಗಳು, ರಸಾಯನಿಕಗಳು, ಜವಳಿ ಸರಕುಗಳ ರಫ್ತು  ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದೆ.

ಅಮೆರಿಕ ಮತ್ತು  ಯೂರೋಪ್ ಒಕ್ಕೂಟದಲ್ಲಿ ಬಿಕ್ಕಟ್ಟು ಮುಂದುವರೆದಿದ್ದರೂ, ಹೊಸ ಸಾಗರೋತ್ತರ ಮಾರುಕಟ್ಟೆಗಳ ಬೆಂಬಲ ಗರಿಷ್ಠ ರಫ್ತು ವೃದ್ಧಿ ದರ ಕಾಯ್ದುಕೊಳ್ಳುವಂತೆ ಮಾಡಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

ಈ ಅವಧಿಯಲ್ಲಿ ಆಮದು ವಹಿವಾಟು ಕೂಡ ಶೇ 41ರಷ್ಟು ಪ್ರಗತಿ ದಾಖಲಿಸಿದ್ದು, 38 ಶತಕೋಟಿ ಡಾಲರ್ (ರೂ1,71,000 ಕೋಟಿ) ವಹಿವಾಟು ದಾಖಲಿಸಿದೆ. ರಫ್ತು ಮತ್ತು ಆಮದು ವಹಿವಾಟು ಗರಿಷ್ಠ ಮಟ್ಟದಲ್ಲಿ ಮುಂದುವರೆದಿರುವುದರಿಂದ ದೇಶದ ವ್ಯಾಪಾರ ಕೊರತೆ ಈ ಅವಧಿಯಲ್ಲಿ 14 ಶತಕೋಟಿ ಡಾಲರ್ (್ಙ63,000 ಕೋಟಿ) ಗಳಷ್ಟಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಹಡಗುಗಳ ಮೂಲಕ ನಡೆಯುವ ಒಟ್ಟು ರಫ್ತು ವಹಿವಾಟು ಶೇ 54ರಷ್ಟು ಹೆಚ್ಚ್ದ್ದಿದು, 135 ಶತಕೋಟಿ ಡಾಲರ್‌ಗಳಿಗೆ (ರೂ6,03,000ಕೋಟಿ) ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT