ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಮಾರುಕಟ್ಟೆ ಸಮಸ್ಯೆ: `ರೊಬೊಬ್ಯಾಂಕ್' ವರದಿ

ಯೂರಿಯಾ ಉತ್ಪಾದನೆ ಹೆಚ್ಚಳ ಪರಿಣಾಮ
Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ರಾಸಾಯನಿಕ ಗೊಬ್ಬರವನ್ನು ಅತ್ಯಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಭಾರತ, ಅಮೆರಿಕ ಮತ್ತು ಬ್ರೆಜಿಲ್ ಮೊದಲಾದ ದೇಶಗಳಲ್ಲಿ ಯೂರಿಯಾ ಉತ್ಪಾದನೆ ಪ್ರಮಾಣ ಹೆಚ್ಚುತ್ತಿರುವುದು ಜಾಗತಿಕ ಗೊಬ್ಬರ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. 2015ರ ನಂತರದಲ್ಲಂತೂ ವಿಶ್ವ ರಸಗೊಬ್ಬರ ಮಾರುಕಟ್ಟೆ ಭಾರಿ ಸಮಸ್ಯೆ ಎದುರಿಸಲಿದೆ ಎಂದು ವರದಿಯೊಂದು ಗಮನ ಸೆಳೆದಿದೆ.

`ರೊಬೊಬ್ಯಾಂಕ್' ಪ್ರಕಟಿಸಿದ ಇತ್ತೀಚಿನ ಅಧ್ಯಯನ ವರದಿ, 2105ರ ನಂತರದ ದಿನಗಳು ಜಾಗತಿಕ ಯೂರಿಯಾ ಮಾರುಕಟ್ಟೆ ಪಾಲಿಗೆ ಹೊಸ ಶಕೆಯ ಆರಂಭ ಎಂದು ಅಭಿಪ್ರಾಯಪಟ್ಟಿದೆ.

ಭಾರತ, ಅಮೆರಿಕ, ಬ್ರೆಜಿಲ್‌ನಲ್ಲಷ್ಟೇ ಅಲ್ಲ, ಕಡಿಮೆ ವೆಚ್ಚದಲ್ಲಿ ರಸಗೊಬ್ಬರ ತಯಾರಿಸುವ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿಯೂ ಯೂರಿಯಾ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದು, ಸದ್ಯ ಅತ್ಯಧಿಕ ಪ್ರಮಾಣದಲ್ಲಿ ಗೊಬ್ಬರ ಆಮದು ಮಾಡಿಕೊಳ್ಳುತ್ತಿರುವ ಮೂರು ದೇಶಗಳನ್ನು ಸ್ವಾವಲಂಬಿಯಾಗಿಸಲಿದೆ. ಪರಿಣಾಮ ವಿಶ್ವದ ಗೊಬ್ಬರ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ವರದಿ ಭವಿಷ್ಯ ನುಡಿದಿದೆ.

ಅಮೆರಿಕದಲ್ಲಿ ಶೇಲ್ ಅನಿಲ ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳ, ಬ್ರೆಜಿಲ್‌ನಲ್ಲಿ ಹೊಸ ಶೇಲ್ ಅನಿಲ ನಿಕ್ಷೇಪಗಳು ಪತ್ತೆಯಾಗಿರುವುದು ಹಾಗೂ ಭಾರತದಲ್ಲಿ ರಸಗೊಬ್ಬರ ತಯಾರಿಕೆ ಚಟುವಟಿಕೆಗೆ ಸರ್ಕಾರದಿಂದ ಆರ್ಥಿಕ ನೆರವು ಹೆಚ್ಚಿಸಿರುವುದು ಮತ್ತು  ಮಧ್ಯಪ್ರಾಚ್ಯದಲ್ಲಿ ಕಡಿಮೆ ವೆಚ್ಚದಲ್ಲಿ ನೈಸರ್ಗಿಕ ಅನಿಲ ಲಭಿಸುತ್ತಿರುವುದೇ ಯೂರಿಯಾ ಉತ್ಪಾದನೆಯಲ್ಲಿನ ದಿಢೀರ್ ಹೆಚ್ಚಳಕ್ಕೆ ಮೂಲ ಕಾರಣ ಎಂದು `ರೊಬೊಬ್ಯಾಂಕ್' ಆರ್ಥಿಕ ವಿಶ್ಲೇಷಕಿ ರಾಖಿ ಸೆಹ್ರಾವತ್ ಹೇಳಿದ್ದಾರೆ.

ಈ ದೇಶಗಳಲ್ಲಿ ಇತ್ತೀಚೆಗೆ ಯೂರಿಯಾ ಉತ್ಪಾದನೆಯ 65 ಹೊಸ ಯೋಜನೆಗಳು ಪ್ರಕಟಗೊಂಡಿವೆ. ಇದು ವಿಶ್ವದ ಯೂರಿಯಾ ಉತ್ಪಾದನೆ ಪ್ರಮಾಣವನ್ನು 2020ರ ವೇಳೆಗೆ ಶೇ 30ರಷ್ಟು ಹೆಚ್ಚಿಸಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT