ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯನ್ ರಾಮಾಯಣಕ್ಕೆ ಸುವರ್ಣದ ಸಂಭ್ರಮ

Last Updated 19 ಡಿಸೆಂಬರ್ 2010, 11:35 IST
ಅಕ್ಷರ ಗಾತ್ರ

ಮಾಸ್ಕೊ, (ಪಿಟಿಐ): ಭಾರತದ ಮಹಾಕಾವ್ಯ ರಾಮಾಯಣದ ರಷ್ಯನ್ ರೂಪಾಂತರದ ರಂಗ ಪ್ರದರ್ಶನ ಆರಂಭವಾಗಿ 50 ವರ್ಷ ಸಂದಿರುವ ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಆಚರಿಸಿದ ರಷ್ಯಾ, ರಾಮಲೀಲಾ ಪ್ರದರ್ಶಿಸಿದ ಹಿರಿಯ ಕಲಾವಿದನನ್ನು ಸನ್ಮಾನಿಸಿತು. ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿದ್ದ ‘ದಿ ಪೆರೇಡ್ ಆಫ್ ರಷ್ಯನ್-ಇಂಡಿಯನ್ ಹೆರಿಟೇಜ್’ ಸುವರ್ಣ ಮಹೋತ್ಸವವನ್ನು ಇಲ್ಲಿನ ಮಕ್ಕಳ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.

ರಾಮಾಯಣದಲ್ಲಿನ ರಾಮನ ಪಾತ್ರವನ್ನು ಅಭಿನಯಿಸುತ್ತಿದ್ದ ಏಕೈಕ ಕಲಾವಿದ ಗೆನ್ನಡಿ ಮಿಕ್‌ಹೇಲೊವಿಚ್ ಪೆಕ್ನಿಕೋವ್, ಭಾರತದ ಪ್ರಧಾನಿ ನೆಹರೂ ಅವರು ತಮ್ಮ ಪ್ರದರ್ಶನವನ್ನು ನೋಡಲು ಖುದ್ದಾಗಿ ಆಗಮಿಸಿದ್ದ ಸಂದರ್ಭವನ್ನು ನೆನೆದರು.ಸುಮಾರು 50 ವರ್ಷಗಳ ಹಿಂದೆ, 1960ರಲ್ಲಿ ರಾಮಾಯಣದಂತಹ ಕೃತಿಯನ್ನು ರೂಪಾಂತರಿಸಿ ರಂಗದಲ್ಲಿ ಪ್ರಯೋಗಿಸಿದ ಕೀರ್ತಿ ರಷ್ಯಾದ್ದು ಎಂದು ಸಾಂಸ್ಕೃತಿಕ ಖಾತೆ ಉಪಸಚಿವ ಆ್ಯಂಡ್ರಿ ಬಸಿಜಿನ್ ಬಣ್ಣಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT