ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯಾ ರಂಗಪ್ರವೇಶ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ನಾಟ್ಯ ನಿವೇದನಂ: ಶುಕ್ರವಾರ ರಮ್ಯಾ ಕಡಾಂಬಿ ಅವರ ಭರತನಾಟ್ಯ ರಂಗಪ್ರವೇಶ.
ರಮ್ಯಾ, ಕಲಾಭೂಮಿಗೆ ನಾಗಭೂಷಣ್ ಅವರ ಶಿಷ್ಯೆಯಾಗಿ ಆರಾಧನಾ ಸಂಸ್ಥೆ ಮೂಲಕ ಬಂದವರು.

ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ನಾಟ್ಯದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ಗಾನಶ್ರೀ ಶ್ರೀನಿವಾಸುಲು ಅವರ ಮಾರ್ಗದರ್ಶನದಲ್ಲಿ ಕಲಿಯುತ್ತ್ದ್ದಿದು ಅಲ್ಲೂ ಜೂನಿಯರ್ ಮುಗಿಸಿದ್ದಾರೆ.

ಪ್ರಸ್ತುತ ಸಂತ ಜೋಸೆಫ್ ಕಾಲೇಜಿನಲ್ಲಿ ವಿಜ್ಞಾನದ ಪ್ರಥಮ ವರ್ಷದ ಪದವಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈಕೆಯ ಎಲ್ಲಾ ಸಾಧನೆಗಳ ಹಿಂದೆ ತಂದೆ ರಾಜ್‌ಗೋಪಾಲ್ ಹಾಗೂ ತಾಯಿ ಸೌಮ್ಯ ಅವರ ಪ್ರೋತ್ಸಾಹವೂ ಸಾಕಷ್ಟಿದೆ.

ಅತಿಥಿಗಳು: ಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರುಸ್ವಾಮಿ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಅಧೀನ ಕಾರ್ಯದರ್ಶಿ ರಾಮಚಂದ್ರ ರಾವ್, ನಿಬಂಧಕ ಎಸ್.ಐ. ಭಾವಿಕಟ್ಟಿ, ವಿಮರ್ಶಕ ಸೂರ್ಯಪ್ರಸಾದ್. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT