ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ಈಗ ಹೊಸ ಸಮಯ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

 ಮಾಸ್ಕೊ (ಇತಾರ್-ತಾಸ್): ರಷ್ಯಾದಲ್ಲಿ ಸೆ.1ರಿಂದ ಹೊಸ ಸಮಯ ಜಾರಿಗೆ ಬಂದಿದೆ. ಈ ಹಿಂದೆ ಸೋವಿಯತ್ ಕಾಲದಿಂದಲೂ ಅನುಸರಿಸುತ್ತಿದ್ದ `ಸಮಯ ಪಟ್ಟಿ~ ಪದ್ಧತಿಗೆ ಬದಲಾಗಿ `ಸಮಯ ವಲಯ~ ಪದ್ಧತಿ ಅಳವಡಿಸಲಾಗಿದೆ.

ಈ ಮುಂಚೆ ರಷ್ಯಾದಲ್ಲಿ ಒಂಬತ್ತು ಸಮಯ ಪಟ್ಟಿಗಳು ಇದ್ದವು. ಈಗ ಅದಕ್ಕೆ ಬದಲಾಗಿ ಒಂಬತ್ತು ಸಮಯ ವಲಯಗಳು ಅಸ್ತಿತ್ವಕ್ಕೆ ಬಂದಿವೆ. ಹಿಂದಿದ್ದ ಪ್ರದೇಶ ವ್ಯಾಪ್ತಿ ಹಾಗೂ ಪ್ರಸ್ತುತ ಪ್ರದೇಶ ವ್ಯಾಪ್ತಿಯಲ್ಲಿ ಬದಲಾವಣೆಗಳು ಆಗಿವೆ. ರಾಷ್ಟ್ರದ ರಾಜಧಾನಿ ಮಾಸ್ಕೊವನ್ನು ಕೇಂದ್ರಬಿಂದುವಾಗಿಸಿಕೊಂಡು ಈ ಸಮಯ ವಲಯಗಳನ್ನು ವಿಂಗಡಿಸಲಾಗಿದೆ.

ಮ್ಯಾಗದನ್, ಕಾಮಚತ್ಕ, ಚುಕೋತ್ಕ ಮತ್ತು ಸಖಲಿನ್ ವಲಯಗಳು ಪೂರ್ವ ದಿಕ್ಕಿನ ತುತ್ತ ತುದಿಯಲ್ಲಿ ಬರುತ್ತವೆ. ಮಾಸ್ಕೊದಲ್ಲಿ ಮಧ್ಯಾಹ್ನ 3 ಗಂಟೆಯಾಗಿದ್ದಾಗ ಈ ವಲಯಗಳ ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯಾಗಿರುತ್ತದೆ.

ಈ ಮುಂಚೆ ಒಂದೇ ಸಮಯ ಪಟ್ಟಿಯ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಸಮಯ ಇತ್ತು. ಆದರೆ ಇದೀಗ ಇಡೀ ಸಮಯ ವಲಯ ವ್ಯಾಪ್ತಿಯ ಎಲ್ಲೆಡೆ ಒಂದೇ ಸಮಯ ಇರುತ್ತದೆ. ರಾಜಧಾನಿಯೊಂದಿಗಿನ ಸಮಯದ ಅಂತರ ಇಳಿಸುವುದು ಈ ಬದಲಾವಣೆಯ ಪ್ರಮುಖ ಉದ್ದೇಶ ಎಂದು ಹೇಳಲಾಗಿದೆ.

ಈ ಕ್ರಮದಿಂದ ರೈಲು, ವಿಮಾನಗಳ ವೇಳಾಪಟ್ಟಿ ಸಿದ್ಧಗೊಳಿಸಲು ಹಾಗೂ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಕೂಲವಾಗಲಿದೆ ಎಂದೂ ಹೇಳಲಾಗಿದೆ.ಆದರೆ ತಜ್ಞರು ಮಾತ್ರ ಈ ಬದಲಾವಣೆ ಬಗ್ಗೆ ಅಷ್ಟೇನೂ ಉತ್ಸಾಹದ ಮಾತುಗಳನ್ನು ಆಡಿಲ್ಲ. ಯಕುಟಿಯಾ ವಲಯ ಹೊರತುಪಡಿಸಿ ಬೇರ‌್ಯಾವ ವಲಯಗಳಿಗೂ ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT