ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅತಿಕ್ರಮಣ ತೆರವಿಗೆ ಗ್ರಾಮಸ್ಥರ ಮನವಿ

Last Updated 23 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಲೆ ತಲಾಂತರ ಗಳಿಂದ ಸಾರ್ವಜನಿಕರು ಬಳಸುತ್ತಿದ್ದ ರಸ್ತೆಯೊಂದನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿ ಮುಚ್ಚಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ತಾಲ್ಲೂಕಿನ ಗಡಿ ಸೋಮನಾಳದ ಗ್ರಾಮಸ್ಥರು ಬುಧವಾರ ಶಿರಸ್ತೇದಾರ ಎಂ.ಎ.ಎಸ್.ಬಾಗವಾನ ಅವರಿಗೆ ಮನವಿ ಸಲ್ಲಿಸಿದರು.

ಗಡಿ ಸೋಮನಾಳ ಗ್ರಾಮದಿಂದ ತಾಂಡಾಕ್ಕೆ ಹಾಗೂ ಜಮೀನುಗಳಿಗೆ ಹೋಗಲು, ಈ ಕಚ್ಚಾ  ರಸ್ತೆಯನ್ನು ಜನರು ಬಳಸುತ್ತಿದ್ದರು. ನಿತ್ಯದ ವಹಿವಾಟಿಗೆ, ಗಡಿ ಸೋಮನಾಳ ತಾಂಡಾದ ಶಾಲಾ ಮಕ್ಕಳು ಶಾಲೆಗೆ ಹೋಗಿ ಬರಲು, ಶಿಕ್ಷಕರು ಸಹ ಇದೇ ರಸ್ತೆಯನ್ನು ಬಳಸುತ್ತಿದ್ದರು.

ಆದರೆ ಈಚೆಗೆ ರಾಮನಗೌಡ ಸಂಗನಗೌಡ ಬಿರಾದಾರ ಎಂಬುವವರು ಈ ರಸ್ತೆಯನ್ನು ಏಕಾಏಕಿ ಬಂದ್ ಮಾಡಿ ಒಡ್ಡು ಹಾಕಿ ಮುಳ್ಳು ಬೇಲಿ ಹಚ್ಚಿದ್ದರಿಂದ ತೀವ್ರ ತೊಂದರೆಯಾಗಿದೆ. ಮೂರು ಕಿ.ಮೀ. ಸುತ್ತು ಹಾಕಿ ಬರುವ ಪ್ರಸಂಗ ಉಂಟಾಗಿದೆ. ಈ ಬಗ್ಗೆ ಜನವರಿ 31 ರಂದು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.

ಕಾರಣ ರಸ್ತೆಯನ್ನು ಕೂಡಲೇ ಮತ್ತೆ ಜನತೆಯ ಮರು ಬಳಕೆಗೆ ಅನುಕೂಲ ವಾಗುವಂತೆ ಮಾಡಬೇಕು. ಅತಿಕ್ರಮಣ ಮಾಡಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಒಂದೊಮ್ಮೆ ಸೂಕ್ತ ಕ್ರಮ ಜರುಗಿಸದಿದ್ದರೆ ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಉಪವಾಸ ಸತ್ಯಾಗ್ರಹ ಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

 ನಿಯೋಗದಲ್ಲಿ ಧರ್ಮಣ್ಣ ನಾಯಕ, ಶಾಂತಗೌಡ, ಪೀಕಪ್ಪ ನಾಯಕ, ವಾಸುದೇವ ಚವ್ಹಾಣ, ದೀಪಲು ನಾಯಕ, ಶಾಂತಪ್ಪ ನಾಯಕ, ಶ್ರೀಕಾಂತ ರಾಠೋಡ, ವಿಜಯಕುಮಾರ ಜಾಧವ, ದೇವಪ್ಪ ಹಾಣಗೇರಿ, ಧರಿಯಪ್ಪ ಧೂಳೆಕಾರ, ಭೀಮನಗೌಡ ತಂಗಡಗಿ, ಪ್ರಭುಗೌಡ ವಜ್ಜಲ, ಬಾಪುಗೌಡ ಗುರಡ್ಡಿ, ನಿಂಗಣ್ಣ ತಂಗಡಗಿ, ಬಸವ ರಾಜ ನಾವದಗಿ, ಬಸನಗೌಡ ಗುರಡ್ಡಿ, ಭೀಮನಗೌಡ ಚೌಧರಿ, ಮಲ್ಲಣ್ಣ ಹಾರಿವಾಳ, ಪೀರಸಾಬ ಅವಟಿ, ಸಾಸನೂರ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT