ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಕೊರತೆ: ರೈತರ ಪರದಾಟ

Last Updated 17 ಸೆಪ್ಟೆಂಬರ್ 2011, 9:00 IST
ಅಕ್ಷರ ಗಾತ್ರ

ಗುಡಿಬಂಡೆ: ರಸಗೊಬ್ಬರದ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿ ನಾದ್ಯಂತ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಗೊಬ್ಬರಕ್ಕಾಗಿ ಪರದಾಡುತ್ತಿರುವ ರೈತರು ಚೀಲ ಹಿಡಿದು ಊರೂರು ಅಲೆಯುತ್ತಿದ್ದಾರೆ.

`ಪ್ರತಿವರ್ಷ ಬಿತ್ತನೆಗೆ ಸರಿಯಾಗಿ ವಿವಿಧ  ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಟಿಎಪಿಸಿ ಎಂಎಸ್‌ಗೆ ಬೇಡಿಕೆಗೆ ಅನುಗುಣವಾಗಿ ಪೂರೈಸಿಲ್ಲ. ಇದರಿಂದ ಸಮಸ್ಯೆ ಉಲ್ಪಣಗೊಳ್ಳಲು ಕಾರಣ ಎಂದು ಖಾಸಗಿ ವ್ಯಾಪಾರಸ್ಥರು ಸಬೂಬು ಹೇಳುತ್ತಿದ್ದಾರೆ~ ಎನ್ನುತ್ತಾರೆ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ರೈತ ಮುಖಂಡ ಕೆ.ಅಶ್ವತ್ಥರೆಡ್ಡಿ.

`ಯಾವುದೇ ಸಬ್ಸಿಡಿ ಸಾಲ ನಮಗೆ ದೊರೆತಿಲ್ಲ. ಕೃಷಿ ಉಪಕರಣ ಹಾಗೂ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವುದಕ್ಕೆ ಕೃಷಿ ಇಲಾಖೆ ವಿಫಲವಾಗಿದೆ.

ರೈತರಿಗೆ ಅತ್ಯಗತ್ಯವಾದ ಯೂರಿಯಾ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು~ ಎನ್ನುವುದು ರೈತರ ಒತ್ತಾಯ.

ವ್ಯತ್ಯಯ: ಕೃಷಿ ಇಲಾಖೆಯ ನಿರ್ದೇಶನ ಹಾಗೂ ಸೂಚನೆಯಂತೆ  ದಾಸ್ತಾನು ಮಾಡಿ ಮಾರಾಟ ಮಾಡು ತ್ತಿದ್ದ ಟಿಎಪಿಸಿಎಂಎಸ್‌ಗೆ  ರಸಗೊಬ್ಬರ ವನ್ನು ಸಂಬಂಧಪಟ್ಟವರು ಪೂರೈಸಿಲ್ಲ ಎನ್ನುವುದು ರೈತರ ದೂರು.
`ರೈತರಿಗೆ ತೊಂದರೆಯಾಗದಿರಲಿ ಎಂದು ಕೆಎಸ್‌ಸಿಎಂಎಫ್‌ನಿಂದ  75 ಟನ್ ಗೊಬ್ಬರ ಖರೀದಿಸಿ ತರಲಾಗಿದೆ. ಡಿಎಪಿ, ಕಾಂಪ್ಲೆಕ್ಸ್ ಸಹ ದಾಸ್ತಾನು ಇದೆ~ ಎಂದು ಸೊಸೈಟಿ ಕಾರ್ಯದರ್ಶಿ ಕೆ.ಟಿ.ನಂಜುಂಡಪ್ಪ ತಿಳಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT