ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತುವಹಿವಾಟು:ದಾಖಲೆ ಪ್ರಗತಿ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜುಲೈ ತಿಂಗಳಲ್ಲಿ ದೇಶದ ರಫ್ತು ಪ್ರಮಾಣವು ದಾಖಲೆ ಎನ್ನಬಹುದಾದ ಶೇ 82ರಷ್ಟು ಹೆಚ್ಚಳಕಂಡಿದ್ದು, 29 ಶತಕೋಟಿ ಡಾಲರ್‌ಗಳಷ್ಟು (್ಙ 1,30,500 ಕೋಟಿ) ವಹಿವಾಟು  ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 16 ಶತಕೋಟಿ ಡಾಲರ್ (್ಙ72,000 ಕೋಟಿ)ಗಳಷ್ಟಿತ್ತು. 

 ದೇಶದ ಪ್ರಮುಖ ರಫ್ತು ಮಾರುಕಟ್ಟೆಗಳಾದ ಅಮೆರಿಕ ಮತ್ತು ಯೂರೋಪ್‌ನಲ್ಲಿ ಬಿಕ್ಕಟ್ಟು ಮುಂದುವರೆದಿದ್ದರೂ,  ಈ ಅವಧಿಯಲ್ಲಿ ರಫ್ತು ದಾಖಲೆ ಪ್ರಗತಿ ಕಂಡಿದೆ. ಇದಕ್ಕೆ ದೇಶದ ಸದೃಢ ಆರ್ಥಿಕತೆಯೇ ಕಾರಣ ಎಂದು ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. 

 ಜುಲೈ ತಿಂಗಳಲ್ಲಿ ಆಮದು ವಹಿವಾಟು ಚೇತರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಆಮದು ಶೇ 51ರಷ್ಟು ಹೆಚ್ಚಿದ್ದು, 40 ಶತಕೋಟಿ ಡಾಲರ್ (್ಙ1,80,000 ಕೋಟಿ)ವಹಿವಾಟು ದಾಖಲಿಸಿದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆ 11 ಶತಕೋಟಿ ಡಾಲರ್(್ಙ 49,500ಕೋಟಿ) ಗಳಷ್ಟಾಗಿದೆ. 

  ಪ್ರತಿ ತಿಂಗಳು 10 ಶತಕೋಟಿ ಡಾಲರ್‌ನಂತೆ (್ಙ45,000 ಕೋಟಿ)ಕಳೆದ ನಾಲ್ಕು ತಿಂಗಳಲ್ಲಿ ರಫ್ತು ವಹಿವಾಟು ಏರಿಕೆ ಕಾಣುತ್ತಿದೆ. ಜಾಗತಿಕ ಅರ್ಥಿಕ ಅಸ್ಥಿರತೆ ಮುಂದುವರೆದಿರುವ ಸಂದರ್ಭದಲ್ಲಿ ಇದು ಗಮನಾರ್ಹ ಪ್ರಗತಿ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ರಾಮು ಎಸ್. ದೇವುರಾ ಹೇಳಿದ್ದಾರೆ. 

 ದೇಶದ ಒಟ್ಟು ರಫ್ತು ವಹಿವಾಟಿನಲ್ಲಿ ಅಮೆರಿಕ ಮಾರುಕಟ್ಟೆ ಶೇ 10ರಷ್ಟು ಪಾಲು ಹೊಂದಿದೆ. ಅಮೆರಿಕದಲ್ಲಿ ಅರ್ಥಿಕ ಬಿಕ್ಕಟ್ಟು ಮುಂದುವರೆದಿದ್ದರೂ, ಎಂಜಿನಿಯರಿಂಗ್, ಪೆಟ್ರೋಲಿಯಂ, ಚಿನ್ನಾಭರಣಗಳಿಗೆ ಈ ಅವಧಿಯಲ್ಲಿ ಬೇಡಿಕೆ ಹೆಚ್ಚಿದೆ.

ಏಪ್ರಿಲ್‌ನಿಂದ ಜುಲೈ ತಿಂಗಳ ಅವಧಿಯಲ್ಲಿನ ರಫ್ತು ವಹಿವಾಟಿನ ಮೊತ್ತವು ಶೇ 54ರಷ್ಟು ಹೆಚ್ಚಿದ್ದು, (108 ಶತಕೋಟಿ ಡಾಲರ್) ್ಙ 4,86,000 ಕೋಟಿಗಳಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 70 ಶತಕೋಟಿ ಡಾಲರ್ ( ್ಙ 3,15,000 ಕೋಟಿ) ಗಳಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ರಫ್ತು ಶೇ 40ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ 151 ಶತಕೋಟಿ ಡಾಲರ್ ( ್ಙ6,79,500 ಕೋಟಿ) ವಹಿವಾಟು ದಾಖಲಾಗಿದ್ದು, ವ್ಯಾಪಾರ ಕೊರತೆ 42 ಶತಕೋಟಿ ಡಾಲರ್ ( ್ಙ1,89,000 ಕೋಟಿ)ಗಳಷ್ಟಾಗಿದೆ.

ಕಳೆದ 11 ತಿಂಗಳಲ್ಲಿ ರಫ್ತು ವಲಯದ ಸಾಧನೆ ಉತ್ತಮವಾಗಿದೆ. ಎಂಜಿನಿಯರಿಂಗ್, ಪೆಟ್ರೋಲಿಯಂ, ತೈಲ ಕೀಲೆಣ್ಣೆ, ಹತ್ತಿ ನೂಲು, ರಾಸಾಯನಿಕಗಳು ಮತ್ತು   ಎಲೆಕ್ಟ್ರಾನಿಕ್ಸ್‌ಗಳು ಗಮನಾರ್ಹವಾಗಿ ಚೇತರಿಕೆ ಕಂಡಿದೆ. ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿನ ಹೊಸ ಮಾರುಕಟ್ಟೆಯಲ್ಲಿ ನಮ್ಮ ಸರಕುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT