ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು3ವರ್ಷದಲ್ಲೇ ಕನಿಷ್ಠ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಒಟ್ಟಾರೆ ರಫ್ತು ವಹಿವಾಟು 2012-13ನೇ ಸಾಲಿನಲ್ಲಿ ಶೇ 1.8ರಷ್ಟು ಕುಸಿತ ಕಂಡಿದ್ದು, ಮೂರು ವರ್ಷಗಳ ಹಿಂದಿನ ಮಟ್ಟವಾದ 30,000 ಕೋಟಿ ಡಾಲರ್(ರೂ16.20 ಲಕ್ಷ ಕೋಟಿ)ಗೆ ಇಳಿದಿದೆ.

ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಫ್ತು ಕುಸಿತ ಕಂಡಿದೆ. ಇದರಿಂದ ವ್ಯಾಪಾರ ವಹಿವಾಟು (ರಫ್ತು-ಆಮದು) ಕೊರತೆ ಅಂತರ ದಾಖಲೆ ಪ್ರಮಾಣದಲ್ಲಿ 19,091 ಕೋಟಿ ಡಾಲರ್‌ಗೆ (ರೂ10.30 ಲಕ್ಷ ಕೋಟಿ) ಏರಿಕೆ ಕಂಡಿದೆ. 2011-12ನೇ ಸಾಲಿನಲ್ಲಿ  18,333 ಕೋಟಿ ಡಾಲರ್‌ಗಳಷ್ಟು (ರೂ9.89 ಲಕ್ಷ ಕೋಟಿ) ವ್ಯಾಪಾರ ಕೊರತೆ ಅಂತರ ದಾಖಲಾಗಿತ್ತು.

ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ರಫ್ತು ವಹಿವಾಟು 2012-13ನೇ ಸಾಲಿನ ಮಾರ್ಚ್‌ನಲ್ಲಿ ಶೇ 6.97ರಷ್ಟು ಏರಿಕೆ  ಕಂಡಿದೆ. ಉಳಿದ ತಿಂಗಳಲ್ಲಿ ನೀರಸ ಪ್ರದರ್ಶನ ತೋರಿದೆ. ಮಾರ್ಚ್‌ನಲ್ಲಿ 3,088 ಕೋಟಿ ಡಾಲರ್(ರೂ1.66 ಲಕ್ಷ ಕೋಟಿ) ರಫ್ತು ವಹಿವಾಟು ನಡೆದಿದೆ. ಆಮದು 4,116 ಕೋಟಿ ಡಾಲರ್ (ರೂ2.22 ಕೋಟಿ)ಗಳಷ್ಟಾಗಿದೆ.

2009-10ನೇ ಸಾಲಿನಲ್ಲಿ ರಫ್ತು ಶೇ 3.5ರಷ್ಟು ಕುಸಿದಿದ್ದರೆ, ನಂತರದ ಎರಡು ವರ್ಷಗಳಲ್ಲಿ ಗಣನೀಯ ಚೇತರಿಕೆ ಕಂಡಿತ್ತು.`ರಫ್ತು ಚೇತರಿಕೆಗಾಗಿ ಸರ್ಕಾರ ವಿದೇಶಿ ವ್ಯಾಪಾರ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್) ಸ್ಥಾಪನೆಗೆ ವಿಧಿಸಲಾಗಿದ್ದ ಕನಿಷ್ಠ ಭೂಮಿ ವಿಸ್ತಾರದ ಮಿತಿ ಸಡಿಸಲಾಗಿದೆ. ಅಲ್ಲದೆ, `ಎಸ್‌ಇಜೆಡ್'ನಲ್ಲಿನ ಉದ್ಯಮಗಳಿಗೆ ತೆರಿಗೆ ವಿನಾಯ್ತಿ ಪ್ರಕಟಿಸಲಾಗಿದೆ' ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ಹೇಳಿದ್ದಾರೆ.

ಆರ್ಥಿಕ ಸುಧಾರಣಾ ಕ್ರಮಗಳಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ (2013-14) ರಫ್ತು ಶೇ 10ರಷ್ಟು ಪ್ರಗತಿ ಕಾಣಲಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಕಾರ್ಯದರ್ಶಿ ಎಸ್.ಆರ್.ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT