ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯ ವಿಮಾನ ದುರಂತಕ್ಕೆ ಕಳಪೆ ಇಂಧನ ಕಾರಣ?

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಾಸ್ಕೊ (ಐಎಎನ್‌ಎಸ್): ಯುರೊಸ್ಲಾವ್‌ನಲ್ಲಿ ಬುಧವಾರ ದುರಂತಕ್ಕೀಡಾದ ಯಾಕ್-42 ವಿಮಾನ ಅಪಘಾತಕ್ಕೆ ಕಳಪೆ ಇಂಧನವೇ ಕಾರಣ ಎಂದು ರಷ್ಯಾದ ವಾಯುಯಾನ ವಿಭಾಗದ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ವಿಮಾನ ಎಂಜಿನ್ ದೋಷಕ್ಕೆ ಕಳಪೆ ಇಂಧನವೇ ಮುಖ್ಯ ಕಾರಣವಾಗಿರಬಹುದು ಎಂದು ತಕ್ಷಣಕ್ಕೆ ಅಂದಾಜಿಸಲಾಗಿದೆ ಎಂದು ಈ ಅಧಿಕಾರಿ ಹೇಳಿದ್ದಾರೆ. 44 ಜನರನ್ನು ಬಲಿ ತೆಗೆದುಕೊಂಡ ಈ ವಿಮಾನದ ಕಾಕ್‌ಪಿಟ್‌ನ ಧ್ವನಿಮುದ್ರಣ ಪೆಟ್ಟಿಗೆ ಮತ್ತು ಅಂಕಿ ಅಂಶಗಳ ದಾಖಲೆ ಪೆಟ್ಟಿಗೆಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ.

ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಲೋಕೊಮೋಟಿವ್ ಯುರೊಸ್ಲಾವ್ ಐಸ್ ಹಾಕಿ ತಂಡದ ಬಹುತೇಕ  ಆಟಗಾರರು ಸಾವನ್ನಪ್ಪಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT